ತಿಪಟೂರು: ವಕೀಲರು ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು. ಬುದ್ಧಿವಂತಿಕೆ ಇರುವ ಕಡೆ ಭಯ ಇರುವುದಿಲ್ಲ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪುಷ್ಪಾವತಿ ಹೇಳಿದರು.
ತಿಪಟೂರು ತಾಲ್ಲೂಕು ವಕೀಲರ ಸಂಘ ವಕೀಲರಿಗಾಗಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಂದು ಘಟನೆಯನ್ನು ನಾನಾ ರೀತಿಯಲ್ಲಿ ನೋಡಲಾಗುತ್ತದೆ. ಈ ಜ್ಞಾನ ವಕೀಲರಿಗೂ ಇರಬೇಕು. ಇಂಥ ಕಾರ್ಯಾಗಾರಗಳು ವಕೀಲರು ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯವಾಗಲಿವೆ ಎಂದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಮಹಮ್ಮದ್ ಅರೀಫ್ ಮಾತನಾಡಿ, ವಕೀಲರು ಹಾಗೂ ನ್ಯಾಯಾಧೀಶರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದಂತೆ. ವಕೀಲರು ವಾದದ ವೇಳೆ ಶಿಕ್ಷಕರಾಗುತ್ತಾರೆ. ಜಡ್ಜ್ ಮೆಂಟ್ ನೀಡುವಾಗ ನ್ಯಾಯಾಧೀಶರು ಶಿಕ್ಷಕರಾಗುತ್ತಾರೆ ಎಂದರು.
ನ್ಯಾಯಾಧೀಶರಾದ ದೀಪಾ, ಚಂದನ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.
ವಕೀಲರು ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on