ಪಬ್ಲಿಕ್ ಸ್ಟೋರಿ
ತುಮಕೂರು: ಸಿಬಿ ಎಸ್ ಸಿ ಮಂಡಳಿ ಅನುಮೋದನೆ ಮಾಡಿರುವ ಪಠ್ಯ ಕ್ರಮವನ್ನು ರಾಜ್ಯ ಸರ್ಕಾರ ಮುಂದುವರೆಸಲು ಏನು ಸಮಸ್ಯೆ ಎಂದು ಹಿರಿಯ ಶಿಕ್ಷಣ ತಜ್ಜ, ನಿವೃತ್ತ ಡಿಡಿಪಿ ಐ, ಕೆ. ದೊರೈರಾಜ್ ಕೇಳಿದರು.
ತುಮಕೂರಿನಲ್ಲಿ ಭಾನುವಾರ ಹೊಸ ಪಠ್ಯ ಪುಸ್ತಕ ವಿರೋಧಿಸಿ ನಡೆದ ಪೋಷಕರು, ಚಿಂತಕರ ಸಭೆಯಲ್ಲಿ ಮಾತನಾಡಿದರು.
ಹೊಸ ಪಠ್ಯ ಸಮಿತಿಯನ್ನು ಸರ್ಕಾರ ರದ್ದುಪಡಿಸಬೇಕು. ಹಳೆ ಪಠ್ಯವನ್ನು ಮುಂದುವರಿಸಬೇಕು. ಈ ಸಂಬಂಧ ಜನ ಸಮುದಾಯ ಹೋರಾಟಕ್ಕೆ ದುಮುಕಬೇಕು ಎಂದರು.
ಬರಗೂರು ರಾಮಚಂದ್ರಪ್ಪನವರು ನಮ್ಮ ಜಿಲ್ಲೆಯವರು. ಅವರು ಅಪರೂಪದ ಚಿಂತಕರು. ಅವರ ಚಿಂತನೆಗಳನ್ನು ಮುಲೆಗುಂಪು ಮಾಡಬೇಕು ಎಂಬುದೇ ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಇಡೀ ನಾಡಿಗೆ, ವಿಶ್ವಕ್ಕೆ ಸಂದೇಶ ಸಾರಿದ ಕುವೆಂಪು ಅವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಕುವೆಂಪು ಅವರ ಪ್ರತಿಪಾದನೆ ಕರ್ನಾಕಟದ ಪರಂಪರೆಯಾಗಿದೆ. ಇದು ಜಗತ್ತಿಗೆ ಹೇಳಬಹುದಾದ ಪ್ರತಿಪಾದನೆಯಾಗಿದೆ. ಕುವೆಂಪು ಅವರನ್ನು ಟಾರ್ಗೆಟ್ ಮಾಡಲಾಗಯತ್ತಿದೆ. ಒಕ್ಕಲಿಗರು ಈಗ ಸ್ವಲ್ಪ ಎಚ್ಚೆತ್ತಿದ್ದಾರೆ. ಒಕ್ಕಲಿಗರ ಸ್ವಾಮೀಜಿವರಾದ ನಿರ್ಮಲಾನಂದ ನಾಥ ಸ್ಚಾಮೀಜಿ ದನಿ ತೆಗೆದಿದ್ದಾರೆ ಎಂದರು.
ಅದೆಂಥ ಸಾಹಿತ್ಯ ಪರಿಷತ್. ಕುವೆಂಪು ಅವರನ್ನು ಅನುಮಾನಿಸಿದರು ಉಸಿರೆತ್ತದ ಸಾಹಿತ್ಯ ಪರಿಷತ್ ಬಾಗಿಲು ಮುಚ್ಚಿಕೊಂಡು ಹೋಗಲಿ. ಕುವೆಂಪು ಸಾಹಿತ್ಯದ ವಿಮರ್ಶೆಗೆ ಸ್ವತಃ ಕುವೆಂಪು ಸ್ವಾಗತಿಸುತ್ತಿದ್ದರು. ನಾಡು ನುಡಿಯ ಅವಮಾನಿಸುವ ವ್ಯಕ್ತಿಗೆ ಸರ್ಕಾರ ಪಟ್ಟಕಟ್ಟಿದೆ. ಇಂತ ಸರ್ಕಾರವನ್ನು ನಾವು ಒಪ್ಪಿಕೊಳ್ಳಬೇಕೆ ಎಂದು ಪ್ರಸ್ನಿಸಿದರು.
ಮುಗ್ದ ಮಕ್ಕಳ ಜೊತೆ ಚೆಲ್ಲಾಟ ಬೇಡ. ಇಂಥ ಸರ್ಕಾರವನ್ನು ಬುದ್ದಿ ಕಲಿಸುವ ಶಕ್ತಿ ಜನರಿಗಿದೆ ಎಂದರು.
ವ್ಯಾಪಕವಾಗಿ ಜನರು ಚರ್ಚೆ ಮಾಡಬೇಕು. ತಾಯಿ ಅನ್ನುವುದು ಎಡ ನಾ ಬಲ ನಾ. ಭಾಷೆ ಅನ್ನೋದು ಎಡ ನಾ, ಬಲ ನಾ ಎಂದು ಕೇಳಬೇಕಾಗಿದೆ ಎಂದರು.
ವೈದಿಕಶಾಹಿಯನ್ನು ನಾವು ವಿರೋಧಿಸಲೇಬೇಕಾಗಿದೆ ಎಂದರು.
ಮೇ 31ರಂದು ನಡೆಯುವ ಪಠ್ಯ ಸಮಿತಿ ವಿರೋಧಿಸಿ ನಡೆಯುವ ಹೋರಾಟಕ್ಕೆ ಜಿಲ್ಲೆಯ ಜನರು ಹೆಚ್ಚಾಗಿ ಬೆಂಬಲಿಸಬೇಕು. ಜನ ಸಾಮಾನ್ಯರಿಗೆ ಈ ಬಗ್ಗೆ ತಿಳುವಳಿಕೆ ನೀಡುವ ಕೆಲಸವನ್ನು ಸಂಘಟನೆಗಳು ಮಾಡಬೇಕು ಎಂದರು.