Publicstory
ತುಮಕೂರು; ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿರುವ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್, ರೋಹಿತ್ ಚಕ್ರವರ್ತಿ ತಮಗೆ ವಹಿಸಿದ ಜವಾಬ್ದಾರಿಯನ್ನು ಮೀರಿ ಮಹನೀಯರ ಮತ್ತು ಈ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಕುವೆಂಪು, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಪೂಲೆ, ನಾರಾಯಣಗುರು, ವಾಲ್ಮೀಕಿ, ಕೆಂಪೇಗೌಡ ಮುಂತಾದ ದಾರ್ಶನೀಕರ ವಿಚಾರಧಾರೆಗಳನ್ನು ವಿಕೃತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಈ ದುಷ್ಕೃತ್ಯದ ಹೊಣೆಯನ್ನು ಹೊತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆ ನೀಡಬೇಕೆಂದು ಸರ್ಕಾರವನ್ನು ಕೆ.ದೊರೈರಾಜ್ ರವರು ಆಗ್ರಹಿಸಿದರು.
ನಂತರ ಮಾತನಾಡಿದ ಪಂಡಿತ್ ಜವಾಹರ್ ಡಾ.ಬಿ,ಆರ್ ಅಂಬೇಡ್ಕರ್ ರವರ ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲವನ್ನು ಒಳಗೊಳ್ಳುವ ತತ್ವವನ್ನು ರೋಹಿತ್ ಚಕ್ರತೀರ್ತ ಸಮಿತಿ ಬದಿಗಿಟ್ಟಂತೆ ಕಾಣುತ್ತಿದ್ದು ಇದೇ ಸರ್ಕಾರ ೨೦ ವರ್ಷಗಳು ಮುಂದುವರಿದರೇ ಗಾಂಧೀಜಿ ಚರಿತ್ರೆಯನ್ನೇ ಹೊಸಕಿಹಾಕುವ ಹುನ್ನಾರವನ್ನು ಹೊಂದಿದೆ ಎಂದರು.
ಕೂಡಲೇ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕೆಂದು ಕಾರ್ಮಿಕ ಸಂಘಟನೆಯ ಮುಖಂಡ ಸೈಯದ್ ಮುಜೀಬ್ ಒತ್ತಾಯಿಸಿದರು.
ನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಮಯ್ಯ ಪರಿಷ್ಕಣೆಯಿಂದಾಗಿ ಬೊಕ್ಕಸದ ಮೇಲಾಗಿರುವ ವೆಚ್ಚವನ್ನು ಶಿಕ್ಷಣ ಸಚಿವರು ಮತ್ತು ರೋಹಿತ್ ಚಕ್ರತೀರ್ಥರಿಂದಲೇ ಭರಿಸಬೇಕು ಎಂದು ಆಗ್ರಹಿಸಿದರು.
SFI ಜಿಲ್ಲಾದ್ಯಕ್ಷರಾದ ಶಿವಣ್ಣ. ಈ ಮಾತನಾಡಿ ತುಮಕೂರು ವಿ.ವಿ.ಯಲ್ಲೂ ಅಂಬೇಡ್ಕರ್ ಪಠ್ಯ ಕೈ ಬಿಡಲಾಗಿದ್ದು ಅದನ್ನು ಕೂಡಲೆ ಸೇರ್ಪಡೆ ಮಾಡಬೇಕು ಮತ್ತು ರಾಜ್ಯಸರ್ಕಾರ ಪಠ್ಯ ತಿರುಚುವ ಕೆಲಸ ಕೈ ಬಿಡಬೆಕು ಎಂದು ಒತ್ತಾಯಿಸಿದರು.
ಪಠ್ಯಪರಿಷ್ಕರಣೆಯಿಂದ ವಿದ್ಯಾರ್ಥಿಗಳ ಅರಿವಿನ ಮತ್ತು ಬೆಳವಣಿಗೆಯನ್ನು ಸಂಪೂರ್ಣವಾಗಿ ಸರ್ಕಾರ ನಿರ್ಲಕ್ಷಿಸಿದೆ ಬೇಗನೆ ಹಳೇ ಪಠ್ಯಪುಸ್ತಕ ಕ್ರಮಗಳನ್ನೇ ಎಲ್ಲಾ ಶಾಲಾ ಮಕ್ಕಳಿಗೆ ಸಿಗುವಂತಾಗಬೇಕು ಎಂದು ರಂಗದಾಮಯ್ಯ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ರೈತಸಂಘಟನೆಯ ಬಿ.ಉಮೇಶ್. ಕೊಳಗೇರಿ ಸಮಿತಿಯ ಅರುಣ್ ಮಾತನಾಡಿದರು. ಪ್ರತಿಭಟನೆ ನೇತೃತ್ವನ್ನು ಸುಬ್ರಮಣ್ಯ, ತಿರುಮಲಯ್ಯ, ವೆಂಕಟೇಶ್, ನಾಗರಾಜು ಹನುಮಂತರಾಯಿ,ರವೀಶ್.ಲೋಕೇಶ್ ರಫೀಕ್.ಗುಲ್ಜಾರ್.ಮಹಾಲಕ್ಷ್ಮಿ ಗಂಗಾಮ್ಮ. ಮುಂತಾದವರು ವಹಿಸಿದ್ದರು