ತುಮಕೂರು; ಮಕ್ಕಳ ಉಳಿವು ಮತ್ತು ಬೆಳವಣಿಗೆಯಲ್ಲಿ ನವಜಾತ ಶಿಶುವಿನ ಆರೈಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಸ್ಪತ್ರೆ ಜಿಲ್ಲಾಮಟ್ಟದ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮ ಅಯೋಜಿಸಿದ್ದವು. ಕಾರ್ಯಕ್ರಮದಲ್ಲಿ ನಿವೃತ್ತ ಮಕ್ಕಳ ತಜ್ಞೆ ಡಾ. ಆಶಾ ಗರ್ಭಿಣಿಯರಿಗೆ ಸಲಹಗೆಳನ್ನು ನೀಡಿದರು.
ಗರ್ಭ ಧರಿಸಿದ ಹೆಣ್ಣುಮಕ್ಕಳು ಪೌಷ್ಠಿಕತೆ ಕಾಪಾಡಿಕೊಂಡು ಮಗುವಿನ ತೂಕ ಹೆಚ್ಚಿಸಿಕೊಳ್ಳಬೇಕು, ಮಗು ಹುಟ್ಟಿದ ನಂತರ ನವಜಾತ ಶಿಶುವಿನ ಆರೈಕೆಯ ಬಗ್ಗೆ ತಾಯಂದಿರಿಗೆ ವೈದ್ಯರು-ಶುಶ್ರೂಷಕಿಯರು ಅರಿವು ಮೂಡಿಸಬೇಕು. ಜಿಲ್ಲಾಸ್ಪತ್ರೆ ಉತ್ತಮ ಸೇವೆಗೆ ಹೆಸರಾಗಿದೆ. ಇಲ್ಲಿನ ತಾಯಂದಿರು ಹಾಗೂ ರೋಗಿಗಳು ವೈದ್ಯರು ಮತ್ತು ಆಸ್ಪತ್ರೆ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾರೆ.
ಎಲ್ಲಾ ವೈದ್ಯಕೀಯ ಸೌಲಭ್ಯವಿದ್ದರೂ ನವಜಾತ ಶಿಶುಗಳು ಹುಟ್ಟಿದ ಒಂದು ವರ್ಷದೊಳಗೆ ಸಾಯುವುದು ಇದೆ. ಅದರ ಪ್ರಮಾಣ ವರ್ಷಕ್ಕೆ ಶೇ.25ರಷ್ಟಿದೆ.
ಅಪಕ್ವತೆ ಮತ್ತು ಕಡಿಮೆತೂಕದ ಮಕ್ಕಳ ಜನನ, ಹುಟ್ಟಿದ ತಕ್ಷಣ ಅಳುವುದಿಲ್ಲದಿರುವುದು, ನಂಜಾಗುವುದು, ಐಇಎಂ ಕಾಯಿಲೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಇದಕ್ಕೆ ಒಳಸಂಬಂಧ. ರಕ್ತಸಂಬಂಧದಲ್ಲಿ ಮದುವೆಯಾಗುವುದು ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮಕೊಡುವುದು, ಸೂಕ್ತ ವಯಸ್ಸಿನಲ್ಲಿ ಗರ್ಭಧರಿಸದೇ ಇರುವುದು ಕಾರಣವಾಗಿದೆ.
ತಾಯಿ ಮತ್ತು ಮಗು ಇಬ್ಬರೂ ಅಪೌಷ್ಠಿಕತೆಗೆ ಗುರಿಯಾಗುತ್ತಿದ್ದಾರೆ ಅದಕ್ಕೆ ತಾಯಂದಿರು ಗರ್ಭಾವಸ್ಥೆಯಲ್ಲಿ ಉತ್ತಮ ಆಹಾರ ಸೇವಿಸಿ 12-15 ಕೆಜಿಯಷ್ಟು ತೂಕ ಹೆಚ್ಚಿಸಿಕೊಳ್ಳಬೇಕು ಈ ಬಗ್ಗೆ ಹೆಚ್ಚಿನ ಮಾಹಿತಿ ಕೊರತೆ ಇರುವುದರಿಂದ ಆಸ್ಪತ್ರೆಗಳಲ್ಲಿ ದಾದಿಯರು ಅರಿವು ಮೂಡಿಸಬೇಕು ಎಂದರು.
ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞೆ ಡಾ. ಮುಕ್ತಾಂಬ ಮಾತನಾಡಿ ನವಜಾತ ಶಿಶುವಿನ ಮೊದಲ ಒಂದು ತಿಂಗಳು ಉಷ್ಣತೆಯನ್ನು ಕಾಪಾಡಬೇಕು, ಮೊದಲ ಆರು ತಿಂಗಳು ಸ್ತನಪಾನ ಮಾಡಿಸಬೇಕು ನಂತರ ಪೂರಕ ಆಹಾರ ನೀಡಬೇಕು, ಬಾಣಂತಿ ತಾಯಿಯು ಸ್ವಚ್ಛತೆಯಿಂದ ಇರಬೇಕು.