Chikkanayakanahalli: ಚಿತ್ರಗಳನ್ನು ನೋಡಿ ಕಕ್ಕಾಬಿಕ್ಕಿಯಾಗಬೇಡಿ.
ಇದು ಚಿಕ್ಕನಾಯಕನಹಳ್ಳಿಯ ಮನಮೋಹಕ ಗುಡ್ಡವೊಂದರ ಚಿತ್ರಣ.
ಚಾರಣದ ಪ್ರದೇಶವಾಗಿ ವಿಖ್ಯಾತವಾಗಬೇಕಿದ್ದ ಇಂಥ ಚಿಕ್ಕನಾಯಕನಹಳ್ಳಿ ಗುಡ್ಡಗಳನ್ನು ಗಣಿಗಾರಿಕೆಗೆ ಕೊಟ್ಟು ಆ ತಾಲ್ಲೂಕಿನ ಬೆರಳಣಿಕೆಯ ಮಂದಿ ಶ್ರೀಮಂತರಾದರು. ಆದರೆ ಇಡೀ ತಾಲ್ಲೂಕಿನ ಜನರು ಅದರ ಪರಿಣಾಮ ಅನುಭವಿಸುತ್ತಿದ್ದಾರೆ. ಅಂತರ್ಜಲ ಕುಸಿದು ನೀರಿಗಾಗಿ ಬಾಯ್ಬಿಡುತ್ತಿದ್ದಾರೆ.
ಮರಗಳನ್ನು ಕಳೆದುಕೊಂಡರೂ ಸೌಂದರ್ಯದ ಖನಿಗಳೇ ಆಗಿರುವ ಗುಡ್ಡಗಳಲ್ಲಿ ಮರಗಳನ್ನು ಕಾಣುವ ಕನಸನ್ನು ಅಲ್ಲಿನ ಕೆಲವು ಕ್ರಿಯಾಶೀಲ ಹುಡುಗ-ಹುಡುಗಿಯರು ಕಾಣುತ್ತಿದ್ದಾರೆ.
ಸ್ನೇಹಿತರ ದಿನಾಚರಣೆಗೆ ಅವರು ಮೋಜು ಮಾಡಲಿಲ್ಲ. ಆದರೆ ಸೀದಾ ಬೆಟ್ಟಕ್ಕೆ ಹೋಗಿ 50 ಸಾವಿರ ಬೀಜದಗಳನ್ನು ಗುಡ್ಡದ ತುಂಬಾ ತೂರಿ ಬಂದಿದ್ದಾರೆ.
ಬೀಜಗಳು ಮೊಳಕೆ ಒಡೆದು, ಮರಗಳಾಗಿ ನೆರಳಾಗುವಂತೆ ನಮ್ಮ ಸ್ನೇಹವು ಬೆಳೆದು ಮರವಾಗಲಿ ಎಂದು ಅವರ ಕನಸು.
ಅಂದಹಾಗೆ ಈ ಕೆಲಸ ಮಾಡಿದ್ದು ಚಿಕ್ಕನಾಯಕನಹಳ್ಳಿಯ ನೆರಳು ಸಂಘಟನೆಯವರು.
ಮಹಾಗನಿ, ತೇಗ ಲ, ಕಾಡು ಬಾದಮಿ ಮತ್ತಿ, ರಕ್ತ ಚಂದನ, ಶ್ರೀ ಗಂಧ, ನೇರಳೆ,ಬುಗರಿ, ಬೀಜಗಳನ್ನು ಚಾರಣದ ಮೂಲಕ ನೇರವಾಗಿ ಗುಡ್ಡಕ್ಕೆ ಎರಚಲಾಯಿತು .
ಸಹಾಯಕ್ಕೆ ರಮ್ಯಾ, ಲಕ್ಷ್ಮಿ ಕಾಂತ, ಸಚಿನ್, ಭರತ್ ಮಂಜು, .ಶರತ್, ನಾಗರಾಜ್, ಹಾಗೂ ಹೊಸಬೀದಿ ಯುವಕರಾದ ಭಾನುಪ್ರಸಾದ್ ಸಂಜು, ಅನಿಲ್ ಕುಮಾರ್, ಹಿಮವಂತ್ ರಂಗನಾಥ್ ರೇಣುಕಾ, ಯಶೂ ಇದ್ದರು
ಆಲದ ಗಿಡವನ್ನು ಹಾಕಲಾಯಿತು.