ಮಾತು: ಜಿ.ಎನ್.ಮೋಹನ್
ನೀ ಯಾರೋ ಏನೋ ಎಂತೋ
ಅಂತೂ ಪೋಣಿಸಿತು ಕಾಣದಾ ತಂತು..
ಎನ್ನುವ ಹಾಗೆ ನನಗೆ ಜೊತೆಯಾಗಿಬಿಟ್ಟವರು ಶ್ರೀನಿವಾಸ ಪ್ರಭು ಹಾಗೂ ರಂಜನಿ ಪ್ರಭು
ಶ್ರೀನಿವಾಸ ಪ್ರಭು ರಂಗಭೂಮಿಯವರು ಎನ್ನುವುದು ನಮಗೆಲ್ಲ ಹೆಮ್ಮೆ. ಚಲನಚಿತ್ರಗಳಲ್ಲಿ ಶ್ರೀನಿವಾಸ ಪ್ರಭು ಅವರ ಅಭಿನಯ, ಕಂಠ ಮೆಚ್ಚಿಕೊಂಡೇ ಬಂದಿದ್ದ ನಾನು ರಂಜನಿ ಅವರು ಬರೆವ ಕವಿತೆಗಳನ್ನು ಉಪಾಸನಾ ತಂಡ ಹಾಡುವುದು ಕೇಳಿ ಸೋತಿದ್ದೆ.
ಎಂ ಆರ್ ಕಮಲ ತಮ್ಮ ಮನೆಯ ಅಂಗಳದಲ್ಲಿ ನಡೆಸುತ್ತಿದ್ದ ತಿಂಗಳ ಮಾತುಕತೆಗೆ ಶ್ರೀನಿವಾಸ ಪ್ರಭು ಅವರನ್ನು ಕರೆದಿದ್ದರು. ಪ್ರಭು ತಮ್ಮ ರಂಗ ಬದುಕನ್ನು ಬಿಚ್ಚಿಡುತ್ತಾ ಹೋದರು. ವಾಹ್! ಎಂತಹ ಅಗಾಧ ಹಾಗೂ ಸ್ವಾರಸ್ಯಪೂರ್ಣ ಪಯಣ ಅದು!
ಆದನು ಕೇಳಿದವನೇ ‘ಅವಧಿ’ಗೆ ಅಂಕಣ ಬರೆಯುವಂತೆ ಬೆಂಬತ್ತಿದೆ. ಪರಿಣಾಮ ಅವಧಿಯಲ್ಲಿ ಈಗಲೂ ಪ್ರಕಟವಾಗುತ್ತಿರುವ ‘ಏನ ಹೇಳಲಿ ಪ್ರಭುವೇ? ಅಂಕಣ ಮಾಲೆ. ಇದರ ಬೆನ್ನಿಗೆ ರಂಜನಿ ಪ್ರಭು ಅವರ ‘ವೈಶಾಖದ ಹನಿಗಳು’ ಕೃತಿಯನ್ನು ಪ್ರಕಟಿಸಿದ್ದೂ ಆಯಿತು. ಮಗ ಅನಿರುದ್ಧ ಹಾಗೂ ಸೊಸೆ ಕಾಮ್ಯಾರ ಜೊತೆಗೂ ನಂಟು ಬೆಳೆಯಿತು.
ಅದೇ ಕಾರಣವಾಗಿ ಬೆಳೆದ ನಂಟು ‘ಅಂಟಿದ ನಂಟಿಗೆ ಕೊನೆ ಬಲ್ಲವರಾರು..’ ಎನ್ನುವ ಹಂತಕ್ಕೆ ತಂದು ನಿಲ್ಲಿಸಿದೆ.
ಶ್ರೀನಿವಾಸಪ್ರಭು ಹಾಗೂ ರಂಜನಿ ದಂಪತಿಗಳು ದೀರ್ಘ ಕಾಲದ ಅವಧಿಗೆ ಇಂಗ್ಲೆಂಡ್ ಗೆ ಹೊರಟು ನಿಂತಿದ್ದಾರೆ. ಪ್ರತಿಷ್ಟಿತ ಕಲಾವಿದರ ವೀಸಾದ ಅಡಿ. ಅಲ್ಲಿ ಕಲಾ ಚಟುವಟಿಕೆಗಳನ್ನು ನಡೆಸಲು ಅವರಿಗೆ ಸಮ್ಮತಿ ಸಿಕ್ಕಿದೆ. ಇದೇ ಡಿಸೆಂಬರ್ ನಲ್ಲಿ ನಾಟಕ ಪ್ರದರ್ಶನವನ್ನೂ ಹಮ್ಮಿಕೊಂಡಿದ್ದಾರೆ.
ಅವರ ಪ್ರೀತಿ ಉಂಡ ನಮಗೆ ಮನಸ್ಸು ಭಾರವಾದರೂ ಅವರಿಬ್ಬರ ಈ ಹೊಸ ಸಾಹಸಕ್ಕೆ ಯಶಸ್ಸು ಸಿಗಲಿ