ತುಮಕೂರು: ಧರ್ಮಸ್ಥಳದಡಾ ವಿರೇಂದ್ರ ಹೆಗಡೆ, ಪ್ರಕಾಶ್ ಪಡುಕೋಣೆ, ಗೌತಮಾನಂದ ಜೀ, ಇಂತಹ ಮಹನೀಯರೆಲ್ಲ ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಮೌಲ್ಯಯುತ ಶಿಕ್ಷಣ ನೀಡುವುದೇ ಶೇಷಾದ್ರಿ ಪುರಂ ಶಿಕ್ಷಣ ಸಂಸ್ಥೆಗಳ ಗುರಿ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಹೇಳಿದರು.
ಇಲ್ಲಿನ ಶೇಷಾದ್ರಿಪುರಂ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ ಯಲ್ಲಿ ಶೇ 9೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಪಿಯುಸಿಗೆ ದಾಖಲಾಗಿದ್ದ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.
ನಮ್ಮ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ವಿಶ್ವದ ಅನೇಕ ದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದೆ ಎಂದರು.
ಜ್ಞಾನಾರ್ಜನೆ ನಿಮ್ಮ ಗುರಿಯಾಗಬೇಕು.
ಸಮಯದ ಮಹತ್ವವನ್ನು ಅರಿಯಬೇಕು.
ನಮ್ಮ ಶಿಸ್ತು ಬದ್ದ ಜೀವನ ನಮ್ಮ ಜೀವನವನ್ನು ಶಿಸ್ತಾಗಿ ರೂಪಿಸುತ್ತದೆ. ತಂದೆ,ತಾಯಿ, ಶಿಕ್ಷಕರನ್ನು ಗೌರವಿಸಿ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ಗೀತಾ ರಾಮಾನುಜಮ್ ಅವರು ಮಾತನಾಡಿ,
“ನಾನಿಲ್ಲಿ ಬಂದಿರುವುದು ಯುವ ಮನಸ್ಸುಗಳ ಭೇಟಿಯಾಗಲು” ಎಂದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯಿಂದ ವೈದ್ಯಕೀಯ ಕಾಲೇಜನ್ನು ತೆರೆಯಯುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ವೈಯಕ್ತಿಕ ನಿರ್ವಹಣೆ, ಸಮಯ ನಿರ್ವಹಣೆ, ಸ್ನೇಹಿತರು, ನಿಮ್ಮ ವರ್ತನೆ. ನಿಮ್ಮನ್ನು ನೀವು ಅರಿಯುವುದು ಮುಖ್ಯ ಎಂದರು.
ಯಾವುದರಲ್ಲಿ ನಮಗೆ ಶಕ್ತಿ ಇದೆಯೊ ಆಸಕ್ತಿ ಇದೆಯೊ ಆ ದಿಕ್ಕಿನಲ್ಲಿ ನಮ್ಮನ್ನು ನಾವು ನಿರಂತರವಾಗಿ ತೊಡಗಿಸಿಕೊಳ್ಳಬೇಕು. ನೀವು ನೀವಾಗೆ ಇರಿ. ಬೇರೆಯವರನ್ನು ಅನುಸರಿಸಬೇಡಿ. ಸದಾ ನಿಮ್ಮ ಗುರಿಯಕಡೆಗೆ ಸಾಗಿರಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು.
ಸಮಯ ನಿರ್ವಹಣೆಯ ಕಲೆ ಯಶಸ್ಸಿನ ಮೂಲ ಮೆಟ್ಟಿಲು ,ನಿಮ್ಮೊಳಗೆ ಅಡಗಿರುವ ಜ್ಞಾನ, ಶಕ್ತಿಯನ್ನು ನೀವೇ ಹೊರತೆಗೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಚಣದತ್ತಿಯ ಉಪಾಧ್ಯಕ್ಷರಾದ ಹೆಂಜಾರಪ್ಪ .ಟಿ .ಎಸ್, ಗೌರವ ಸಹಾಯಕ ಕಾರ್ಯದರ್ಶಿಗಳಾದ ಎಂ ಎಸ್ ನಟರಾಜು, ಟ್ರಸ್ಟಿಗಳಾದ ಕೆ. ಕೃಷ್ಣಸ್ವಾಮಿ, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ಜಿ ಟಿ, ಪ್ರಾಂಶುಪಾಲರಾದ ಬಸವರಾಜು ಬಿ ವಿ ಅವರು ಉಪಸ್ಥಿತರಿದ್ದರು.