Publicstory. in
Gubbi: ಗುಬ್ಬಿ ವೀರಣ್ಣ ನವರ ಬಾಲ್ಯ ಜೀವನ ಹಾಗೂ ರಂಗಭೂಮಿಗೆ ಗುಬ್ಬಿ ಕಂಪನಿಯ ಕೊಡುಗೆ ಅಪಾರ. ಕನ್ನಡ ರಂಗಭೂಮಿ ಇತಿಹಾಸದಲ್ಲಿ ಮುಕುಟ ಪ್ರಾಯವಾಗಿದ್ದರೆ. ಡಾ. ರಾಜಕುಮಾರ್ ರವರಂಥಹ ಮೇರು ನಟರನ್ನು ಈ ನಾಡಿಗೆ ನೀಡಿದೆ.ಒಂದು ಕುಟುಂಬದಂತೆ ತಮ್ಮ ನಾಟಕ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಸಾಹಿತಿ ಆರ್.ಪಾಲಾಕ್ಷ ಹೇಳಿದರು.
ಗುಬ್ಬಿ ಕಸಾಪ ಆಯೋಜಿಸಿದ್ದ ಗುಬ್ಬಿ ವೀರಣ್ಣ ಅವರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ.ಸಾ.ಪ. ಅಧ್ಯಕ್ಷ ಶಾಂತರಾಜು ಮಾತನಾಡುತ್ತಾ, ಗುಬ್ಬಿ ವೀರಣ್ಣ ನವರ ಜನ್ಮ ದಿನದಂದೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುವುದು ಕಾಕತಾಳೀಯ. ಗುಬ್ಬಿ ವೀರಣ್ಣ ನವರು ಹೆಣ್ಣು ಮಕ್ಕಳ ಭವಿಷ್ಯ ಬಗ್ಗೆ ಕಾಳಜಿ ಇದ್ದುದರಿಂಗಾಗಿಯೇ ಈ ಶಾಲೆಯನ್ನು ಸ್ಥಾಪಿಸಿದ್ದಾರೆ.ಅವರು ಸಂಸ್ಕೃತಿ ಜೊತೆಗೆ ಸಾಮಾಜಿಕ ಕಾಳಜಿಯನ್ನು ಹೊದ್ದಿದ್ದರು ಎಂದರು.
ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರವು ಅನೇಕ ಕಾನೂನುಗಳನ್ನು ರೂಪಿಸಿದೆ.ಹೆಣ್ಣು ಮಕ್ಕಳು ಸಾಂವಿಧಾನಿಕ ಸವಲತ್ತುಗಳನ್ನು ಬಳಸಿಕೊಂಡು ಅನ್ಯಾಯದ ವಿರುದ್ಧ ಹೋರಾಡುತ್ತಾ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಮುಖ್ಯೋಪಾದಯರಾದ ಗಂಗಾಧರ್ ರವರು ಮತನಾಡಿ, ಈ ಶಾಲೆಯಲ್ಲಿ ಓದುವುದು ಹೆಮ್ಮೆಯ ವಿಚಾರ. ಗುಬ್ಬಿ ವೀರಣ್ಣನವರು ಈ ಶಾಲೆಯನ್ನು ಸ್ಥಾಪಿಸಲು ಈ ಜಾಗವನ್ನು ನೀಡಲು ಸಿದ್ಧವಿರುವುದಾಗಿ ಸರ್ಕಾರಕ್ಕೆ ಬರೆದ ಅವರ ಕೈ ಬರಹದ ಪತ್ರವನ್ನು ಈಗಲೂ ನಮ್ಮ ಶಾಲೆಯಲ್ಲಿ ಇಟ್ಟಿದ್ದೇವೆ.ಅವರ ಆಶಯವನ್ನು ನೀವು ಈಡೇರಿಸಬೇಕು.ನಿಮ್ನ ಆಲೋಚನೆಗಳು ಸ್ಮಾರ್ಟ್ ಆಗುತ್ತಾ ಹೋಗುತ್ತಿರಲಿ ಎಂದು ತಿಳಿಸಿದರು.