ಡಾ. ರಜನಿ ಎಂ
ಪೋನಿ ಟೇಲ್
ನಿನ್ನ ಪೋನಿ ಟೇಲ್
ಹಾಗೆ ಹೀಗೆ
ತೂಗಾಡಿದ ಹಾಗೆ
ನನ್ನ ಹೃದಯ
ಹಾರಿ ಹಾರಿ ಕುಣಿಯುತ್ತಿತ್ತು.
ಈಗ ನಿನ್ನ
ಬಾಬ್ ಕಟ್ ನೋಡಿ
ನನ್ನ ಹೃದಯ
ಬಡಿಯುವುದು
ನಿಧಾನವಾಗಿದೆ.
ಕಣ್ಣು
ಅವಳ ಕಣ್ಣು
ಕಂದು ಅಥವಾ
ಕಡು ಕಪ್ಪು ?
ನೋಡ ಲೆಂದು
ಕಣ್ಣಲ್ಲಿ ಕಣ್ಣಿಟ್ಟು
ನೋಡಿದೆ…
ಬೆಕ್ಕಿನ ಹಾಗೆ
ಎಗರಿದಳು ….
ಅಟ್ಟಿಸಿಕೊಂಡು ಬಂದಳು …
ಇಲಿಯ ಹಾಗೆ ಓಡಿ ಹೋದೆ.
ಕೆನ್ನೆ ಗುಳಿ
ಆಕೆ ಗುಳಿ ಕೆನ್ನೆ
ಚೆಲುವೆ…
ಆದರೆ ಎಲ್ಲಿ ಹೋಯಿತು
ಕೆನ್ನೆ ಗುಳಿ ?
ಓಹ್…
ನಗಬೇಕು ಆಕೆ
ಕೆನ್ನೆ ಗುಳಿ ಬೀಳಲು ..
ನಕ್ಕಿಲ್ಲ ಆಕೆ
ಕೆನ್ನೆ ಗುಳಿ ಕಾಣಲು
ಚಂದ್ರಮ
ಬೆಳದಿಂಗಳ ರಾತ್ರಿ…
‘ಪ್ರಿಯೆ ನಿದ್ರಿಸಬೇಡ’..
ದಿಟ್ಟಿಸು ಆ ಪೂರ್ಣ ಚಂದರನನ್ನು …
ಎಷ್ಟು ಸುಂದರ…
ಮನಮೋಹಕ…
‘ಹೌದು’ ಪ್ರಿಯಾ
ನಾಳೆ ಮಧ್ಯಾಹ್ನದ
ತನಕ ನಿದ್ರಿಸುವುದು…
ಇನ್ನೂ ಸುಂದರ…
ಪೂರ್ಣ ಚಂದ್ರನ
ನೆನಪಲ್ಲಿ…
ಮುಂಗುರುಳು
ಇರಲಿ ಬಿಡು
ಸುರುಳಿ
ಸುರುಳಿ.
ನನ್ನ ನೆನಪಲ್ಲಿ
ನಾಚಿಕೆಯಲ್ಲಿ…
ಏಕೆ
ನೇರ ಮಾಡುವೆ.
ಕಾಲಿಗೆ ಬಿದ್ದು
ನನ್ನನ್ನು
ನಿನ್ನ ಕಾಲಿಗೆ
ಏಕೆ ಬೀಳಿಸುವೆ ?
ಕಂಡು ನಿನ್ನ
ಕೆರೆಯುವ ಹೆಬ್ಬೆರಳು…
ಸೋತು ಸುಣ್ಣವಾಗಿ
ಮಲಗುವೆ.