ಬಹುರೂಪಿ’ ಕೃತಿ ಬಿಡುಗಡೆಯಲ್ಲಿ ಡಾ ಮಿರ್ಜಾ ಬಷೀರ್
ಬೆಂಗಳೂರು: ಗ್ರಾಮೀಣ ಭಾರತದ ಕನಸುಗಳು ಮುರುಟಿ ಹೋಗುತ್ತಿರುವ ಈ ಸಮಯದಲ್ಲಿ ಅದರ ತಲ್ಲಣಗಳಿಗೆ ಲೇಖಕರು ಕನ್ನಡಿ ಹಿಡಿಯಬೇಕು ಎಂದು ಸಾಹಿತಿ, ವೈದ್ಯ ಡಾ ಮಿರ್ಜಾ ಬಷೀರ್ ಅವರು ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಸರೋಜಿನಿ ಪಡಸಲಗಿ ಅವರ ಕೃತಿ ‘ಡಾಕ್ಟರ್ ಹೆಂಡತಿ’ಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾರತದಲ್ಲಿಯೇ ಸೇವೆ ಮಾಡಬೇಕೆಂದು ಆಯ್ಕೆ ಮಾಡಿಕೊಂಡು ಹೊರಟ ವೈದ್ಯರ ಅನುಭವ, ಹಾಗೆಯೇ ಅವರ ಕುಟುಂಬದ ಆತಂಕ, ತಲ್ಲಣಗಳು ಇದರಲ್ಲಿ ಮಡುಗಟ್ಟಿವೆ ಎಂದು ಅವರು ತಿಳಿಸಿದರು.
ವೈದ್ಯ ವೃತ್ತಿ ಇಂದು ವ್ಯಾಪಾರವಾಗಿರುವ ಸಂದರ್ಭದಲ್ಲಿ ಗ್ರಾಮೀಣ ಜನರ ಬದುಕು ಉಳಿಸಲು ಹೊರಟ ಈ ವೈದ್ಯ ಕುಟುಂಬದ ತಲ್ಲಣಗಳ ಈ ಕೃತಿ ಶ್ಲಾಘನಾರ್ಹ ಎಂದು ಕೃತಿ ಕುರಿತು ಮಾತನಾಡಿದ ಲೇಖಕಿ ವಾಸಂತಿ ಪ್ರಭಾಕರ ನಾಯಕ್ ಅಭಿಪ್ರಾಯಪಟ್ಟರು.
ಆರೋಗ್ಯದ ಬೆಳಕಿನ ಕಿರಣಗಳು ಇಂದು ಎಲ್ಲರಿಗೂ ಸಿಗದ ಹತಾಶ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಈ ಕೃತಿ ಭರವಸೆ ಮೂಡಿಸುತ್ತದೆ ಎಂದರು.
ಕೃತಿಯ ಲೇಖಕಿ ಸರೋಜಿನಿ ಪಡಸಲಗಿ ಅವರು ಮಾತನಾಡಿ ಈ ಕೃತಿ ನನ್ನ ಒಳಗನ್ನು ಕಲಕಿದೆ. ಇಲ್ಲಿ ನನ್ನ ಸಂಭ್ರಮ, ತಲ್ಲಣ ಎರಡೂ ಮಡುಗಟ್ಟಿದೆ ಎಂದರು.
‘ಬಹುರೂಪಿ’ಯ ಮುಖ್ಯಸ್ಥರಾದ ಜಿ ಎನ್ ಮೋಹನ್, ವೈದ್ಯ ಸುರೇಶ್ ಪಡಸಲಗಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೃತಿ: ಡಾಕ್ಟರ್ ಹೆಂಡತಿ
ಲೇಖಕರು: ಸರೋಜಿನಿ ಪಡಸಲಗಿ
ಪುಟ: 144
ಬೆಲೆ: ರೂ 180
ಪ್ರಕಾಶಕರು: ಬಹುರೂಪಿ
70191 82729