Friday, November 22, 2024
Google search engine
Homeಜಸ್ಟ್ ನ್ಯೂಸ್ಬಹುತ್ವ ನಾಡು ಕಟ್ಟಲು ಬಸವಣ್ಣನ ಚಿಂತನೆಗಳು ಬೇಕು.- ಎಸ್.ಜಿ ಸಿದ್ಧರಾಮಯ್ಯ.

ಬಹುತ್ವ ನಾಡು ಕಟ್ಟಲು ಬಸವಣ್ಣನ ಚಿಂತನೆಗಳು ಬೇಕು.- ಎಸ್.ಜಿ ಸಿದ್ಧರಾಮಯ್ಯ.

ತುಮಕೂರು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಸವ ಅಧ್ಯಯನ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಎಸ್.ಜಿ.ಸಿದ್ಧರಾಮಯ್ಯನವರು ಇಪ್ಪತ್ತನೇ ಶತಮಾನದಲ್ಲಿ ಬಹುತ್ವ ಭಾರತವನ್ನು ಗೌರವಿಸಬೇಕು. ಈ ಬಹುತ್ವಗಳ ಕನಸನ್ನು ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ ಕಂಡಿದ್ದ. ಬಸವಣ್ಣ ತನ್ನ ಹುಟ್ಟಿನ ಹಂಗನ್ನು ತೊರೆದು ವಿಶ್ವವನ್ನು ತಬ್ಬಿ ವಿಶ್ವಗುರುವಾದ. ಜನಸಾಮಾನ್ಯರ ನಡುವೆ ಬದುಕಿದ. ಬಸವಣ್ಣನವರು ಭಜನೆಯ ವಸ್ತು ಆಗದೆ ಚಿಂತನೆಯ ದ್ರವ್ಯವಾಗಬೇಕು. ಬಸವಣ್ಣನವರ ವಿಚಾರಗಳು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅನುಸರಿಸಬೇಕು. ಚರಿತ್ರೆಯನ್ನು ಮರೆತು ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯ ಜನರ ನೋವುಗಳನ್ನು ಅರ್ಥಮಾಡಿಕೊಂಡು ಅವರ ಉದ್ಧಾರಕ್ಕಾಗಿ ಶ್ರಮಿಸಿದ. ವರ್ಣ ವ್ಯವಸ್ಥೆಯಿಂದ ಆಚೆ ಬಂದು ಧರ್ಮ ಕಟ್ಟಿ ಮಹಾ ಕ್ರಾಂತಿ ಮಾಡಿದ. ಬಸವಣ್ಣನವರ ಚಿಂತನೆಗಳು ಸರ್ವಕಾಲಿಕ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಿಕ್ಷಣ ತಜ್ಞ, ಗಾಂಧಿ ಚಿಂತಕರು, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ.ವೂಡೇ.ಪಿ.ಕೃಷ್ಣ ರವರು ಮಾತನಾಡಿ ವಿದ್ಯಾರ್ಥಿಗಳು ಚಿಂತೆ ಬಿಟ್ಟು ಚಿಂತನೆಗಳನ್ನು ಮಾಡಿ ಚಿಂತನಾ ನಾಯಕತ್ವ ಬೆಳೆಸಿಕೊಂಡು, ನಿಮ್ಮ ಚಿಂತನೆಗಳ ಸ್ವರೂಪ ದಿಂದ ಬೆಳೆಯಬೇಕು. ವಿದ್ಯಾರ್ಥಿಗಳು ಸರ್ವಜನಾಂಗದ ತೋಟವಾಗಬೇಕು ಎಂದು ತಹೇಳಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ದುಗ್ಗೇನಹಳ್ಳಿ ಸಿದ್ದೇಶ ಮಾತನಾಡಿ ಅಧ್ಯಯನ ಕೇಂದ್ರದ ಮೂಲಕ ಬಸವಣ್ಣನವರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿಚಾರವಂತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುವ ಕೆಲಸ ಮಾಡುತ್ತೇವೆ ಎಂದು ಅಧ್ಯಯನ ಕೇಂದ್ರದ ಆಶಯವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಬ್ಲ್ಯೂ. ಡಿ. ಅಶೋಕ್, ಪ್ರಾಂಶುಪಾಲರಾದ ಡಾ.ಜಗದೀಶ ಜಿ.ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವಸರಾಜು ಬಿ.ಆರ್, ಶೇಷಾದ್ರಿಪುರಂ ಶಾಲೆಯ ಪ್ರಾಂಶುಪಾಲೆ ನಂದರಾಜು ಹಾಗು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?