ತುಮಕೂರು:
ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಹಾಗೂ ತುಮಕೂರು ನಗರದ ಪ್ರೌಢಶಾಲೆಗಳ ಆದರ್ಶ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಶೇಷಾದ್ರಿಪುರಂ ಕಾಲೇಜಿನ ಹಳೆಯ ವಿದ್ಯಾರ್ಥಿ, ಪ್ರಸ್ತುತ ವಿಸ್ತಾರ ನ್ಯೂಸ್ ನ ವಿಶೇಷ ವರದಿಗಾರರಾದ ಶ್ರೀಯುತ ಅಭಿಷೇಕ್ ಬಿ.ವಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಕ್ಕಳನ್ನುದ್ದೇಶಿಸಿ ಮಾತನಾಡಿದರು ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ. ಗುರುಗಳು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಸುತ್ತಾರೆ. ಅವರ ಮಾತಿನಂತೆ ನಡೆದು ಜೀವನದಲ್ಲಿ ಯಶಸ್ವಿಯಾಗಿ ಎಂದರು. ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಕೆ ಕೃಷ್ಣಸ್ವಾಮಿಯವರು ಧರ್ಮದರ್ಶಿಗಳು ಶೇಷಾದ್ರಿಪುರಂ ಶಿಕ್ಷಣ ದತ್ತಿ ಇವರು ವಹಿಸಿದ್ದರು. ವಿದ್ಯಾರ್ಥಿಗಳಿಗೆ ಅನೇಕ ಹಳೆಯ ವಿದ್ಯಾರ್ಥಿ ಗಳ ಸಾಧನೆಯ ಬಗ್ಗೆ ಹೇಳಿ ಸ್ಪೂರ್ತಿಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ಶರ್ಮ ಎ ಎಂ, ಮುಖ್ಯ ಶಿಕ್ಷಕರು, ಅಂಕಿತ ಶಾಲೆ, ಛಾಯಾಶ್ರೀ ಎಂ, ಮುಖ್ಯಶಿಕ್ಷಕರು ನ್ಯಾಷನಲ್ ಹೈ ಸ್ಕೂಲ್, ಶ್ರೀಮತಿ ಚಂದ್ರಕಲಾ.ಜಿ, ಮುಖ್ಯ ಶಿಕ್ಷಕರು ಅನಿಕೇತನ ವಿದ್ಯಾಮಂದಿರ, ಶ್ರೀಯುತ ಟಿ ಶ್ರೀನಿವಾಸ್ ಮುಖ್ಯಶಿಕ್ಷಕರು, ಕನ್ನಿಕಾ ಹೈಸ್ಕೂಲ್, ಶ್ರೀಯುತ ಮಲ್ಲಿಕಾರ್ಜುನಯ್ಯ, ಮುಖ್ಯ ಶಿಕ್ಷಕರು, ಎಸ್ ಜಿ ಆರ್ ಹೈಸ್ಕೂಲ್, ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಬಿ.ವಿ ಬಸವರಾಜುರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ಜಿ ಟಿ. ಶೇಷಾದ್ರಿಪುರಂ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ನಂದಾರಾಜ್ ಅವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಶ್ರೀಮತಿ ಕಿಮ್ಶುಖ ಅವರು ನಿರ್ವಹಿ ಸಿದರು, ಡಾ. ಶ್ವೇತಾರಾಣಿ .ಹೆಚ್ ಸ್ವಾಗತಿಸಿದರು. ಶ್ರೀ ಲಕ್ಷ್ಮಿ ಪ್ರಸಾದ್ ವಂದಿಸಿದರು.