ತುಮಕೂರು: ಪ್ರತಿ ತಿಂಗಳು ನಾಲ್ಕನೇ ಶನಿವಾರ ವಕೀಲರಿಗೆ ರಜೆ ನೀಡಿ ಹೈಕೋರ್ಟ್ ಆದೇಶಿಸಿದೆ.
ರಾಜ್ಯ ಸರ್ಕಾರ ನಾಲ್ಕನೇ ಶನಿವಾರ ರಜೆ ಹಿಂಪಡೆದ ಬಳಿಕ ವಕೀಲರು ನಾಲ್ಕನೇ ಶನಿವಾರ ರಜೆ ಮುಂದುವರೆಸುವಂತೆ ಒತ್ತಾಯಿಸಿ ಹಲವು ಕಡೆ ಪ್ರತಿಭಟನೆ ನಡೆಸಿದ್ದರು. ಹೈಕೋರ್ಟ್ ಗೆ ನೀಡಿರುವಂತೆ ಕೆಳಗಿನ ನ್ಯಾಯಾಲಯಗಳಿಗೂ ನಾಲ್ಕನೆ ಶನಿವಾರ ರಜೆ ನೀಡುವಂತೆ ವಕೀಲರು ಆಯಾ ಸಂಘಗಲ ಮೂಲಕ ಮನವಿ ಸಲ್ಲಿಸಿದ್ದರು.
ವಕೀಲರಿಗೆ ನಾಲ್ಕನೇ ಶನಿವಾರ ರಜೆ ನೀಡುವ ಜತೆಗೆ ಕೋರ್ಟ್ ಕೆಲಸದ ಅವಧಿಯನ್ನು ಬದಲಾಯಿಸಿದೆ. ಇನ್ನು ಮುಂದೆ ಬೆಳಿಗ್ಗೆ 11ಕ್ಕೆ ಕಲಾಪಗಳು ಆರಂಭವಾಗಿ ಸಂಜೆ 5.45ರವರೆಗೂ ಕಲಾಪ ನಡೆಯಲಿವೆ. ಮಧ್ಯಾಹ್ನ ಊಟದ ಅವಧಿ 2 ರಿಂದ3 ರ ಬದಲಿಗೆ 2ರಿಂದ 2.45 ಆಗಿರಲಿದೆ.
ನಾಲ್ಕನೇ ಶನಿವಾರ ಕೋರ್ಟ್ ಗೆ ಅರ್ಧ ದಿವಸ ಕೆಲಸ ಅವಧಿ ನಿಗದಿಪಡಿಸಲಾಗಿದೆ. ನ್ಯಾಯಾಲಯದ ಕಲಾಪಗಳು ಮಾತ್ರ ನಡೆಯುವುದಿಲ್ಲ. ಕೋರ್ಟ್ ನ ಬೇರೆ ಕೆಲಸಗಳು, ನ್ಯಾಯಾದೀಶರು ಜೈಲು, ಪೊಲೀಸ್ ಠಾಣೆಗೆ ಭೇಟಿ ಮತ್ತಿತತ ಬೇರೆ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ರಿಜಿಸ್ಟರ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.