ತುಮಕೂರು: ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಿಸಿ ಜನರು ಖುಷಿಪಟ್ಟರು.
ಇದಲ್ಲದೇ ಹಲವಾರು ಶಾಲಾ ಕಾಲೇಜುಗಳ ಬಳಿಯೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯರು, ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ರವಿಶಂಕರ್, ಸಿ.ಯತಿರಾಜು, ವಿಶ್ವನಾಥ್, ಕೆ.ಎನ್.ಉಮೇಶ್, ಪತ್ರಕರ್ತರಾದ ಸಾ.ಚಿ.ರಾಜ್ ಕುಮಾರ್, ಬೈರೇಶ್, ಉಪನ್ಯಾಸಕಿ ಶ್ವೇತರಾಣಿ ಇತರರು ಇದ್ದರು.
ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ಕೇಂದ್ರದ ಆವರಣದಲ್ಲಿ ದೂರದರ್ಶಕ, ಸೂಜಿರಂಧ್ರ ಬಿಂಬಗ್ರಾಹಿ, ಸನ್ ಪ್ರೊಜೆಕ್ಟರ್ ಹಾಗೂ ಸೋಲಾರ್ ಫಿಲ್ಟರ್ ಮೂಲಕ ಗ್ರಹಣವನ್ನು ವೀಕ್ಷಿಸಿದರು.
ಶೇಕಡ 89.1ರಷ್ಟು ಸೂರ್ಯನನ್ನು ಚಂದ್ರನ ಮರೆಮಾಡುವ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಿದರು.
ಬೆಳಗ್ಗೆ 8.06 ಗಂಟೆಗೆ ಗ್ರಹಣದ ಪ್ರಥಮ ಸ್ಪರ್ಶ ನಂತರ ಗರಿಷ್ಠ ಗ್ರಹಣವು 9.27ರಿಂದ 9.30ರವರೆಗೆ ಶೇಕಡ 89.1ರಷ್ಟು ಗ್ರಹಣ ಆವರಿಸಿಕೊಂಡಿತು.
3 ಗಂಟೆ 40 ಸೆಕೆಂಡ್‍ಗಳ ಕಾಲ ಸಂಭವಿಸಲಿರುವ ಇಂತಹ ಗ್ರಹಣವನ್ನು ಮತ್ತೊಮ್ಮೆ ನೋಡಲು 17ನೇ ಫೆಬ್ರವರಿ 2064ನೇ ಇಸವಿಯವರೆಗೆ ಕಾಯಬೇಕಾಗಿದೆ.