ಒಂದು ಕಾಲದಲ್ಲಿ ತುಮಕೂರು ಜಿಲ್ಲೆಯ ರಾಜಕಾರಣಿಗಳು ರಾಜ್ಯ ರಾಜಕಾರಣ ಮೇಲೆ ಛಾಪು ಮೂಡಿಸುತಿದ್ದರು.
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಟಿಕೆಟ್ ಗಾಗಿ ಬಾಣಸಂದ್ರದ ಹುಚ್ಚೇ ಗೌಡ ರ ಮನೆ ಬಾಗಿಲಿಗೆ ಹುಡುಕಿ ಬಂದಿದ್ದರು.
ಆದ್ರೆ ಈಗ ಅಂತಹ ರಾಜಕಾರಣಿಗಳ ಕೊರತೆ ಕಲ್ಪತರು ನಾಡನ್ನು ಕಾಡುತಿದೆ. ಇದನ್ನು ನೀಗಿಸುವ ನಾಯಕರ ಯಾರಿದ್ದಾರೆ ಎಂದು ನೋಡಿದರೆ ಇಬ್ಬರ ಹೆಸರನ್ನು ಹೇಳಬಹುದು.
ಒಂದು, ಗೃಹ ಸಚಿವರಾದ Dr. G. ಪರಮೇಶ್ವರ್, ಇನ್ನೊಂದು ಹೆಸರು ಶಾಸಕರಾದ B.ಸುರೇಶಗೌಡ.
ವ್ಯವಸಾಯ ಮೂಲದ ಸುರೇಶ ಗೌಡರು ತಮ್ಮ ಕೆಲಸ, ಶ್ರಮದ ಮೂಲಕ ರಾಜ್ಯದ ಗಮನ ಸೆಳೆದ ರಾಜಕಾರಣಿ.
ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಜಿಲ್ಲೆಯ ಒಂದು ಬಣ ನಡೆಸಿದ ಎಲ್ಲ ತಂತ್ರ, ಕುಂತಂತ್ರ ಗಳನ್ನು ಮೆಟ್ಟಿ ತುಮಕೂರು ಗ್ರಾಮಾಂತರ ಕ್ಷೇತ್ರ ದಲ್ಲಿ ಗಟ್ಟಿಯಾಗಿ ನೆಲೆನಿಂತು ಎಲ್ಲರಿಗೂ ಸವಾಲು ಹಾಕಿದ ಚತುರ ರಾಜಕೀಯ ಮುತ್ಸದಿ.
ಗ್ರಾಮಾಂತರ ಕ್ಷೇತ್ರದಿಂದ ಅವರನ್ನು ಆಚೆ ಸರಿಸಲು ಎಲ್ಲ ಪಕ್ಷಗಳ ಕೆಲವು ನಾಯಕರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈ ಕಾರಣದಿಂದಲೇ ಕೆಲವೊಮ್ಮೆ ಅವ್ರು ಪಕ್ಷದ ಸ್ಥಳೀಯ ನಾಯಕರ ವಿರುದ್ಧವೇ ಸಿಟ್ಟಾಗಿದ್ದು ಉಂಟು.
ಬಿಜೆಪಿ ಗೆ ಜಿಲ್ಲೆಯಲ್ಲಿ ಒಂದು ಗಟ್ಟಿ ನೆಲೆ ತಂದುಕೊಟ್ಟ ಗಟ್ಟಿ ರಾಜಕಾರಣಿ ಅವರು. ಇದಕ್ಕಾಗಿ ಅವರು ಕೆಲವು ರಾಜಕೀಯ ವ್ಯೆರಿ ಗಳನ್ನು ಹುಟ್ಟಿಹಾಕಿಕೊಂಡರು. ಮಾಜಿ ಪ್ರಧಾನಿ ದೇವೇಗೌಡರ ರೀತಿ ಹಗಲು ರಾತ್ರಿ ರಾಜಕಾರಣ ಮಾಡುವ ಜಿಲ್ಲೆಯ ಏಕ ಮಾತ್ರ ರಾಜಕಾರಣಿ ಎಂದರೆ ಅದು ಸುರೇಶ ಗೌಡರು ಮಾತ್ರ.
ಜನರ ನಡುವೆ ನಿಂತು ಕೆಲಸ ಮಾಡುವ ಶಾಸಕ ಯಾರಾದರೂ ಇದ್ದರೆ ಅದು ಸುರೇಶ ಗೌಡರು ಮಾತ್ರ. ಇದಕ್ಕೆ ಇವನ್ನು ಉದಾಹರಿಸಬಹುದು.
ತಮ್ಮ ಕ್ಷೇತ್ರದ ಶಾಲೆಗಳಲ್ಲಿ ಕಸವನ್ನು ಸಹ ಅವರು ಗುಡಿಸಿದ್ದಾರೆ. ಬೇರೆ ಯಾವುದೇ ರಾಜಕಾರಣಿ, ಶಾಸಕರು ಗಾಂಧಿ ಜಯಂತಿ ದಿನ ಮಾತ್ರ ಕಸ ಗುಡಿಸುವ ಚಿತ್ರಕ್ಕೆ ಫೋಸು ಕೊಡುತಾರೆ. ಆದ್ರೆ ಸುರೇಶ ಗೌಡ್ರು ಆಗಲ್ಲ. ದೇಶ, ರಾಜ್ಯ ಮಟ್ಟದಲ್ಲಿ ಪ್ರಚಾರಕ್ಕೆ ಬರಬೇಕಾದ ಅನೇಕ ವಿಚಾರಗಳಲ್ಲಿ ಅವರು ದೂರವೇ ಇದ್ದಾರೆ. ಜನರ ಹೃದಯದಲ್ಲಿ ನೆಲೆ ನಿಲ್ಲಬೇಕು ಎಂದು ಪದೇಪದೇ ಅವರು ಹೇಳಿಕೊಳ್ಳುತ್ತಾರೆ.
ರಸ್ತೆಗಳನ್ನ ಹೇಗೆ ಗುಣಮಟ್ಟದಲ್ಲಿ ಮಾಡಬೇಕು ಎಂಬುದಕ್ಕೆ ಅವರು ಇಂದಿಗೂ ರಾಜ್ಯದ ಆದರ್ಶಪ್ರಾಯ ರಾಜಕಾರಣಿ.
ಸರಕಾರಿ ಶಾಲೆಗಳಲ್ಲಿ ಕ್ರಾಂತಿ ತಂದವರು. ಅವರ ಕ್ಷೇತ್ರದ ದೇವಸ್ಥಾನ ಗಳ ಅಭಿವೃದ್ಧಿ ಯಲ್ಲಿ ಅವರು ಒಂದು model creat ಮಾಡಿದ್ದಾರೆ. ಅವರ ಕ್ಷೇತ್ರದ ಪ್ರತಿ ಕೃಷಿಕನ ಬೋರೆವೆಲ್ ಗೆ ಉಚಿತ ಟ್ರಾನ್ಸ ಫಾರ್ಮ್ ರ್ ಕೊಟ್ಟ ದೇಶದ ಮೊದಲ ಶಾಸಕ ಇವರು. ಆದರೆ ಇದನ್ನೆಲ್ಲ ಅವರು ಪ್ರಚಾರಕ್ಕೆ ಮುಂದು ಮಾಡಲಿಲ್ಲ.
ತಮ್ಮ ಕೆಲಸಗಳಿಗಾಗಿ ಸುರೇಶ್ ಗೌಡರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಅವರ ಸರಕಾರ ಬರುತ್ತೆ ಎಂದು ಗೊತ್ತಾಗುತಲೇ ಇಲ್ಲಿಯ ಅವರ ಪಕ್ಷದವರು ಕೆಲವರ ಜತೆ ಸೇರಿ ಅವರನ್ನು ಸೋಲಿಸಿದರು. ಆದರೂ ಅವರು ಎದೆಗುಂದಲಿಲ್ಲ. ಮಾಜಿ ಶಾಸಕರಾದರೂ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಂದ ಕೋಟ್ಯಂತರ ರೂಪಾಯಿ ಅನುದಾನ ತರುವ ಮೂಲಕ ಶಾಸಕರುಗಳು ಹುಬ್ಬೇರುವಂತೆ ಮಾಡಿದ್ದರು.
ಅವರು ಏನು ತಪ್ಪು ಮಾಡದಿದ್ದರೂ ಅವರ ವಿರುದ್ಧದ ಅಪಪ್ರಚಾರಕ್ಕೇನು ಕೊರತೆ ಇಲ್ಲ. ಸ್ವಲ್ಪ ಸಿಟ್ಟನ್ನು ಈಗ ಕಡಿಮೆ ಮಾಡಿಕೊಂಡಿದ್ದಾರೆ.
ತುಮಕೂರಿಗೆ ಹೇಮಾವತಿ ನೀರು ಬರಲು ಕಾರಣ ಮಾಜಿ ಸಚಿವ ಹುಚ್ಚಮಾಸ್ತಿಗೌಡರು. ದೇವರಾಜ್ ಅರಸು ಕಾಲದಲ್ಲಿ ಮಂತ್ರಿ ಸ್ಥಾನವನ್ನೇ ದಿಕ್ಕರಿಸುವ ಬೆದರಿಕೆ ಹಾಕಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಕಾರಣರಾದರು. ಅದೇ ರೀತಿ ಪರಿಸರ, ಹೇಮಾವತಿ ನೀರಿನ ಬಗ್ಗೆ ಕಾಳಜಿಯಳ್ಳ ರಾಜಕಾರಣಿ ವೈ.ಕೆ.ರಾಮಯ್ಯ, ಕುವೆಂಪು ಅವರ ವಿಚಾರಧಾರೆ ಅಳವಡಿಸಿಕೊಂಡಿದ್ದ ವೈ.ಕೆ.ಆರ್. ದೇವೇಗೌಡರನ್ನು ಎದುರು ಹಾಕಿಕೊಳ್ಳುವ ಮೂಲಕ ರಾಜಕೀಯ ಪಡಸಾಲೆಯಲ್ಲಿ ಹೆಸರಾದವರು.
ಇವರಿಬ್ಬರ ಗುಣವನ್ನು ಮೇಳೈವಿಸಿಕೊಂಡಿರುವ ರಾಜಕಾರಣಿಯಾಗಿ ಸುರೇಶ ಗೌಡರನ್ನು ಈಗ ಜಿಲ್ಲೆ ನೋಡಬಹುದಾಗಿದೆ.
ಕುಣಿಗಲ್ ನಲ್ಲಿ ನೀರಿನ ರಾಜಕಾರಣದ ಮೂಲಕ ಜೈಲು ಸೇರಿ ಹೆಸರು ಮಾಡಿದ ಸುರೇಶಗೌಡರು ನಂತರ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ತಮ್ಮ ನಲೆಯಾಗಿ ರೂಪಿಸಿಕೊಂಡರು. ಈ ಹಿಂದೆ ಕುಣಿಗಲ್ ಗೆ ಸೇರಿದ್ದ ಅನೇಕ ಗ್ರಾಮಗಳು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದ ಕಾರಣ ಅವರು ತುಮಕೂರು ಗ್ರಾಮಾಂತರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ. ಪರಿಸರದ ಮೇಲೆ ವಿಶೇಷ ಪ್ರೀತಿಯೂ ಇರುವ ಸುರೇಶಗೌಡರು ಮರಳು ಗಣಿಗಾರಿಕೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ಮುಂದಾಗಿ ಒಂದು ವರ್ಗದ ಕೋಪಕ್ಕೆ ತುತ್ತಾದರು. ಇದು ರಾಜಕೀಯವಾಗಿ ಅವರಿಗೆ ತುಂಬಾ ನಷ್ಟದ ಬಾಬತ್ತು ಆಗಿತ್ತು.
ನಿನ್ನೆಯಷ್ಟೇ 60 ವರ್ಷಕ್ಕೆ ಪದಾರ್ಪಣೆ ಮಾಡಿರುವ ಸುರೇಶಗೌಡರು ತುಮಕೂರು ರಾಜಕಾರಣದಲ್ಲಿ, ರಾಜ್ಯ ರಾಜ್ಯಕಾರಣದಲ್ಲಿ ಆಗಾಗ ‘ಹಾಹಾಕಾರ’ ಉಂಟು ಮಾಡುತ್ತಲೇ ಸಾಗಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಮೂಲಕವೇ ಹೆಸರು ಗಳಿಸಿದವರು. ಜಿಲ್ಲೆಯ ಏಕೈಕ ಧೈರ್ಯವಂತ, ಚತುರ ರಾಜಕಾರಣಿ. ಅವರಿಗೆ ಸರಿ ಅನ್ನಿಸದಿದ್ದರೆ ಯಾರನ್ನು ಬಿಡುವುದಿಲ್ಲ. ರಾಜಕೀಯದಲ್ಲಿ ಅಷ್ಟೇನು ಒಳ್ಳೆಯದು ಅಲ್ಲದ ಎಲ್ಲರನ್ನು ಎದುರುಹಾಕಿಕೊಂಡು ಈಜುವ ಛಲ ಅವರ ರಕ್ತದಲ್ಲೇ ಇರುವಂತಿದೆ. ಇದನ್ನು ಅವರದೇ ಪಕ್ಷದ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯ ವಿಷಯದಲ್ಲಿ ನಾವು ನೋಡಬಹುದಾಗಿದೆ.
ಹಣ, ಹೆಂಡ ರಾಜಕಾರಣಕ್ಕೆ ಸೋಕಬಾರದು ಎಂದು ನಂಬುವ ಅವರು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರುವವರು ವಿರುದ್ಧ ಸಿಡಿದೆದಿದ್ದರು. ಸರಿಯಾಗಿ ಆಸ್ಪತ್ರೆಗೆ ಬಾರದ ವೈದ್ಯರ ವಿರುದ್ಧ, ಪಾಠ ಮಾಡದ ಶಿಕ್ಷಕರ ವಿರುದ್ಧವೂ ಕೋಪಗೊಂಡರು. ಇದರಿಂದಾಗಿಯೇ ಗ್ರಾಮಾಂತರ ಸುಶಿಕ್ಷಿತರ ಕ್ಷೇತ್ರವಾಗಿ, ಅಭಿವೃದ್ಧಿಯ ಕ್ಷೇತ್ರವಾಗಿ ಈಗ ಗಮನ ಸೆಳೆಯುವಂತಾಗಿದೆ.
ಅವರು ಕಟ್ಟಿರುವ ಸರ್ಕಾರಿ ಶಾಲೆಗಳು ಸಾರ್ವಕಾಲಕ್ಕೂ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತವೆ.
ತುಮಕೂರು ರಾಜಕಾರಣದ ಮೇಲೆ ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಅವರ ಪ್ರಭಾವ ಹೆಚ್ಚು. ಗೆಲ್ಲುವವರನ್ನು ಸೋಲಿಸಲು, ಸೋಲುವವರನ್ನು ಗೆಲ್ಲಿಸಲು ಅವರ ಪಕ್ಷಾತೀತ ತಂತ್ರಗಾರಿಕೆ ಹೆಸರುವಾಸಿಯಾಗಿದೆ. ಆದರೆ ಸುರೇಶಗೌಡರು ಇದಕ್ಕೆ ವಿರುದ್ಧದ ರಾಜಕಾರಣಿ. ಅವರು ಪಕ್ಷನಿಷ್ಠೆಯ ರಾಜಕಾರಣಿ. ಇದಕ್ಕಾಗಿ ಯಾವುದೇ ಬೆಲೆ ತೆರಲು ಸಹ ಸಿದ್ಧ. ಹೀಗಾಗಿಯೇ ಅವರು ಪಕ್ಷಕಟ್ಟಲು ಅನೇಕರನ್ನು ಎದುರುಹಾಕಿಕೊಂಡು ತಮ್ಮ ಅಭಿವೃದ್ಧಿಯ ಕ್ಷೇತ್ರದಲ್ಲಿ ಗೆಲ್ಲಲು ಸಾಕಷ್ಟು ಬೆವರು ಹರಿಸಬೇಕಾಯಿತು ಎನ್ನುವುದು ಈಗ ಇತಿಹಾಸ.
ಸ್ವಲ್ಪ ಮಾಗಿದಂತೆ ಕಾಣುವ ಸುರೇಶಗೌಡರು, ರಾಜ್ಯ ರಾಜಕಾರಣದ ಮೇಲೆ ಕಣ್ಣು ನೆಟ್ಟಿದ್ದಾರೆ ಎಂಬುದನ್ನು ಅವರ ಮಾತುಗಳೇ ಹೇಳುತ್ತವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೀಲಿಗಣ್ಣಿನ ಹುಡುಗ ಆಗಿರುವ ಸುರೇಶಗೌಡರು ಈಗಲೂ ಯಡಿಯೂರಪ್ಪ ಮಾತಿಗೆ ಎದುರಾಡುವುದಿಲ್ಲ. ಈ ಹಿಂದೆ ಲೋಕಸಭಾ ಕ್ಷೇತ್ರವೊಂದರ ಟಿಕೆಟ್ ಸಿಕ್ಕರೂ ಯಡಿಯೂರಪ್ಪ ಅವರು ಬೇಡ ಎಂದಿದ್ದಕ್ಕೆ ಸುಮ್ಮನೇ ಹಿಂದೆ ಸರಿದವರು.
ಮುಖ್ಯಮಂತ್ರಿಯಾಗುವ ಯಾದಿಯಲ್ಲಿರುವ ಡಾ.ಜಿ.ಪರಮೇಶ್ವರ್ ಅವರನ್ನೂ ಸಹ ಟೀಕಿಸದೇ ಬಿಡಲಾರರು ಸುರೇಶಗೌಡರು. ಅದೇ ರೀತಿ ಅವರೊಂದಿಗೆ ಸ್ನೇಹವನ್ನೂ ಉಳಿಸಿಕೊಳ್ಳಬಲ್ಲರು ಎಂಬುದಕ್ಕೆ ಅವರ ಈಗಿನ ಕೆಲ ನಡೆಗಳಲ್ಲಿ ಕಾಣಬಹುದು.
ಜಿಲ್ಲೆಯಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಹೋರಾಟದಲ್ಲಿ ಜಿಲ್ಲೆಯ ಕೇಂದ್ರಬಿಂದುವಾಗಿದ್ದು ಸಣ್ಣ ಮಾತೇನಲ್ಲ. ಸುರೇಶಗೌಡರನ್ನು ಜಿಲ್ಲೆಯ ಜನರು ಈಗ ದಿವಂಗತರಾದ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಅವರ ಸರಿಸಮಾನ ಸ್ಥಾನಕ್ಕೇರಿಸಿದ್ದಾರೆ. ಹೀಗಾಗಿಯೇ ನೀರಾವರಿ ವಿಚಾರದಲ್ಲಿ ಅವರು ಕರೇ ಕೊಟ್ಟರೆ ಸಾವಿರಾರು ಜನರು ಜಿಲ್ಲೆಯಲ್ಲಿ ಜಾತಿ ಅತೀತರಾಗಿ, ಪಕ್ಷಾತೀತವಾಗಿ ಸೇರುತ್ತಿದ್ದಾರೆ.
ತುಮಕೂರಿನಾದ್ಯಂತ ಪಕ್ಷಾತೀತವಾಗಿ ಅವರನ್ನು ಪ್ರೀತಿಸುವ ಸಾಮಾನ್ಯ ಜನರು ಇದ್ದಾರೆ. ಸುರೇಶಗೌಡರಂಥ ಶಾಸಕರು ನಮಗೂ ಬರಲಿ ಎಂದು ಹಂಬಲಿಸುವ ಲಕ್ಷಾಂತರ ಜನರು ತುಮಕೂರು ಜಿಲ್ಲೆಯಲ್ಲಿ ಇದ್ದಾರೆ. ಇದು ಅವರು ಶಾಸಕರಾಗಿ ನಡೆದಿರುವ ಹಾದಿಗೆ ಸಾಕ್ಷಿಯಾಗಿದೆ.
ಜಿಲ್ಲೆಯ ರಾಜಕಾರಣ ಈಗ ಸೊರಗಿದಂತಿದೆ. ಡಾ.ಜಿ.ಪರಮೇಶ್ವರ್ ಹೆಚ್ಚು ಗಟ್ಟಿಯಾಗಿ ಮಾತನಾಡದ ಪ್ರಚಾರದ ಕೇಂದ್ರಬಿಂದುವಾಗಿ ಕಾಣಿಸಿಕೊಳ್ಳಲು ಇಷ್ಟಪಡದ ರಾಜಕಾರಣಿಯಾಗಿ ಗುರುತಿಸಿಕೊಂಡರೆ, ಸುರೇಶಗೌಡರು ಇದಕ್ಕೆ ತದ್ವಿರುದ್ದ. ಯಾವಾಗಲೂ ಬಿರುಸು ಮಾತುಗಳಿಂದ, ಗಟ್ಟಿ ದನಿಯಿಂದಲೇ ಜಿಲ್ಲೆ, ರಾಜ್ಯದಗಮನ ಸೆಳೆದವರು.
ಈಗಿನ ಬಂದ ವಿಧಾನಸಭೆಯ ಅಧಿವೇಶನದಲ್ಲೂ ಗಮನ ಸೆಳೆಯುವಂತ ಮಾತುಗಳನ್ನು ಆಡಿದ್ದಾರೆ. ಸದನದಲ್ಲಿ ಅವರ ಭಾಗವಹಿಸುವಿಕೆ, ಅವರು ಎತ್ತುವ ಪ್ರಶ್ನೆಗಳು ರಾಜ್ಯದ ಗಮನ ಸೆಳೆದಿವೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಸಖ್ಯ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುರೇಶಗೌಡರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ. ಅನೇಕ ವಿಚಾರಗಳಲ್ಲಿ ಅವರು ಕುಮಾರಸ್ವಾಮಿ ಜತೆ ಗಟ್ಟಿಯಾಗಿ ನಿಂತಿರುವುದು ಸಹ ಇದೆ. ಇದು ಗ್ರಾಮಾಂತರ ಕ್ಷೇತ್ರದಲ್ಲಿ ಹೊಸ ರಾಜಕೀಯ ನಂಟಿಗೆ ಕಾರಣವಾಗಿದೆ.
ಮುಂದೆ ಏನಾದರೂ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಬಂದರೆ ಸುರೇಶಗೌಡರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದೇ ಆ ಎರಡೂ ಪಕ್ಷಗಳ ಕಾರ್ಯಕರ್ತರು ನಂಬಿದ್ದಾರೆ. ಮಾಗಿದ ರಾಜಕಾರಣಿಯಾಗಿ ಸುರೇಶಗೌಡರ ವಿಚಾರಧಾರೆಗಳು, ಅಭಿವೃದ್ಧಿಯ ದೃಷ್ಠಿಕೋನ ರಾಜ್ಯಕ್ಕೂ ಬೇಕಾಗಿದೆ. ಈ ಸರ್ಕಾರದಲ್ಲಿ ಡಾ.ಜಿ. ಪರಮೇಶ್ವರ್ ಅವರು ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ. ಇಂಥ ಸಾಧ್ಯತೆಯನ್ನು ಸುರೇಶಗೌಡರು ಸಚಿವರಾದರೆ ತುಮಕೂರು ಮತ್ತೊಮ್ಮೆ ಕಾಣಬಹುದಾಗಿದೆ.