ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷದ
ಆಟದ ವಸ್ತುಗಳಲ್ಲ.
ಅವರಲ್ಲಿ ವಸ್ತುನಿಷ್ಠವಾದ, ವೈಜ್ಞಾನಿಕವಾದ, ದೇಶ ಪ್ರೇಮದ ಚಿಂತನೆಗಳನ್ನು ಹಚ್ಚುವ ಕಿಚ್ಚು ಪಠ್ಯ ಪುಸ್ತಕಗಳಿಗೆ ಇರುತ್ತದೆ.
ಉತ್ಕೃಷ್ಟ ಸಾಹಿತಿಗಳಿಗೆ ಕನ್ನಡದಲ್ಲಿ ಬರವಿಲ್ಲ.
ಚರ್ಚೆಗೆ ಬಂದಿರುವ ಕವಿ, ಲೇಖಕರು ಬರೀ
ಬೆರಳೆಣಿಕೆಯಷ್ಟು. ಪಠ್ಯ ಪರಿಷ್ಕರಣ ಸಮಿತಿ ಪೋಷಕರು, ಸಾಹಿತಿಗಳು, ಶಿಕ್ಷಣ ತಜ್ಞರನ್ನು, ಚರಿತ್ರೆ ತಜ್ಞರು, ವಿಜ್ಞಾನಿಗಳನ್ನು, ಭಾಷಾ ತಜ್ಞರನ್ನು ಒಳಗೊಂಡಿರಬೇಕು.
ಇತಿಹಾಸವನ್ನು ಕೂಡ ಈಗ ಚರ್ಚಿಸುತ್ತಿರುವರು
ಅಷ್ಟೇ ಸೃಷ್ಠಿಸಿಲ್ಲ. ಮೈಸೂರು ಮಹಾರಾಜರು ಕೂಡ ಸೃಷ್ಟಿಸಿದ್ದಾರೆ. ಅದೇ ರೀತಿ ಬೆಳವಡಿ ಮಲ್ಲಮ್ಮ , ಕಿತ್ತೂರು ಚೆನ್ನಮ್ಮ, ಸಾವಿತ್ರಿ ಭಾಯಿ ಫುಲೆ , ಮಾಗಡಿ ಕೆಂಪೆಗೌಡ ಕೂಡ.
ಕಾರ್ಗಿಲ್ ಯುದ್ಧ ಈಗಿನ ಮಕ್ಕಳಿಗೆ ಚರಿತ್ರೆಯೇ ಹೌದು.
ಅದೇ ರೀತಿ ಯುಕ್ರೇನ್ ಯುದ್ಧ ಮತ್ತು ಇಸ್ರೇಲ್ ಕೂಡ.
ಎಷ್ಟು ವರ್ಷ ಹಿಂದಿನದನ್ನು ಕಲಿಸಬೇಕು? ನಿರ್ಧರಿಸುವವರು ಯಾರು ?
ಸಂವಿಧಾನ , ಸ್ತ್ರೀ ಹಕ್ಕುಗಳು, ಮಕ್ಕಳ ದೌರ್ಜನ್ಯ ವಿರೋಧಿ ಕಾಯಿದೆ ಗಳನ್ನು ಕೂಡ ಕಲಿಸಬೇಕು.
ನಮ್ಮ ದೇಶದಲ್ಲಿ ಸಂಚಾರ ಸುರಕ್ಷತೆ, ನಾಗರಿಕ ಹಕ್ಕುಗಳು , ಅರೆಸ್ಟ್ ಆದಾಗ ಏನು ಮಾಡಬೇಕು , ಅರೆಸ್ಟ್ ಆಗದೇ ಇರಲು ಹೇಗೆ ಬದುಕಬೇಕು ಎನ್ನುವುದು ಕೂಡ ಕಲಿಸಬೇಕು.
ಮೊಬೈಲ್ ಗೀಳು ಕೂಡ ಭಾಗವಾಗಿ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು.
ಯಾವುದೇ ವಿಷಯದ ಆಧಾರ ಯಾವುದು ಎಂದು ಪಠ್ಯದಲ್ಲಿ ಇರಬೇಕು. ಓದುವ ಉತ್ಸಾಹ ಮೂಡಿಸುವಂತಿರಬೇಕು.
ಶ್ರೀಲಂಕಾದ ಅರ್ಥಿಕ ಅವನತಿ ಕೂಡ ಪಾಠವಾಗಬೇಕು ಕೋವಿಡ್ ಕೇಡುಗಾಲ ಕೂಡ ದಾಖಲಾಗಬೇಕು,
ನರೇಂದ್ರ ಮೋದಿ, ಯೋಗಿ ಆದಿತ್ಯ ನಾಥ್, ಸದ್ಗುರು,
ನಿತಿಶ್ ಕುಮಾರ್ , ಮೇರಿ ಕೊಮ್, ಕಲ್ಪನಾ ಚಾವ್ಲಾ, ಲಂಕೇಶ್, ಸೂಕಿ, ಡಿ. ಆರ್ ನಾಗರಾಜ್ , ಹಲ್ದಾರ್ ನಾಗ್ ಕೂಡ ವಯಸ್ಸಿಗೆ ತಕ್ಕಂತ ಪಾಠದಲ್ಲಿ ಸೇರಬೇಕು.
ನಿರ್ಭಯಾ ಪ್ರಕರಣ ಕೂಡ ಸೇರಿಸಬೇಕು.
ಪ್ರಪಂಚವೇ ಭಾರತದತ್ತ ತಿರುಗಿ ನೋಡಿರುವಂತೆ ಆಗಿರುವ ಎಲ್ಲವೂ ಪಾಠ ಆಗಬೇಕು, ಕುತೂಹಲ ಮೂಡಬೇಕು , ಮುಂದಿನ ಓದಿಗೆ ದಿಕ್ಸೂಚಿ ಆಗಬೇಕು.
ಚರಿತ್ರೆ 100 ವರ್ಷ ಹಿಂದಿನದು ಆಗಬೇಕಿಲ್ಲ. 15 ವರ್ಷಗಳ ಹಿಂದಿನದು ಕೂಡ ಚರಿತ್ರೆಯೆ. ಕೂವಿಡ-19 ಕೂಡ ಚರಿತ್ರೆಯೆ.
ಯಾವುದೇ ಜಾತಿ, ಪಂಥ, ರಾಜಕೀಯ ಪಕ್ಷಗಳು
ಬೆಳೆಯುವ ಮಕ್ಕಳ ಬೌದ್ಧಿಕತೆಯನ್ನು ದಾಳ ಮಾಡಿಕೊಳ್ಳಬಾರದು.