ಮಂಜುನಾಥ ತಿಪಟೂರು
ತಿಪಟೂರು; ಇಲ್ಲಿನ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಕನ್ನಡದ ಮಹತ್ವದ ಕಥೆಗಾರ ರಲ್ಲೊಬ್ಬರಾದ ಎಸ್. ಗಂಗಾಧರಯ್ಯನವರ ‘ಮಣ್ಣಿನ ಮುಚ್ಚಳ’ ಕಥಾ ಸಂಕಲನ, ಮತ್ತು ಅವರ ಮಗಳು ಸ್ಮಿತಾ ಮಾಕಳ್ಳಿಯವರ ‘ ಒಂದು ಅಂಕ ಮುಗಿದು’ ಕವನ ಸಂಕಲನ ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.
ಮುಖ್ಯ ಅತಿಥಿ ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ಕನ್ನಡ ಸಾಹಿತ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲುವಂತಿದ್ದವು. ಸಾಮಾಜಿಕ ಸಂಕಷ್ಟಗಳು, ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗು ತ್ತಿರುವ ಸಂಬಂಧಗಳು, ನಗರಕ್ಕೆ ಒಗ್ಗದ ಮನಸ್ಸುಗಳು ಅನುಭವಿ ಸುವ ತಲ್ಲಣಗಳನ್ನು ಎಳೆ ಎಳೆ ಯಾಗಿ ಬಿಡಿಸಿ, ಈ ಅಂಶಗಳೇ ಗಂಗಾಧರಯ್ಯ ನವರ ಕಥೆ ಗಳಲ್ಲಿ ರೂಪುತಳೆದಿರುವುದನ್ನು ವಿವರಿಸಿದರು.
ಅಪ್ಪಟ ಗ್ರಾಮ್ಯ ಭಾಷೆ ಯನ್ನು ಸಹಜವಾಗಿಯೇ ಬಳಸುತ್ತಲೇ ನಟರಾಜು ಬೂದಾಳು ತಿಪಟೂರಿನ ಸುತ್ತಲಿನ ೨೦ ಕಿ.ಮೀ. ವ್ಯಾಪ್ತಿಯ ಪ್ರದೇಶದ ನೆಲದ ಭಾಷೆಯ ಸೊಗಡು ಕಥಾ ಸಂಕಲನದಲ್ಲಿ ಬಳಕೆಯಾಗಿ ರುವುದನ್ನು ವಾಚಿಸುತ್ತಾ, ಇದು ಕಥೆಯೊಂದರ ಪಾತ್ರದ ಮಾತಾಗದೆ ನನ್ನ ಹಿರಿಯರ ಮಾತುಗಳೇ ಅನುರಣಿಸಿದಂತಾ
ಗುತ್ತದೆ ಎಂದರು.
ರಾಜಕೀಯದಲ್ಲಿ ಕುಟುಂಬ ರಾಜಕಾರಣ ಎಂದಾಗ ಪ್ರತಿರೋಧಿಸುವ ನಾವು ಸಾಹಿತ್ಯದಲ್ಲಿ ಮಗಳ, ಅಪ್ಪನ ಕೃತಿಗಳು ಒಂದೇ ದಿನ ಬಿಡುಗಡೆಯಾಗುವುದನ್ನು ಸಂಭ್ರಮಿಸುತ್ತೇವೆ. ಸ್ಮಿತಾರವರ ಕಾವ್ಯಾಭಿವ್ಯಕ್ತಿಯ ಗುಣ ಪ್ರಖರವಾಗಿದ್ದು, ಬಳಸಿದ ವಸ್ತು, ವಿಷಯಗಳು ಮನ ಮುಟ್ಟುವಂತಿವೆ ಎಂದರು.
ಸುಪ್ರಸಿದ್ಧ ಕತೆಗಾರ ಸುಬ್ಬು ಹೊಲೆಯಾರ್ ರವರು ಸ್ಮಿತಾ ರವರ ಹಲವು ಕವಿತೆಗಳನ್ನು ಉಲ್ಲೇಖಿಸಿ, ಸಮಕಾಲೀನ ಬೆಳವಣಿಗೆಗಳನ್ನು ಒರೆಗೆ ಹಚ್ಚುತ್ತಲೇ ಸಾಮಾಜಿಕ, ಕೌಟುಂಬಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ರೀತಿ ಅನನ್ಯವಾಗಿದೆ ಎಂದರು.
ಕಲ್ಪತರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗೀತಾಲಕ್ಷ್ಮಿಯವರು ‘ಒಂದು ಮುಗಿದ ಅಂಕ’ದ ಕವನಗಳು ಕನ್ನಡದ ಇತರೆ ಶ್ರೇಷ್ಠ ಕವಿಗಳ ಕವನ ಗಳೊಂದಿಗೆ ಹೇಗೆ ಪೂರಕವಾಗಿ, ಮುಖಾಮುಖಿಯಾಗಿ ನಿಲ್ಲುತ್ತವೆಂಬುದನ್ನು ಸ್ವಾರಸ್ಯ ಕರವಾಗಿ ವಿವರಿಸಿದರು.
ಆರಂಭದಲ್ಲಿ ಕನ್ನುಘಟ್ಟದ ಕಾಂತರಾಜು ತಂಡದಿಂದ ತತ್ತ್ವ ಪದಗಳ ಹಾಡುಗಾರಿಕೆ ಸೊಗಸಾಗಿತ್ತು. ಸುಮಾರು ಎರಡು ನೂರು ವರ್ಷಗಳಷ್ಟು ಹಳೆಯದಾದ ಸಾಂಪ್ರದಾಯಿಕ ‘ಗಣೆ’ (ಕೊಳಲು) ನುಡಿಸಿದ್ದು ವಿಶೇಷವಾಗಿತ್ತು.
ಉಜ್ಜಜ್ಜಿ ರಾಜಣ್ಣ ಕಾರ್ಯಕ್ರಮ ನಿರೂಪಿಸಿ, ಗಂಗಾಧರಯ್ಯ ನವರು ವಂದನೆ ಸಲ್ಲಿಸಿದರು. ‘ಪಲ್ಲವ’ ಪ್ರಕಾಶನದ ವೆಂಕಟೇಶ್ ಕಾರ್ಯಕ್ರಮ ದಲ್ಲಿ
ಹಾಜರಿದ್ದರು.