ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ದಾಖಲಾತಿ ಪ್ರಾರಂಭ, ಹೊಸ ಕೋರ್ಸ್ ತೆರೆಯಲಾಗಿದೆ
ತುರುವೇಕೆರೆ: ಪಟ್ಟಣ ಸಮೀಪದ ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ 2024-25 ನೇ ಶೈಕ್ಷಣಿಕ ಸಾಲಿಗೆ ಪದವಿ ವಿಷಯ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಈ ಬಾರಿ ಮೂರು ಹೊಸ ಕೋರ್ಸ್ ತರಲಾಗಿದೆ ಎಂದು ಪ್ರಾಂಶುಪಾಲ ಎಂ.ಟಿ.ಈಶ್ವರಪ್ಪ ತಿಳಿಸಿದ್ದಾರೆ.
ಬಿ.ಸಿ.ಎ, ಬಿಎಸ್ ಡಬ್ಲ್ಯು,, ಬಿಎಸ್.ಸಿ ಕಂಪ್ಯೂಟರ್ ಸೈನ್ಸ್ ನಂತಹ ಹೊಸ ಪದವಿ ಕೋರ್ಸ್ ಗಳನ್ನು ತೆರೆಯಲಾಗಿದೆ. ಈ ಕಾಲೇಜಿನಲ್ಲಿ ನುರಿತ ಅಧ್ಯಾಪಕ ವರ್ಗ, ಸುಸಜ್ಜಿತವಾದ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಎನ್ ಎಸ್ ಎಸ್, ಯುವರೆಡ್ ಕ್ರಾಸ್ ಘಟಕ, ದಿ ಭಾರತ್ ಸ್ಕೌಟ್ಸ್ – ಗೈಡ್ಸ್ ಸಭಾಂಗಣ ಹಾಗೂ ಕ್ರೀಂಡಾಗಣಗಳನ್ನೊಳಗೊಂಡಿದೆ.
ಪ್ಲೇಸ್ ಮೆಂಟ್ ಮೂಲಕ ಉದ್ಯೋಗವಕಾಶ, ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಆಪ್ತ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಕಲಿಯುವ ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ ವಾತಾವರಣವಿದೆ ಎಂದು ಹೇಳಿದರು.
ಈ ಕಾಲೇಜು ತುಮಕೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿದೆ. ನ್ಯಾಕ್ ಕಮಿಟಿಯಿಂದ B+ ಪಡೆದಿದೆ. 2023-24 ನೇ ಸಾಲಿನಲ್ಲಿ ಕಾಲೇಜಿನ ಫಲಿತಾಂಶ ಶೇ 100 ಆಗಿದ್ದು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆಯೆನಿಸಿದೆ.
ಹಾಗೆಯೇ ಹಳೆಯ ಪದವಿ ಕೋರ್ಸುಗಳಾದಂತಹ ಬಿ.ಎ, ಬಿಕಾಂ, ಮತ್ತು ಬಿಬಿಎ ಐಚ್ಚಿಕ ಕೋರ್ಸ್ ಗಳು ಸಹ ಲಭ್ಯವಿದ್ದು, ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಲು ಕೋರಲಾಗಿದೆ. ಜೊತೆಗೆ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಹಾಸ್ಟೆಲ್ ಸೌಲಭ್ಯಗಳಿವೆ ಎಂದು ವಿವರಿಸಿದ್ದಾರೆ.