ಪಾವಗಡ ಪಟ್ಟಣದ ಏಡಿ ಕಾಲೋನಿಯಲ್ಲಿ ಇರುವಂತಹ ವನಜ ಎನ್ನುವಂತಹ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ಇಂದು ಅವರಿಗೆ ಹೆಲ್ಪ್ ಸೋಸೈಟಿ, ರೋಟರಿ ಸಂಸ್ಥೆ, ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗಿದೆ.
ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ನಡೆದಂತಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷರಾದ ಕಮಲ್ ಬಾಬು ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಉತ್ತಮವಾದಂತಹ ಗುರಿಯನ್ನು ಸಾಧಿಸುವಂತಾಗಬೇಕೆಂದು ಮತ್ತು ನೆರೆದಿದ್ದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕ ಮಾತುಗಳನ್ನಾಡಿದ್ದಾರೆ .
ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಶನಿಮಹಾತ್ಮ ಕಾರ್ಯನಿರ್ವಾಹಕ ಸಂಘದ ಅಧ್ಯಕ್ಷರಾದ ಕೆ ವಿ ಶ್ರೀನಿವಾಸ್ ಅವರು ಭಾಗವಹಿಸಿ ಮಾತನಾಡಿದರು ಪಾವಗಡ ತಾಲೂಕಿಗೆ ಚಿನ್ನದ ಪದಕವನ್ನು ತಂದುಕೊಟ್ಟಂತಹ ವನಜ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಎಸ್ ಎಸ್ ಕೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ನಮ್ಮ ಕಾಲೇಜಿನ ಸಿಬ್ಬಂದಿ ವನಜ ಅವರಿಗೆ ಅತ್ಯುತ್ತಮ ಸಹಕಾರ ನೀಡಿದ್ದರು ಜೊತೆಗೆ ಅವರಿಗೆ ಬೇಕಿಇರುವಂತಹ ಸೌಲಭ್ಯಗಳನ್ನು ಸಹ ಒದಗಿಸಿ ಕೊಟ್ಟಿದ್ದರು ಇದು ನಮ್ಮ ಕಾಲೇಜು ಹಾಗೂ ನಮ್ಮ ಪಾವಗಡದ ಪಾಲಿಕೆಗೂ ಒಂದು ರೀತಿಯಾದಂತಹ ಖುಷಿ ತಂದುಕೊಟ್ಟಿದೆ ಎಂದು ಅವರು ಇದೇ ವೇಳೆ ಕೊಂಡಾಡಿದರು
ಇನ್ನು ಇದೇ ವೇಳೆ ಮಾತನಾಡಿದ ರೋಟರಿ ಸಂಸ್ಥೆಯಅಧ್ಯಕ್ಷರು ಮತ್ತು ಬ್ರೈಟ್ ಫ್ಯೂಚರ್ ನ ವ್ಯವಸ್ಥಾಪಕರಾದ ಶ್ರೀಧರ್ ಗುಪ್ತಾ ಅವರು ನಕ್ಷತ್ರದಲ್ಲಿ ಹಲವು ನಕ್ಷತ್ರಗಳು ಇರುತ್ತವೆ ಅದರಲ್ಲಿ ಮಿನುಗುವ ನಕ್ಷತ್ರ ಮಾತ್ರ ಧ್ರುವತಾರೆ ಎಂದು ಅವರು ಬಣ್ಣಿಸಿದ್ದಾರೆ ಜೊತೆಗೆ ಅವರಿಗೆ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಉಚಿತವಾಗಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ .
ಇನ್ನು ಇವನು ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ್ ಗುಪ್ತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಾರಪ್ಪ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅನಿಲ್ ಕುಮಾರ್ ರೋಷ್ನಿ ಚಂದ್ರಕಲಾ ಶಿವಣ್ಣ ಸಂದ್ಯಾ ಹಾಗೂ ಇದೇ ವೇಳೆ ಬ್ರೈಟ್ ಫ್ಯೂಚರ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು .