ಡಾ// ರಜನಿ ಎಂ
ಸಾಯುವಷ್ಟು ಸುಸ್ತು….
ಎದುರಿಗೇ ಸತ್ತರು
ಯಾರ ಆಶೀರ್ವಾದವೋ
ಬೇಗ ಹುಷಾರಾಗಿ…
ಬೆಳಗಿನ ಕಾಫಿ
ಬಲು ರುಚಿ..
ಒಡವೆ ನಗಣ್ಯ
ಬೀರು ತುಂಬಾ ಸೀರೆ
ಬರುವುದು …ನಗು
ಅಭಿಮಾನಿಗಳು ಕೊಟ್ಟ
ಬುಟ್ಟಿ ಬುಟ್ಟಿ ಮಾವು,ಬೇಲದ ಹಣ್ಣು
ಗೊನೆ ಬಾಳೆ
ಘಮ ಘಮ ಕೈಮಾ ಉಂಡೆ
ತಲೆ ಕಾಲು ಸಾರು
ಬಿರಿಯಾನಿ
ಕಾಲು ಸೂಪು
ಕದ್ರಿ ನರಸಿಂಹಸ್ವಾಮಿಗೆ
ಹರಸಿಕೊಂಡ ನೆಚ್ಚಿನ ರೋಗಿ
ಫೋನಲ್ಲಿ ಧ್ವನಿ ಕೇಳಿ
ಸಮಾಧಾನ ಪಟ್ಟವರು…
ಆ ಚಾಮುಂಡಿ
ಈ ಚಾಮುಂಡಿಯ ಕೈ ಬಿಡಲ್ಲ
ಅಂದವರು
kindle ನಲ್ಲಿ
ಜೀವನದ ಸಾರ ಹೇಳುವ
ಸಂಗಾತಿ ಪುಸ್ತಕಗಳು..
ನೆಚ್ಚಿನ ಶಿಷ್ಯರ ಜೊತೆ
ಫೋನಿನಲ್ಲಿ ಹರಟೆ..
ನಗು
ಸ್ನೇಹಿತರ chat..
ಹುಷಾರು ಆದ
ಮಗುವಿನ flying kiss..
Covid ರೋಗಿ ಗೆ
ಹೇಳುವ ಸಾಂತ್ವನ
ಅಂಗಳದಲ್ಲಿ
ಯಾರೋ ಇಟ್ಟು ಹೋದ
ಹಲಸು
ಬಾಯಿಗೆ ಕಾರ ಆಗಲಿ.. ಎಂದು
ಕಳಿಸಿದ ಕೋಡುಬಳೆ
ಮುಂಗಾರು ಗುಡುಗು
ಕೋಗಿಲೆಯ ಕುಹೂ
ಎಂದೂ ಕಾಣದ
ಮುಂಜಾವು….
ಮುಖ ತೋಯಿಸಿದ ಎಳೆ
ಬಿಸಿಲು..
ಎಲ್ಲಿದ್ದವು ಇಷ್ಟು ದಿನ?
ಮತ್ತೆ ಹಿಡಿಯಲು
stethoscope ಬಲು ಪುಣ್ಯ
ಸಾಕಲ್ಲವೇ?
ಬದುಕಿ ಬಂದದ್ದಕ್ಕೆ?
ಒಬ್ಬ ವೈದ್ಯರು ಕರೋನಾದಿಂದ ಬಳಲುವಾಗ ಸ್ವತಃ ವೈದ್ಯರಾಗಿದ್ದರೂ ಕೂಡ ಸಾವು ಬರುವುದೆಂಬ ಭಯ, ಹಣ ಜೀವ ಉಳಿಸುವಲ್ಲಿ ಕೆಲಸ ಮಾಡುವುದಿಲ್ಲ ಎಂಬ ಖಾತ್ರಿ. ವೈದ್ಯರನ್ನು ವಿಚಾರಿಸಲು. ತಮ್ಮ ಕಷ್ಟ ಹೇಳಿಕೊಳ್ಳಲು ಕರೆ ಮಾಡುವ ರೋಗಿಗಳು, ಬೇಗ ಗುಣಮುಖರಾಗಿ ಎಂಬ ಆಶಯದ ನುಡಿಗಳು. ಕೊನೆಗೆ ಇಂತಹ
ಸಣ್ಣ ಪುಟ್ಟ ವಸ್ತುಗಳೇ, ಭಾವನೆಗಳೇ ಜೀವನದಲ್ಲಿ ಖುಷಿ ನೀಡುವುದು ಎಂಬ ಸತ್ಯ ಇಲ್ಲಿ ಹೊರಹೊಮ್ಮಿದೆ.
Saavu daivada nirnaya…baduki vruhtidharma munduvarisabekemba thuditha ee saalugalalli ide…