Public story
ತುರುವೇಕೆರೆ: ಪಟ್ಟಣದ ವಿರಕ್ತ ಮಠದಲ್ಲಿರುವ ಇಂಡಿಯನ್ ಪಬ್ಲಿಕ್ ಶಾಲೆಯು ಸತತ ನಾಲ್ಕನೇ ಬಾರಿಗೆ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಜ್ವಲ್ ಎಂ. ಶೇ94 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಚೈತನ್ಯ ಶೇ93 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ರುಚಿತ್ ಎಂ.ಡಿ ಮತ್ತು ಹರ್ಷಿಣಿ ಟಿ.ಕೆ ತಲಾ ಶೇ.92 ಅಂಕ ಗಳಿಸಿ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.
ನಿಶು ಶೇ.91, ಮೊಹಮ್ಮದ್ ಫುರ್ಕಾನ್ ಶೇ90 ಅಂಕ ಪಡೆದಿದ್ದಾರೆ.
ಶೇ.100 ಫಲಿತಾಂಶ ಬರಲು ಶ್ರಮವಹಿಸಿದ ಪ್ರಾಂಶುಪಾಲೆ ಪುಷ್ಪಾ ಎಸ್ ಪಾಟೀಲ್, ಸಂಸ್ಥೆಯ ಅಧ್ಯಕ್ಷರಾದ ಡಾ.ಶಿವಯೋಗೀಶ್ವರ ಮಹಾಸ್ವಾಮೀಜಿಗಳು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಐಪಿಎಸ್ ಶಾಲಾ ಆಡಳಿತಾಧಿಕಾರಿ ಡಾ.ರುದ್ರಯ್ಯ ಹೀರೇಮಠ್ ತಿಳಿಸಿದ್ದಾರೆ.