Friday, November 22, 2024
Google search engine
Homeತುಮಕೂರ್ ಲೈವ್ಹಕ್ಕಿಗಳಂತೆ ಹಾರಿದ ಮಕ್ಕಳ ಕಂಡಿರಾ!

ಹಕ್ಕಿಗಳಂತೆ ಹಾರಿದ ಮಕ್ಕಳ ಕಂಡಿರಾ!

ವಿಶ್ವ ಮಕ್ಕಳ ದಿನದ ಅಂಗವಾಗಿ ಗುರುವಾರ ತುಮಕೂರಿನ ಬಾಲಭವನದ ಆವರಣದಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು. ಅಲ್ಲಿ ಸೇರಿದ್ದ ಮಕ್ಕಳು ಹಕ್ಕಿಗಳಂತೆ ಹಾರಿದರು. ಹಾಡಿದರು. ಗೆಜ್ಜೆಯ ಕಟ್ಟಿ ಕುಣಿದರು.

ದಣಿವೇ ಇಲ್ಲದಂತೆ ಓಡಾಡಿದರು. ಅದು ಮಕ್ಕಳ ಕಾರ್ಯಕ್ರಮವಲ್ಲವೇ! ಆ ಕಾರ್ಯಕ್ರಮದ ಬಗ್ಗೆ ಆಹ್ವಾನಿತ ಗಣ್ಯರು ಏನು ಹೇಳಿದರು ನೋಡೋಣವೇ ? ಬನ್ನಿ ಹಾಗಾದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಮಾತುಗಳನ್ನು ಓದೋಣ.

ಮಕ್ಕಳ ಮನಸ್ಸಿಗೆ ನಿನ್ನಿಂದ ಮಾಡಲು ಸಾಧ್ಯ ಎಂಬ ಹುರುಪಿನ ಶಕ್ತಿ ತುಂಬಿ ಬೆನ್ನು ತಟ್ಟಬೇಕು. ಮಕ್ಕಳ ಮನಸ್ಸು ಬಲವಾಗಿ ಗುರಿಯ ದಾರಿಯ ಕಡೆಗೆ ನಡೆದು ಸಫಲತೆ ಕಾಣಲು ಸಾಧ್ಯವಾಗುತ್ತದೆ. ಮಕ್ಕಳ ಮುಗ್ದತೆ ದೈವತ್ವಕ್ಕೆ ಸಮಾನ. ಮಕ್ಕಳು ಬೆಳೆದಂತೆ ಮನಸ್ಸು ಪರಿವರ್ತನೆಯಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆಯು ಮಕ್ಕಳನ್ನು ಸಂಕುಚಿತವಾಗಿ ಬೆಳೆಸದೇ ವಿಕಾಸದ ಹಾದಿಯಲ್ಲಿ ಬೆಳೆಸಬೇಕು.

ಪ್ರತಿ ಮಕ್ಕಳಲ್ಲೂ ಸಾಮಥ್ರ್ಯವಿರುತ್ತದೆ ಪೋಷಕರು ಅದನ್ನರಿತು ಮಕ್ಕಳ ಇಷ್ಟಕ್ಕೆ ಪೂರಕವಾಗಿ ಅವರ ಇತಿಮಿತಿ ಅರಿತು ಆಸರೆ ನೀಡುತ್ತಾ ಬೆಳೆಸಬೇಕು. ಹಾಗೆಯೇ ಅನುಕರಣೆ ಬದುಕಿನ ಶ್ರೇಷ್ಠ ವರ್ತನೆ, ಮಕ್ಕಳು ಅನುಕರಣೆಯನ್ನು ಹೆಚ್ಚು ಮಾಡುತ್ತವೆ ಇದನ್ನು ಪೋಷಕರು ಅರಿತು ಆ ಮಕ್ಕಳ ಮುಂದೆ ಸರಿಯಾಗಿ ವರ್ತಿಸಬೇಕು. ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಕೆ ಮಾಡಿ ಮನಸ್ಸನ್ನು ಘಾಸಿಗೊಳಿಸದೇ, ಮಕ್ಕಳಿಗಿರುವ ಸಾಮಥ್ರ್ಯಕ್ಕೆ ಶಕ್ತಿ ತುಂಬಬೇಕು.

ಅಂಗವಿಕಲ ಮಕ್ಕಳು ದೇವರ ಶಾಪಕ್ಕೀಡಾಗಿರುವ ಮಕ್ಕಳು. ಇಂತಹ ಮಕ್ಕಳ ಅಶಕ್ತತೆಯನ್ನು ಪದೇ ಪದೇ ಎತ್ತಿ ಹಿಡಿಯದು ಒಳ್ಳೆಯ ಬೆಳವಣಿಗೆಯಲ್ಲ, ಬದಲಾಗಿ ಅಂತಹ ಮಕ್ಕಳಿಗೆ ಹುರುಪು ತುಂಬಬೇಕು. ಬೆಲೆಕಟ್ಟಲಾಗದ ವಸ್ತು ಸಂತೋಷ. ಮಕ್ಕಳು ಸಂತೋಷವನ್ನು ಅನುಭವಿಸಬೇಕು. ಮಕ್ಕಳಿಗೆ ಬೇರೆಯವರ ಹಂಗಿಲ್ಲದೇ ಬದುಕುವುದನ್ನು ಕಲಿಸಿ ಕೊಡುವುದೇ ನಿಜವಾದ ಶಿಕ್ಷಣ ಮತ್ತು ಶಕ್ತಿ – ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವರು

ಮಕ್ಕಳು ದೇಶದ ಭವಿಷ್ಯ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಪೋಷಣೆಯ ಮೂಲಕ ಅಸಾಧ್ಯವಾದುದು ಯಾವುದು ಇಲ್ಲ ಎಂಬ ಮನಸ್ಥಿತಿ ಮಕ್ಕಳಲ್ಲಿ ಹುಟ್ಟುಹಾಕಿ ಉತ್ತಮ ಜೀವನ ರೂಪಿಸಬೇಕು. ಆಧುನಿಕ ಜಗತ್ತಿನಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಕಡೆಗೆ ಮಕ್ಕಳ ಗಮನ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ಇದಕ್ಕೆ ಬದಲಾಗಿ ಮಕ್ಕಳಲ್ಲಿ ಶಿಸ್ತು, ಮನೆಯ ಹಿರಿಯರಿಗೆ, ತಂದೆತಾಯಿಗಳಿಗೆ ಗುರುಗಳಿಗೆ ಗೌರವ ನೀಡವಂತಹ ಮೌಲ್ಯಗಳನ್ನು ಕಲಿಸಬೇಕಾಗಿದೆ – ಡಾ. ರಾಕೇಶ್ ಕುಮಾರ್ ಜಿಲ್ಲಾಧಿಕಾರಿ.

ಮಕ್ಕಳ ದಿನಾಚರಣೆಯಲ್ಲಿ ಅಭಿವೃದ್ಧಿ ಸಾಮಾಜಿಕ ಸಂಸ್ಥೆ, ಸಂತ ಗ್ರಿಗೋರಿಯಸ್ ದಯಾಭವನ, ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮ, ಬಾಪೂಜಿ ವಿದ್ಯಾಸಂಸ್ಥೆ, ಶ್ರೀ ವೀರಭದ್ರಸ್ವಾಮಿ ವಿದ್ಯಾಸಂಸ್ಥೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ರಂಗಾಪುರದ ಪರದೇಶಿ ಕೇಂದ್ರ ಸ್ವಾಮೀಜಿ ವಿದ್ಯಾಪೀಠ ಮಕ್ಕಳು ಬಂದಿದ್ದರು.

ಸುಮಾರು 600 ಕ್ಕೂ ಹೆಚ್ಚು ಮಕ್ಕಳು ಬ್ಲೋಯಿಂಗ್ ಗೇಮ್ಸ್, ಮನರಂಜನೆಗೆ ದೇಸಿ ಆಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಭಾಗವಹಿಸಿ ತಾವು ನಕ್ಕು ಇತರರನ್ನು ಖುಷಿಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?