ತುರುವೇಕೆರೆ:
ಕೆಲ ವೈಯಕ್ತಿ ಹಿತಾಸಕ್ತಿಗೆ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಒಡೆದ ಮನೆಯಂತಾಗಿದ್ದು ದಲಿತ ಸಮುದಾಯದ ಸಮಗ್ರ ಏಳಿಗೆಗಾಗಿ ವಿಭಿಜಿತ ದಸಂಸಗಳು ಸೈದ್ಧಾಂತಿಕ ಮತ್ತು ತಾತ್ವಿಕವಾಗಿ ಒಗ್ಗೂಡುವ ಅನಿವಾರ್ಯತೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧಕ್ಷ ವಿ.ಟಿ.ವೆಂಕಟರಾಮ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ದಸಂಸ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭ ಹಾಗು ದಸಂಸ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲೇ ತುರುವೇಕೆರೆ ದಸಂಸ ಹೆಚ್ಚು ಕ್ರಿಯಾಶೀಲ ಹೋರಾಟಗಳನ್ನು ಹಮ್ಮಿಕೊಂಡು ದಲಿತ ಸಮುದಾಯದ ರಕ್ಷಣೆಗೆ ಮುಂದಾಗಿದೆ. ನಮ್ಮ ಕಾರ್ಯಕ್ರಮಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ ದಲಿತ ಸಮುದಾಯವನ್ನು ಆಥರ್ಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹೇಗೆ ಮುಂದೆ ತರಬೇಕು ಎಂಬುದರ ಬಗ್ಗೆ ವಾಸ್ತವೀಕ ನೆಲೆಯಲ್ಲಿ ಚಚರ್ೆ, ಸಂವಾದಗಳನ್ನು ನಡೆಸಬೇಕಿದೆ ಅದಕ್ಕಾಗಿ ಹೆಚ್ಚು ಹೊಸ ತಲೆಮಾರಿನ ದಲಿತ ಯುವಕರನ್ನು ಸಂಘಟನೆಗೆ ತಾತ್ವಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು.
ದಲಿತರು ಸಾಮಾಜಿಕ ಮತ್ತು ರಾಜಕೀಯ ಸ್ಥಾನ ಮಾನಗಳನ್ನು ಗಟ್ಟಿಗೊಳಿಸಿಕೊಳ್ಳಲು ಆಥರ್ಿಕ ಸಂಪನ್ಮೂಲ ವಧರ್ಿಸಿಕೊಳ್ಳುವ ಅಗತ್ಯವಿದ್ದು ಅದಕ್ಕಾಗಿ ಭೂರಹಿತ ದಲಿತರಿಗೆ ಸಕರ್ಾರ ಭೂಮಿ ನೀಡುವ ಕುರಿತ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ದಲಿತರು ಹೆಚ್ಚು ಹೆಚ್ಚು ಶಿಕ್ಷಣ ವಂತರಾಗಬೇಕು. ಆಮೂಲಕ ಆಡಳಿತಾತ್ಮಕ ಹುದ್ದೆಗಳನ್ನು ಹೊಂದಿ ಸಮುದಾಯದ ಯುವಕರಿಗೆ ದಾರಿ ದೀಪವಾಗ ಬೇಕು ಎಂದರು.
ಬೆನೆಕಿನಕೆರೆ ನಿವೃತ್ತ ಶಿಕ್ಷಕರಾದ ಬೋರಪ್ಪ, ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ನರಸಿಂರಾಜು ಹಾಗು ತುಮಕೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದ ಶ್ರೀ ಸೋಮೇಶ್ವರ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಡಾ.ಪಾಂಡುರಂಗಯ್ಯ ಎಚ್.ವಿ ಅವರುಗಳನ್ನು ದಸಂಸ ವತಿಯಿಂದ ಮೈಸೂರು ಪೇಟ ತೊಡಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಡಾ.ಚಂದ್ರಯ್ಯ, ರಾಮಚಂದಯ್ಯ್ರ, ಶಿವರಾಜ್, ಗುರುದತ್, ಮಲ್ಲೂರ್ ತಿಮ್ಮೇಶ್, ಗಾಂಧಿಗ್ರಾಮ ಮೂರ್ತಿ, ಧನಂಜಯ ಹುಳಿಸಂದ್ರ, ಪುಟ್ಟರಾಜು, ತಮ್ಮಯ್ಯ, ರಾಘು, ದಯಾನಂದ್, ಗೋವಿಂದರಾಜು, ಮಧು, ಮಂಜು, ಕೃಷ್ಣಪ್ಪ, ಮೇಲನಹಳ್ಳಿ ಮಂಜು, ಗಂಗಣ್ಣ, ರಾಮು, ಲಕ್ಷ್ಮೀಷ, ರಾಮಕೃಷ್ಣಪ್ಪ ಪಾಲ್ಗೊಂಡಿದ್ದರು.