ಕರ್ನಾಟಕ ಲೇಖಕರ ಸಂಘ (ರಿ) ತುಮಕೂರು ಜಿಲ್ಲಾ ಶಾಖೆ , ಸಾಕ್ಷಿ ಪ್ರತಿಷ್ಠಾನ ವಿಚಾರ ಮಂಟಪ ಇವರ ಸಹಯೋಗದಲ್ಲಿ ಲೇಖಕಿ ಬಯಲು ಓದು ಬಳಗದವತಿಯಿಂದ “ಯುವಜನತೆಗೆ ಬೇಕಾದ ಗಾಂಧಿ ” ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ/ ರವಿಕುಮಾರ್ ನೀಹ ಅವರು ಯುವಜನತೆಗೆ ಬೇಕಾದ ಗಾಂಧಿ ವಿಚಾರ ಕುರಿತು ಉಪನ್ಯಾಸವನ್ನು ನೀಡಿದರು. ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಲೇಖಕಿಯರ ಸಂಘದ ತುಮಕೂರಿನ ಶಾಖೆಯೂ ಪ್ರತಿ ತಿಂಗಳ ಮೂರನೆ ಶನಿವಾರ ಒಂದು ಪುಸ್ತಕ ಕುರಿತ ಓದು ಮತ್ತು ಸಂವಾದ ನಡೆಸುತ್ತಾ ಬಂದಿದೆ. ಈ ತಿಂಗಳು ಗಾಂಧೀಜಿಯವರ ಕುರಿತ ಹೊಸ ನೋಟ ಕೊಡುವ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಇಂದು ನಾವು ಗಾಂಧಿಯವರ ತತ್ವಗಳನ್ನು ನೋಡಲು ಹೊಸ ದೃಷ್ಠಿಕೋನದ ಅವಶ್ಯಕತೆ ಇದೆ. ಇಂದಿನ ಕೆಲ ಯುವಜನತೆ ಗಾಂಧಿ ತತ್ವಗಳನ್ನು ತಪ್ಪಾಗಿ ಗ್ರಹಿಸಿ ತಪ್ಪಾಗಿ ಅರ್ಥೈಸುತ್ತಿರುವ ಇಂದಿಗೆ ಗಾಂಧಿಯ ವಿಚಾರ ಅರಿವು ಅವಶ್ಯವಾಗಿ ಬೇಕಾಗಿದೆ.
ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ತುಮಕೂರು ಶಾಖೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಬಸವರಾಜು, ಓದು ಬಳಗದ ಸಂಚಾಲಕರಾದ ಆಶಾರಾಣಿ ಬಗ್ಗನಡು, ಡಾ.ಪ್ರಿಯಾಂಕ, ಪಾರ್ವತಮ್ಮ, ಮರಿಯಂಬಿ, ಲೇಖಕಿಯರ ಸಂಘದ ಕಾರ್ಯದರ್ಶಿಯಾದ ಡಾ. ಶ್ವೇತಾರಾಣಿ.ಹೆಚ್. ಮತ್ತಿತರು ಉಪಸ್ಥಿತರಿದ್ದರು.