Publicstory/prajayoga
ತುಮಕೂರು: ಈಗಿರುವ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ, ಪಕ್ಷ ಯಾವ ನಿರ್ಧಾರಗಳನ್ನು ತೆಗದುಕೊಳ್ಳುತ್ತದೆಯೋ ಅದಕ್ಕೆ ನಾವೆಲ್ಲರೂ ಬದ್ಧ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಮುಖ್ಯಂಮತ್ರಿ ಬದಲಾವಣೆಯ ಕುರಿತು ಸುಳಿವು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದೆ. ಈ ಬಗ್ಗೆ ಅವರೇನೂ ಹೇಳಿಲ್ಲ. ನಾನು ಮುಖ್ಯಮಂತ್ರಿ ಯಾಗುತ್ತೇನೆ ಎಂದು ಅವರು ಏನನ್ನೂ ಹೇಳಿಲ್ಲ. ಅದೆಲ್ಲ ಮಾಧ್ಯಮದವರ ಸೃಷ್ಟಿ. ಅವರು ಬಂದ್ರೆ ಸಂತೋಷ. ಈಗಾಗಲೇ ಅವರು ಕೇಂದ್ರ ಸಚಿವರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಮಿತ್ ಶಾ ಬಳಿ 25 ನಿಮಿಷಗಳ ಕಾಲ ಮಾತನಾಡಿದರಂತೆ. ಅವರು ಮಾತನಾಡಿದ ಸಂದರ್ಭ ಯಾವುದಿತ್ತೋ ಗೊತ್ತಿಲ್ಲ ಎಂದರು.
ಬಿಜೆಪಿಯವರು ಎಂಎಲ್‌ಎ ಚುನಾವಣೆಗೆ ಆರು ತಿಂಗಳಿದ್ದಾಗಲೂ ಮುಖ್ಯಂಮತ್ರಿ ಬದಲಾವಣೆ ಮಾಡಿದ್ದಾರೆ. ಎಂಟು, ಹತ್ತು ತಿಂಗಳಿದ್ದಾಗಲೂ ಬದಲಾವಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕೇಂದ್ರಕ್ಕೆ ಬಿಟ್ಟ ವಿಷಯ.
ಸಚಿವ ಸಂಪುಟ ವಿಸ್ತರಣೆ ಆದರೆ ಆಗಸ್ಟ್ 15ರೊಳಗೆ ಆಗಬಹುದು. ಪಾರ್ಟಿ ಅಧಿಕಾರಕ್ಕೆ ಬರಬೇಕು ಎಂಬ ಸಂಕಲ್ಪ ಇರುವುದರಿಂದ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.