ತುಮಕೂರು: ನಗರದ ಶಿರಾಗೇಟ್, ಲಿಂಗಾಪುರ ಹಾಗೂ ತುಮಕೂರು ಇಲ್ಲಿ ಆರ್ಕಿಡ್ ಇಂಟರ್ ನ್ಯಾಶನಲ್ ಸ್ಕೂಲ್ ಎನ್ನುವ ಹೆಸರಿನಲ್ಲಿ ಖಾಸಗೀ ಶಾಲಾ ಆಡಳಿತ ಮಂಡಳಿಯಿಂದ ೨೦೨೨-೨೩ನೇ ಸಾಲಿನಲ್ಲಿ ಹೊಸದಾಗಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ, ಇಲಾಖಾ ನಿಯಮಾನುಸಾರ ಅಗತ್ಯ ಮಾನದಂಡಗಳನ್ನು ಪೂರೈಸಿಲ್ಲದ ಕಾರಣ ಈ ಶಾಲೆಗಳಿಗೆ ಪ್ರಸ್ತುತ ಶೈಕ್ತಣಿಕ ವರ್ಷದಲ್ಲಿ ಶಾಲೆ ಪ್ರಾರಂಭಿಸಲು ಅನುಮತಿ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಸದರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಬಾರದು. ಇದನ್ನು ಮೀರಿ ಪೋಷಕರು ಮಕ್ಕಳನ್ನು ಮೇಲ್ಕಾಣಿಸಿದ ಶಾಲೆಗೆ ದಾಖಲು ಮಾಡಿದರೆ ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.