Publicstory.in
ಚಿಕ್ಕನಾಯಕನಹಳ್ಳಿ; ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳ ಬೇವಿನ ಮರಗಳ ಎದುರು ನೂರಾರು ಬೇವಿನ ಸೊಪ್ಪು ಸಿಗಿಸಿರುವ ಎಳನೀರ ಬುರುಡೆಗಳು ಕಾಣುತ್ತಿವೆ.
ತಾಲೂಕಿನ ಯಾವುದೇ ಹಳ್ಳಿಗೆ ಹೋದರೂ ಊರ ಹೊರಗಿನ ಬೇವಿನ ಮರದ ಬುಡದಲ್ಲಿ ಬೇವಿನ ಸೊಪ್ಪು ಮುಡಿದಿರುವ ಎಳನೀರು ಬುರುಡೆಗಳು ಕಂಡುಬರುತ್ತಿವೆ. ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಚಿತ್ರದುರ್ಗ ಚಿಕ್ಕ ಮಗಳೂರು ಹಾಗೂ ಹಾಸನ ಜಿಲ್ಲೆಗಳ ಹಳ್ಳಿಗಳಲ್ಲೂ ಇಂಥವೇ ದೃಶ್ಯ ಕಣ್ಣಿಗೆ ರಾಚುತ್ತದೆ.
ಕಾರ್ಟೂನ್ ಕಾರ್ನರ್: ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ
ಮಾರಿ ಮುನಿಸಿಕೊಂಡಿರುವ ಕಾರಣ ಕೋರೋನ ದಂತ ಮಾರಣಾಂತಿಕ ಕಾಯಿಲೆ ಬಂದಿದೆ. ಮಾರಿಗೆ ಶಾಂತಿ ಮಾಡಿ ಕರಗ ಪೂಜಿ ಊರಿನಿಂದ ಹೊರಗೆ ಕಳಿಸಿದರೆ ಊರಿಗೆ ಕೊರೋನ ಬರುವುದಿಲ್ಲ ಎಂಬುದು ಜನರ ನಂಬಿಕೆ. ಹೀಗಾಗಿ ಇಂಥ ಆಚರಣೆ ಮಾಡ ತೊಡಗಿದ್ದಾರೆ.
ಈ ಕುರಿತು 78 ವರ್ಷದ ವೃದ್ಧ ಗಂಗಣ್ಣ ಮಾತನಾಡಿ ಆಚರಣೆಗೆ ಅಜ್ಜಿ ಕಳಿಸುವುದು ಎನ್ನುತ್ತಾರೆ. ಮನುಷ್ಯನ ಉಪಟಳ ಹೆಚ್ಚಾದಾಗ ಭೂತಾಯಿ ಮಾರಿಯ ರೂಪ ತಾಳುತ್ತಾಳೆ. ಆಗ ಮಾರಣಾಂತಿಕ ಕಾಯಿಲೆಗಳು ಮನುಷ್ಯನಿಗೆ ಬರುತ್ತವೆ ಹಿಂದೆ ಪ್ಲೇಗ್ ಕಾಲರಾ ಲೂ ಬಂದಾಗ ಹೀಗೆ ಮಾಡಿದ್ದೆವು ಎಂದು ಹಿನ್ನೆಲೆಯನ್ನು ಬಿಚ್ಚಿಡುತ್ತಾರೆ.
ಊರಿನವರು ಒಟ್ಟಾಗಿ ಒಂದು ದಿನವನ್ನು ಮಾರಿ ಕಳಿಸಲು ನಿಗದಿ ಮಾಡುತ್ತಿದ್ದಾರೆ ಅಂದು ಪ್ರತಿ ಮನೆಯಿಂದ.ಕರಗ ಕಳಿಸಲಾಗುತ್ತದೆ. ವಾರದ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ನಿಗದಿ ಮಾಡಲಾಗುತ್ತಿದೆ. ಮೌಡ್ಯ ಆಚರಣೆಯ ಹೆಸರಿನಲ್ಲಿ ಹಳ್ಳಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಹಾಗೂ ಲಾಕ್ ಡೌನ್ ನಿಯಮಗಳು ಪಾಲನೆಯಾಗುತ್ತಿಲ್ಲ.
ಇದನ್ನು ಯಾರು ಹರಡಿರುವುದು ಎಂಬುದು ತಿಳಿಯುತ್ತಿಲ್ಲ. ಇಡೀ ಊರಿಗೆ ಊರೇ ಸೇರಿಕೊಂಡು ಈ ಆಚರಣೆ ಮಾಡುತ್ತಿರುವುದು ಮಾತ್ರ ಆತಂಕ ಉಂಟು ಮಾಡಿದೆ ಎನ್ನುತ್ತಾರೆ ಕೆಲವರು.