Tuesday, November 19, 2024
Google search engine
Homeಪೊಲಿಟಿಕಲ್ತುರುವೇಕೆರೆಯಲ್ಲಿ ರೆಡ್ ಅಲರ್ಟ್ ಘೋಷಣೆ: ಜಿಲ್ಲಾಧಿಕಾರಿ

ತುರುವೇಕೆರೆಯಲ್ಲಿ ರೆಡ್ ಅಲರ್ಟ್ ಘೋಷಣೆ: ಜಿಲ್ಲಾಧಿಕಾರಿ


ಮಳೆರಾಯನ ಅಬ್ಬರಕ್ಕೆ  ತುರುವೇಕೆರೆ ತತ್ತರ | ಅಸ್ತವ್ಯಸ್ತಗೊಂಡ ಜನಜೀವನ | ಸಾವಿರಾರು ಕೋಳಿ ಮರಿಗಳು ಜಲ ಸಮಾಧಿ |

ತುರುವೇಕೆರೆ : ತಾಲೂಕಿನ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ  ಹಿಂದೆಂದೂ ಕಂಡರಿಯದ , ಕೇಳರಿಯದ ರೀತಿಯಲ್ಲಿ ಸುರಿದ ಮಳೆರಾಯನ ಅಬ್ಬರಕ್ಕೆ  ವಾಸದ ಮನೆಗಳು ನೆಲಕಚ್ಚಿ ಹೋಗಿವೆ. ಅಲ್ಲದೆ ರಸ್ತೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು  ಮಾತ್ರವಲ್ಲದೇ ಜಮೀನುಗಳಿಗೆ ನೀರು ನುಗ್ಗಿರುವುದರಿಂದ ಜನತೆ ತತ್ತರ ಗೊಂಡಿದ್ದಾರೆ.

ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ  ರಾಷ್ಟ್ರೀಯ ಹೆದ್ದಾರಿ 150 ಎ ನಲ್ಲಿ ಜಲಪ್ರವಾಹವಾದ ಹಿನ್ನಲೆಯಲ್ಲಿ ವಿಶ್ವನಾಥಪುರ ಮಾಳೆ ಗೇಟ್ ಬಳಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.  ವಿಶ್ವನಾಥಪುರ ಮಾಳೆಯ ಬಳಿಯ ಪೆಟ್ರೋಲ್ ಬಂಕ್, ಡಾಬಾ, ಹಾಗೂ ಆಸುಪಾಸಿನ ಜಮೀನುಗಳಲ್ಲಿ, ಲೇ ಔಟ್‌ಗಳತ್ತ ಅಪಾರ ಪ್ರಮಾಣದ ನೀರು ನುಗ್ಗಿ ನಷ್ಟವುಂಟು ಮಾಡಿದೆ. ಪಟ್ಟಣದ ತಿಪಟೂರು ರಸ್ತೆಯಲ್ಲಿನ ಕೃಷ್ಣ ಚಿತ್ರಮಂದಿರ ಆವರಣ ಸಂಪೂರ್ಣ ಜಲಾವೃತಗೊಂಡು ಹಾವಾಳ ಕಡೆಯಿಂದ  ಬರುವ ವಾಹನಗಳು ಆತಂಕದಲ್ಲೇ ವಾತಾವರಣದಲ್ಲಿ ಪಟ್ಟಣವನ್ನು ಪ್ರವೇಶಿಸುವಂತಾಗಿತ್ತು. ಪಟ್ಟಣದ ಅಮಾನಿಕೆರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಕೋಡಿ ಮುಖಾಂತರ ಹರಿದು ಬಾಣಸಂದ್ರ ರಸ್ತೆಯ ಸೇತುವೆ ಕಣ್ಣುಗಳ ತುಂಬ ಹರಿಯುವ ಮೂಲಕ ಭಯದ ವಾತಾವರಣವನ್ನು ಸೃಷ್ಟಿಸಿತ್ತು.

ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಗ್ರಂಥಾಲಯಕ್ಕೂ ಸಹ ನೀರು ನುಗ್ಗಿ ನೀರು ಹೊರ ಹಾಕಲು ಪರದಾಡಬೇಕಾಯಿತು.  ಡಿ.ಕಲ್ಕೆರೆ ಗ್ರಾಮ ಕೋಳಿ ಫಾರಂವೊಂದಕ್ಕೆ  ಅಪಾರ ಪ್ರಮಾಣದ ನೀರು ನುಗ್ಗಿದ ಪರಿಣಾಮ  ಸಾವಿರಾರು ಕೋಳಿ ಮರಿಗಳು ಜಲಸಮಾಧಿಯಾಗಿವೆ. ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್‌ನ  ಕಾಲಭೈರವೇಶ್ವರ ಕಲ್ಪತರು ಆಶ್ರಮದ  ಆವರಣದಲ್ಲಿದ್ದ ವೃದ್ಧಾಶ್ರಮಕ್ಕೆ  ನೀರು ನುಗ್ಗಿ ಆತಂಕ ಸೃಷ್ಟಿಸಿದೆ. ನೀರಿನ ಹರಿವು ಹೆಚ್ಚಾದ ಹಿನ್ನಲೆಯಲ್ಲಿ ಗ್ರಾಮೀಣ ರಸ್ತೆಗಳ ಸ್ವರೂಪ ಕಳೆದುಕೊಂಡಿವೆ. ಮಲ್ಲೂರು ಹಾಗೂ ಸೂಳೆಕೆರೆ ಕೆರೆಗಳಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಗೊಂಡ ಹಿನ್ನಲೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ  ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕುಣಿಗಲ್ ತರುವೇಕೆರೆ ರೆಡ್ ಅಲರ್ಟ್: 

ತಾಲೂಕಿನ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಅಪಾರ ಮಳೆಯಿಂದ ನಷ್ಟ ಸಂಭವಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಎಸ್. ಪಾಟೀಲ್ ಅವರು ಶಾಸಕ ಮಸಾಲಜಯರಾಮ್ ಅವರೊಂದಿಗೆ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಕಳೆದ ಬುಧವಾರ ರಾತ್ರಿ  ತುರುವೇಕೆರೆ ಹಾಗೂ ಕುಣಿಗಲ್ ನಲ್ಲಿ  ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಸುರಿದ ಬಗ್ಗೆ ಮಳೆಮಾಪನ ಕೇಂದ್ರಗಳು ದಾಖಲಿಸಿದ್ದು, ರೆಡ್ ಅಲರ್ಟ್ ಪ್ರದೇಶಗಳೆಂದು ಗುರುತಿಸಲಾಗಿದೆ.  ಕೆರೆ ಕೋಡಿ ಪ್ರದೇಶಗಳಿಗೆ ಸನಿಹವಿರುವ ಶಾಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಅಗತ್ಯವಿದ್ದರೆ ಶಾಲೆಗೆ ಆಯಾ ಶಾಲೆಯ ಮುಖ್ಯ ಶಿಕ್ಷಕರುಗಳೇ  ಸುರಕ್ಷತಾ ಕ್ರಮವಾಗಿ ಶಾಲೆಗೆ ರಜೆ  ನೀಡಬಹುದಾಗಿದೆ.  ಆಯಾ ಪ್ರದೇಶಗಳ ಪರಿಸ್ಥಿಯನ್ನಾದರಿಸಿ ಶಾಸಕರುಗಳ ನಿರ್ದೇಶನದಂತೆ ಕಾಳಜಿ ಕೇಂದ್ರ ತೆರೆದು ಸಾರ್ವಜನಿಕರ ಹಿತ ಕಾಪಾಡಲು ಆದ್ಯತೆ ನೀಡುವುದು,  ಸರಕಾರಿ ನೌಕರರು ಕೇಂದ್ರ ಸ್ಥಾನದಲ್ಲಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಾಗರಿಕರು ಎಚ್ಚರಿಕೆಯಿಂದಿರಲು ಮನವಿ: ಮಸಾಲ ಜಯರಾಮ್

ಶಾಸಕ ಮಸಾಲ ಜಯರಾಮ್ ಮಾತನಾಡಿ, ತುರುವೇಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆರೆಕಟ್ಟೆಗಳು ಅಪಾಯದ ಸ್ಥಿತಿಯನ್ನು ಮೀರಿ ಹರಿಯುತ್ತಿವೆ. ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬಾರದು, ಮಳೆಯ ತೀವ್ರತೆ  ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಾಗರಿಕರು ಸುರಕ್ಷಿತ ಸ್ಥಳದಲ್ಲಿರಬೇಕು, ಸುರಕ್ಷತೆಗೆ ಧಕ್ಕೆ ಬಂದರೇ ಕೂಡಲೇ ತಾಲೂಕು ಆಡಳಿತ ಅಥವಾ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಮನವಿ ಮಾಡಿದರು.

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?