ಮಹಾವೀರ ಜೈನ್
ತುಮಕೂರು; ತುಮಕೂರು ಜಿಲ್ಲಾ ರೈತರ ಕಷ್ಟಗಳಿಗೆ ಫುಡ್ ಪಾರ್ಕ್ಸ್ ದಾರೀ ದೀಪವಾಗಬಹುದು ಎಂಬ ಅಸೆ ಕಮರಿ ಹೋಗಿದೆ. ಈಗ ಮತ್ತೊಂದು ಹೊಸ ಅಸೆ ಹುಟ್ಟಿದೆ. ಅದುವೇ ಸ್ಕಿಲ್ ಪಾರ್ಕ.
ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರಾದ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರುಗಳು ಸಂಸದ ಜಿ.ಎಸ್.ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಆರಂಭಿಸಲು ಹೊರಟಿರುವ ಸ್ಕಿಲ್ ಪಾರ್ಕ್ ನಿಜಕ್ಕೂ ಕಾರ್ಯರೂಪಕ್ಕೆ ಬರುವುದೇ ಎಂಬುದನ್ನು ನೋಡಬೇಕಾಗಿದೆ.
ಕೃಷಿ, ಹೈನೋದ್ಯಮ, ಕುಂಬಾರಿಕೆ, ಬಡಗಿ, ತೋಟಗಾರಿಕೆ ಹೀಗೆ ಸುಮಾರು 342 ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ರಪ್ತೋದ್ಯಮ, ಮಾರುಕಟ್ಟೆಗೆ ಸಂಬಂಧಿಸಿದಂತೆ ಕ್ಲಸ್ಟರ್ ಗಳನ್ನು ಆರಂಭಿಸಲು ತುಮಕೂರು ಸ್ಮಾರ್ಟ್ ಸಿಟಿ ಮುಂದಾಗಿರುವುದು ಸರಿ. ಇದು ಹೇಗಿರಬೇಕು ಎಂಬ ರೈತರನ್ನೂ ಕರೆದು ಚರ್ಚಿಸಬೇಕು.
ಸ್ಕಿಲ್ ಪಾರ್ಕನ ಉದ್ಧೇಶಗಳು ಸ್ವರ್ಗ ಎನ್ನುವ ರೀತಿ ಇದೆ. ಅದರೆ ಅಲ್ಲಿಗೆ ಕರೆದುಕೊಂಡು ಹೋಗುವವರು ಯಾರು.
ತುಮಕೂರು ಜಿಲ್ಲೆಯ ರೈತರು ವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ, ಮಾವು, ಹಲಸು, ಮುಖ್ಯವಾಗಿ ಹುಣಸೆ ಹಣ್ಣು ಸೀಸನ್ ನೋಡಿಕೊಂಡು ತರಕಾರಿ, ಕೆಲವು ಹೂವು ಬೆಳೆದರೆ ಮಳೆ ಆಶ್ರಯದಲ್ಲಿ ರಾಗಿ, ಜೋಳ, ದ್ವಿದಳ ಏಕದಳ ಧಾನ್ಯಗಳನ್ನು ಬೆಳೆಯುತ್ತಾರೆ.
ತುಮಕೂರು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗಲು ನೂರಾರು ಕೋಟಿ ಕಾಮಗಾರಿ ಗಳು ಕಣ್ಣು ಕುಕ್ಕವಂತೆ ನಡೆಯುತ್ತಿವೆ. ಜಿಲ್ಲೆಯ ರೈತರುಗಳ ಅಭಿವೃದ್ಧಿಯನ್ನು ಗುರಿಯಾಗಿ ಇಟ್ಟುಕೊಂಡು ಸಿಲ್ಕ ಪಾರ್ಕ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಕಂಪನಿಯವರು ತಿರ್ಮಾನಿಸಿ ಪೂರಕವಾದ ಯೋಜನೆಗಳನ್ನು ರೂಪಿಸುತ್ತಿರುವ ಬಗ್ಗೆ ಮಾಹಿತಿ ಹರಡಿದೆ.
ಅಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಸಮಗ್ರವಾದ ಯೋಜನೆಯನ್ನು ರೈತರ ಪರವಾಗಿ ರೂಪಿಸ ಬೇಕಾಗುತ್ತದೆ.
ಉದಾಹರಣೆಯಾಗಿ ದಕ್ಷಿಣ ಭಾರತದಲ್ಲಿ ತುಮಕೂರು ಹುಣಸೆ ಹಣ್ಣಿನ ಮಾರುಕಟ್ಟೆ ಎರಡನೇ ಸ್ಥಾನದಲ್ಲಿದೆ. ಬೆಲೆಗಳು ಪ್ರತಿವರ್ಷ ಕುಗ್ಗುವುದು ಏರುವುದು ನಡೆದು ಬೆಳೆಗಾರರಿಗೆ ನೆಮ್ಮದಿ ನೀಡದೇ ಅತಂಕ ತರುತ್ತದೆ.
ಹುಣಸೆ ಹಣ್ಣಿನ ಬೆಳೆ ಪ್ರಾರಂಭವಾದ ಕೂಡಲೇ ತಂತ್ರಜ್ಞಾನ ವನ್ನು ಉಪಯೋಗಿಸಿಕೊಂಡು ಇಳುವರಿ ಅಂದಾಜು ಮಾಡಬೇಕು. ಸ್ಥಳೀಯ ಮಾರುಕಟ್ಟೆ ಬೇಡಿಕೆಗಿಂತ ಹೆಚ್ಚು ಬೆಳೆಯಿದ್ದದು ಕಂಡು ಬಂದರೆ ಅದನ್ನು ಬೇಡಿಕೆ ಹೆಚ್ಚುಯಿರುವ ಬೇರೆ ಮಾರುಕಟ್ಟೆಗೆ ಕಳುಹಿಸುವಯೋಜನೆಯನ್ನು ರೂಪಿಸ ಬೇಕು ಎನ್ನುತ್ತಾರೆ ಹೋಸದಾಗಿ ಕೃಷಿ ನಿರತ ಯುವ ಕೃಷಿಕರು.
ಹುಣಸೆ ಹಣ್ಣಿನ ಒಂದಕ್ಕೆ ಅಲ್ಲದೇ ಇತರೆ ಬೆಳೆಗಳಿಗೆ ಈ ರೀತಿಯ ಕ್ರಮವನ್ನು ಅಳವಡಿಸಿ ಕೊಳ್ಳ ಬೇಕು ಎನ್ನುತ್ತಾರೆ.
ಸಿಲ್ಕ್ ಪಾರ್ಕನ ಮೂಲ ಉದ್ದೇಶ ತುಮಕೂರು ಜನಕ್ಕೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸ ಬೇಕು ಎನ್ನುವ ಗುರಿಯಿಂದ ರೈತರ ಹೆಸರಿನಲ್ಲಿ ಸಿಲ್ಕ್ ಪಾರ್ಕ ನಿರ್ಮಾಣವಾಗುತ್ತಿದ್ದರೆ ಕೃಷಿಕರಿಗೆ ಉಪಯೋಗವಿಲ್ಲ. ಇದು ಮತ್ತೊಂದು ಫುಡ್ ಪಾರ್ಕ ಅಗಿ ದೇಶ ವಿದೇಶಗಳಲ್ಲಿ ಪ್ರಚಾರಕ್ಕೆ ಮಾತ್ರ ಸೀಮಿ ವಾಗುತ್ತದೆ. ಅದು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದರ ರೂವಾರಿಗಳ ಮೇಲಿದೆ.