ಪಾವಗಡ: ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸರ್ಕಾರ ನಿಗದಿ ಪಡಿಸಿರುವ ಕಾನೂನುಗಳಲ್ಲಿ ಸಾರ್ವಜನಿಕರು ಪಾಲಿಸಬೇಕು ಇಲ್ಲವಾದಲ್ಲಿ ದಂಡ ವಿಧಿಸಿ ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ಭಾನುವಾರ ಪುರಸಭೆ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮಾಸ್ಕ್ ಧರಿಸದಿದ್ದರೆ ಮೊದಲ ಬಾರಿ 50 ರೂ, ಎರಡನೇ ಬಾರಿ 100 ರೂ ದಂಡ ವಿಧಿಸಲಾಗುವುದು. ಅಂತರ ಕಾಯ್ದುಕೊಳ್ಳದಿದ್ದರೆ, ಗುಟ್ಕಾ, ತಂಬಾಕು ಮಾರಾಟ ಮಾಡಿದರೆ ಮೊದಲ ಸಲ 250ರೂ ಎರಡನೇ ಸಲ 500 ರೂ ದಂಡ ಹಾಕಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಮೊದಲ ಬಾರಿ 100 ಹಾಗೂ ಎರಡನೇ ಸಲ 200 ರೂ ದಂಡ. ಅಗತ್ಯವಿಲ್ಲದ ಅಂಗಡಿಗಳನ್ನು ತೆರೆದರೆ, ನಿಗದಿತ ಧರಕ್ಕಿಂತ ಹೆಚ್ಚಿನ ಧರಕ್ಕೆ ಸಾಮಗ್ರಿಗಳನ್ನು ಮಾರಾಟ ಮಾಡಿದರೆ ಮೊದಲನೆ ಸಲ 500 ರೂ, ಎರಡನೇ ಸಲ 1 ಸಾವಿರ ರೂ ದಂಡ ಹಾಕಲಾಗುವುದು ಎಂದರು.
ಪರಿಸರ ಅಭಿಯಂತರ ಮಹೇಶ್, ಸಬ್ ಇನ್ ಸ್ಪೆಕ್ಟರ್ ನಾಗರಾಜು, ಆರೋಗ್ಯ ನಿರೀಕ್ಷಕ ಶಂಷುದ್ಧಾ ಉಪಸ್ಥಿತರಿದ್ದರು.