Publicstory
ಶಿರಾ: ಗುರಿ ಮುಟ್ಟುವವರೆಗೂ ಕನಸುಗಳನ್ನು ತ್ಯಾಗ ಮಾಡದೆ ಮುನ್ನಡೆಯಿರಿ. ನೀವು ಇತರರಿಗೆ ಸ್ಪೂರ್ತಿಯಾಗಬೇಕು. ಸಮಾಜವನ್ನು ಕಟ್ಟುವ ಶಕ್ತಿಯಾಗಬೇಕು ಎಂದು ಯುವ ಬೆಂಗಳೂರು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಕಿರಣ್ ಸಾಗರ್ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸುಮಾರು 600 ವಿದ್ಯಾರ್ಥಿನಿಯರಿಗೆ ಮಂಗಳವಾರ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಸಧೃಡವಾದರೆ ಭಾರತ ಸಧೃಡವಾದಂತೆ ಎಂಬ ಉದ್ದೇಶದಿಂದ ಮಾಗಡಿ, ಉತ್ತರ ಕರ್ನಾಟಕ, ದಾವಣಗೆರೆ, ಮಧುಗಿರಿ, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಸುಮಾರು 250 ಶಾಲೆಗಳನ್ನು ದತ್ತು ಪಡೆದು ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಕಳೆದ 14 ವರ್ಷಗಳಿಂದ ಯುವ ಬೆಂಗಳೂರು ಟ್ರಸ್ಟ್ ಮಾಡುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳನ್ನು ಸಧೃಡ ಮಾಡುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಇಓ ಸಿದ್ದೇಶ್ವರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಸಫಲ ಫಲಿತಾಂಶ ಪಡೆದು ಶಾಲೆಗೆ ಹಾಗೂ ನಿಮ್ಮ ತಂದೆ ತಾಯಿಗಳಿಗೆ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಯಲುಸೀಮೆ ಪ್ರದೇಶವಾದ ಶಿರಾ ತಾಲೂಕಿನ ವಿದ್ಯಾರ್ಥಿಗಳಿಗೆ ಯುವ ಬೆಂಗಳೂರು ಟ್ರಸ್ಟ್ವತಿಯಿಂದ ನೋಟ್ ಬುಕ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಯುವ ಬೆಂಗಳೂರು ಟ್ರಸ್ಟ್ನ ಉಪಾಧ್ಯಕ್ಷ ಸುನಿಲ್.ಬಿ.ವಿ, ಪ್ರಭಾರಿ ಉಪ ಪ್ರಾಂಶುಪಾಲ ಪಿ.ಮಂಜಪ್ಪ, ಶಿಕ್ಷಕರುಗಳಾದ ವಿಜಯ್‌ಕುಮಾರ್, ಶಿವರಾಮ್.ಎಚ್, ಜಯಕುಂದ್ರಾಳ್, ರತ್ನಮ್ಮ, ಸುಜಾತ, ಅಂಬಿಕಾ, ಸವಿತ ಸೇರಿದಂತೆ ಹಲವರು ಹಾಜರಿದ್ದರು.