ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಬಿ.ಕೆ.ಹಳ್ಳಿಯಲ್ಲಿ ಹಾಡಹಗಲು ಜನತೆ ನೋಡುತ್ತಿರುವಾಗಲೆ ಪಡಿತರ ತರಲು ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯನ್ನು 6 ಜನರ ಗುಂಪು ಮಾರಕ ಅಸ್ತ್ರಗಳಿಂದ ಸೋಮವಾರ ಕೊಲೆ ಮಾಡಿದೆ.
ತಾಲ್ಲೂಕಿನ ವಡ್ರೇವು ಗ್ರಾಮದ 40 ವರ್ಷ ವಯಸ್ಸಿನ ಗಂಗಾಧರ್ ಕೊಲೆಯಾದವರು.
ವಡ್ರೇವು ಗ್ರಾಮದ ವ್ಯಕ್ತಿ ಪಡಿತರ ಕೊಂಡೊಯ್ಯಲು ಬಿ.ಕೆ.ಹಳ್ಳಿ ಪಡಿತರ ವಿತರಣಾ ಕೇಂದ್ರಕ್ಕೆ ಬಂದಿದ್ದರು. ವಿತರಣಾ ಕೇಂದ್ರದ ಬಾಗಿಲು ತೆರೆಯದ ಕಾರಣ ವ್ಯಕ್ತಿ ಮುಂಭಾಗ ಕುಳಿತಿದ್ದರು. 6 ಜನರ ತಂಡ ಏಕಾ ಏಕಿ ಹರಿತವಾದ ಆಯುಧದಿಂದ ಗಂಗಾಧರ್ ಮೇಲೆ ಪ್ರಹಾರ ಮಾಡಲಾಗಿದೆ. ಹಲ್ಲೆಗೀಡಾದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದನ್ನು ಕಂಡ ಗ್ರಾಮಸ್ಥರು 6 ಜನರ ಮೇಲೆ ಕೂಗಾಡಿದೆ. ಮೃತ ದೇಹವನ್ನು ಸ್ಥಳದಿಂದ ಕೊಂಡೊಯ್ಯವಂತೆ ಜನತೆ ಆಗ್ರಹಿಸಿದ್ದಾರೆ. ಹತ್ಯೆ ಮಾಡಿದವರೆ ಮೃತದೇಹವನ್ನು ಕೊಂಡೊಯ್ದು ವಡ್ರೇವು ಗ್ರಾಮದ ಮೃತರ ಮನೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಪತಿ ಯನ್ನು ಏಕೆ ಹತ್ಯೆ ಮಾಡಿದೆ ಎಂದು ಪತ್ನಿ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಮದ ನಿಂದಿಸಿ ದೂರು ನಿಡಿದರೆ ನಿನ್ನನ್ನು ಹತ್ಯೆ ಮಾಡುತ್ತೇವೆ ಎಂದು ಹಂತಕರು ಹೆದರಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಮೃತರಿಗೆ 11 ವರ್ಷದ ಮಗಳು, 9 ವರ್ಷದ ಮಗ ಇದ್ದಾರೆ.
6 ಜನರು ಹತ್ಯೆಗೀಡಾದವರ ಸಮುದಾಯಕ್ಕೆ ಸೇರಿದವರಾಗಿದ್ದು, ಹಳೆಯ ವೈಷಮ್ಯ ಹತ್ಯೆಗೆ ಕಾರಣವಿರಬಹುದು ಎಂದು ಅನುಮಾನಿಸಲಾಗಿದೆ.
ತಿರುಮಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.