Publicstory.in
Tumkur: ಕೇಂದ್ರ ಸರ್ಕಾರ ಸಬ್ಸೀಡಿ ಯೋಜನೆಯಡಿ ನೀಡುವ ಅಕ್ಕಿ ಮತ್ತು ಗೋದಿಯನ್ನು ನಿಲ್ಲಿಸಿರುವುದರಿಂದ ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಬುಧವಾರದಿಂದ ಹಿಂದಿನಂತೆಯೇ ರಾಜ್ಯ ಸರ್ಕಾರವೇ ಅಕ್ಕಿಗೋದಿಯನ್ನು ನೀಡುತ್ತಿದೆ ಎಂದು ಮಹಿಳಾ ಮತ್ತು ಮಕ್ಲಳ ಕಲ್ಯಾಣ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.
ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋದಿ ನಿಲ್ಲಿಸಲಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದ ಹಿನ್ನೆಲೆಯಲ್ಲಿ ಇಂದು ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದರು.
ಕೇಂದ್ರ ಸರ್ಕಾರ ಸಬ್ಸೀಡಿ ಅಕ್ಕಿ ಮತ್ತು ಗೋದಿ ನಿಲ್ಲಿಸಿತು. ಹೀಗಾಗಿ ಸಿದ್ದಗಂಗಾ ಮಠಕ್ಕೆ ನೀಡುವುದರಲ್ಲಿ ವ್ಯತ್ಯಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ನನ್ನ ಮೇಲೆ ಗರಂ ವ್ಯಕ್ತಪಡಿಸಲಿಲ್ಲ. ಮಾಹಿತಿ ಕೇಳಿದರು. ವಿವರಿಸಿದೆ. ಹಾಗಾಗಿ ಸಣ್ಣ ವ್ಯತ್ಯಾಸವಾಗಿರುವುದು ಸತ್ಯ ಎಂದು ಹೇಳಿದರು.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಸಂಘ-ಸಂಸ್ಥೆಗಳಿಂದ ಪತ್ರ ಬಂದಿದ್ದ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟೆ. ರಾಜ್ಯ ಸರ್ಕಾರ ಅಕ್ಕಿ ಮಾತ್ರ ಕೊಡಬಹುದು ಎಂದು ಹೇಳಿದೆ. ಅದಕ್ಕೆ ಸಿಎಂ ಯಡಿಯೂರಪ್ಪನವರು ರಾಜ್ಯ ಸರ್ಕಾರವೇ ಅಕ್ಕಿ ಮತ್ತು ಗೋದಿಯನ್ನು ವಿತರಣೆ ಮಾಡುವುದನ್ನು ಮುಂದುವರಿಸಬೇಕು ಎಂದು ಹೇಳಿದರು.
360 ಮೆಟ್ರಿಕ್ ಟನ್ ಅಕ್ಕಿ ಬೇಕು
ಸಿದ್ದಗಂಗಾ ಮಠವೂ ಸೇರಿದಂತೆ 355 ಶಾಲೆಗಳಿಗೆ ಅಕ್ಕಿ ಮತ್ತು ಗೋದಿಯನ್ನು ಹಿಂದಿನಂತೆಯೇ ನೀಡಲಾಗುತ್ತಿದೆ. ಒಂದು ತಿಂಗಳಿಗೆ ಮಠಕ್ಕೆ 735 ಕ್ವಿಂಟಾಲ್ ಅಕ್ಕಿ ಮತ್ತು 365 ಕ್ವಿಂಟಾಲ್ ಗೋದಿಯನ್ನು ಉಚಿತವಾಗಿ ನೀಡಲಾಗುವುದು. 355 ಶಾಲೆಗಳಿಗೂ 360 ಮೆಟ್ರಿಕ್ ಟನ್ ಅಕ್ಕಿ ಮತ್ತು 160 ಮೆಟ್ರಿಕ್ ಟನ್ ಗೋದಿ ಬೇಕಾಗುತ್ತದೆ ಎಂದರು ಹೇಳಿದರು.
ಪಕ್ಷ ಸಂಘಟನೆ ಮಾಡಿದ್ದೇನೆ. ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಮೂರು ವರ್ಷ ಕೆಲಸ ನಿರ್ವಹಿಸಿದ್ದೇನೆ. ತಳಮಟ್ಟದಿಂದ ಬೆಳೆದು ಬಂದಿದ್ದೇನೆ. ಸಂಪುಟದಲ್ಲಿ ನಾನೊಬ್ಬಳೇ ಮಹಿಳೆ. ನನ್ನನ್ನು ಸಂಪುಟದಲ್ಲಿ ಮುಂದುವರಿಸುತ್ತಾರೆ. ಯಾವುದೇ ಆತಂಕ ಇಲ್ಲ. ಮುಂದುವರಿಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.