ತುರುವೇಕೆರೆ: ಪ್ರವೀಣ್ ನೆಟ್ಟಾರು ಹತ್ಯಕೋರರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸುವ ಮುನ್ನ ಭಯೋತ್ಪಾದಕ ಸಂಘಟನೆಗಳಾದ ಎಸ.ಡಿ.ಪಿ.ಐ. ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಶಾಸಕ ಮಸಾಲಾ ಜಯರಾಂ ಒತ್ತಾಯಿಸಿದರು.
ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಯುವ ಮೋರ್ಚ ಜಿಲ್ಲಾ ಅಧ್ಯಕ್ಷ ಪ್ರವೀಣ್‌ನೆಟ್ಟಾರು ಹತ್ಯೆ ಖಂಡಿಸಿ ಶನಿವಾರ ತಾಲೂಕು ಬಿಜೆಪಿ ಘಟಕ, ಭಜರಂಗದಳ ಹಾಗೂ ಹಿಂದು ಪರ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ವೇಳೆ ಅವರು ಮಾತನಾಡಿದರು.
ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಎಸ್.ಡಿ.ಪಿ.ಐ. ಹಾಗೂ ಪಿ.ಎಫ್.ಐ. ಸಂಘಟನೆಗಳ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು. ನಂತರ ನೂರಾರು ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ರೇಣುಕುಮಾರ್‌ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭಜರಂಗದಳದ ಮುಖ್ಯಸ್ಥ ನವೀನ್‌ಬಾಬು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾರಾಜಶೇಖರ್, ಸದಸ್ಯರಾದ ಚಿದಾನಂದ್, ಅಂಜನ್‌ಕುಮಾರ್ ಬಿಜೆಪಿ ಅಧ್ಯಕ್ಷ ಮುತ್ತಣ್ಣ, ಎಪಿಎಂಸಿ ಸದಸ್ಯ ಮಾಚೇನಹಳ್ಳಿ ಲೋಕೇಶ್, ವೆಂಕಟರಾಮಯ್ಯ, ಮುಖಂಡರಾದ ಎಡಗಿಹಳ್ಳಿವಿಶ್ವನಾಥ್, ರಾಮೇಗೌಡ, ವಿ.ಬಿ.ಸುರೇಶ್, ಬಿ.ಎಮ್.ಎಸ್.ಉಮೇಶ್, ಸೋಮಣ್ಣ, ಹರಿಕಾರನಹಳ್ಳ ಪ್ರಸಾದ್, ರೇಣುಕೇಶ್, ಗಣೇಶ್, ಜಯಂತ್, ಅಶ್ವಿನ್, ಬಸವೇಶ್, ಸೋಮೇನಹಳ್ಳಿ ಜಗಧೀಶ್, ಶೋಭಕುಮಾರ್, ಮುನಿಯೂರು ರಂಗಸ್ವಾಮಿ, ಬಸವರಾಜು, ಜಸ್ವಂತ್ ಶೇಟ್, ಬನಾರಮ್ ಶೇಟ್ ಇತರರು ಇದ್ದರು.