ತುಮಕೂರು:
ಈಗ ಪ್ರಪಂಚದಾದ್ಯಂತ ಎಲ್ಲಿ ನೋಡಿದ್ರು ಕೊರೊನಾ.
ಈ ಕೊರೊನಾ ವೈರಸ್ ದಿನೇ ದಿನೇ ದೊಡ್ಡ ಅವಾಂತರಗಳನ್ನು ಸೃಷ್ಠಿಸುತ್ತಿದೆ. ಕೂಲಿ ಕಾರ್ಮಿಕರು ಊಟವಿಲ್ಲದೆ ಸಾಯುತ್ತಿದ್ದಾರೆ. ತೆಲಂಗಾಣದಿಂದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲೇ 150 ಕಿ.ಮೀ ಪ್ರಯಾಣ ಮಾಡಿದ 12 ವರ್ಷದ ಬಾಲಕಿ ಮನೆ ತಲುಪುವ ಮುನ್ನವೇ ಸಾವಿನ ಕದ್ದ ತಟ್ಟಿದ್ದಾಳೆ.
ತನ್ನ ಕುಟುಂಬಕ್ಕೆ ನೆರವಾಗಲು ಮೆಣಸಿನಕಾಯಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜಾಮ್ಲೋ ಮಡ್ಕಾಮ್ ಎಂಬಾಕೆ ತನ್ನ ಹಳ್ಳಿ ತಲುಪಲು ಕೇವಲ ಒಂದು ಗಂಟೆಯಷ್ಟು ದೂರ ಕ್ರಮಿಸಬೇಕಿತ್ತು, ಅಷ್ಟರಲ್ಲೇ ಬಾಲಕಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ತೆಲಂಗಾಣದ ಗ್ರಾಮವೊಂದರ ಹೊಲದಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಇತರೆ 11 ಜನರೊಂದಿಗೆ ಹೆದ್ದಾರಿಗಳನ್ನು ತಪ್ಪಿಸಿ ಕಾಡುಗಳಲ್ಲೇ ತನ್ನ ತಂಡದೊಂದಿಗೆ ಮೂರು ದಿನ ನಿರಂತರವಾಗಿ ಪ್ರಯಾಣ ಮಾಡಿದ್ದಳು.
ಸುದಿರ್ಘ ಕಾಲ್ನಡಿಗೆಯಿಂದ ಆಕೆಯ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಆಗ ಮನೆಯಿಂದ 14 ಕಿ.ಮೀ ದೂರದಲ್ಲಿದ್ದಳು. ಕೊನೆಗೆ ಆಕೆಯನ್ನು ಆಂಬ್ಯುಲೆನ್ಸ್ ನಲ್ಲಿ ಮನೆಗೆ ಕೊಂಡೊಯ್ಯಲಾಗಿದೆ. ಕಳೆದ ಎರಡು ತಿಂಗಳಿಂದ ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದಳು. ಮೂರು ದಿನಗಳು ನಡೆದಿದ್ದಾಳೆ. ಇದರಿಂದಾಗಿ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಬಾಲಕಿಯ ತಂದೆ ಅಂಡೋರಾಂ ಮಡ್ಕಾಮ್ ತಿಳಿಸಿದ್ದಾರೆ.
ಬಾಲಕಿ ಮೂರು ದಿನಗಳ ಕಾಲ ಸರಿಯಾಗಿ ಆಹಾರ ಸೇವಿಸಿರಲಿಲ್ಲ ಎಂದು ತಂಡದಲ್ಲಿದ್ದವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಮೃತ ಬಾಲಕಿ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದೆ.
ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ದೂರ ಉಳಿದು ಉದ್ಯೋಗ ಮತ್ತು ಆಶ್ರಯವಿಲ್ಲದಿರುವ ಸಾವಿರಾರು ವಲಸೆ ಕಾರ್ಮಿಕರು ಹತಾಶೆಯಿಂದ ಕಾಲ್ನಡಿಗೆಯಲ್ಲಿಯೇ ಸುದೀರ್ಘ ಪ್ರಯಾಣ ಮಾಡೋ ಮೂಲಕ ಸಾವಿನ ದವಡೆ ಸೇರುತ್ತಿದ್ದಾರೆ. ಈ ಸಾವಿಗೆ ಹೊಣೆ ಯಾರು ಎಂಬುದನ್ನು ಈಗ ಪ್ರಶ್ನಿಸುವಂತಾಗಿದೆ.