ತುಮಕೂರು: ಮುನ್ನೂರು- ನಾಲ್ಕು ನೂರು ರೂಪಾಯಿ ಮೌಲ್ಯದ ಆಹಾರದ ಕಿಟ್ ಗಳನ್ನು ಜನರಿಗೆ ಕೊಡಿಸುತ್ತಾ ಎಲ್ಲೆಲ್ಲೊ ತಿರುಗಲು ಹೋಗುವ ಇಲ್ಲಿಯ ಶಾಸಕರು ಹಳ್ಳಿಗಳ ಕಡೆ ನೋಡಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು ಶಾಸಕ ಗೌರಶಂಕರ್ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಸಿರಿವರದಲ್ಲಿ ಶುಕ್ರವಾರ ಪಡಿತರ ಕಾರ್ಡ್ ಇಲ್ಲದವರಿಗೆ ಪಡಿತರ ಹಾಗೂ ಎಲ್ಲರಿಗೂ ಮಾಸ್ಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಪ್ಪೋ, ಸರಿಯೋ ಗೊತ್ತಿಲ್ಲ. ಇಲ್ಲಿಯ ಜನರು ಅವರನ್ನು ಶಾಸಕರಾಗಿ ಗೆಲ್ಲಿಸಿ ಬಿಟ್ಟಿದ್ದಾರೆ. ಆ ಬಗ್ಗೆ ಈಗ ನಾನು ಪ್ರಶ್ನೆ ಕೇಳುವುದಿಲ್ಲ. ಆದರೆ ಮೊದಲು ಇಲ್ಲಿನ ಹಳ್ಳಿಗಳ ಕಷ್ಟ ಕೇಳಬೇಕಾಗಿದೆ ಎಂದರು.
ಈ ಭಾಗದ ಕೆರೆಗಳಿಗೆ ಹೇಮಾವತಿ ನೀರನ್ನು ತುಂಬಿಸುವ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಅವರಿಗೆ ಸಹಾಯ ಮಾಡಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ ಸಣ್ಣಪುಟ್ಟ ಆಹಾರದ ಕಿಟ್ ಕೊಟ್ಟು ಕಾಲ ಕಳೆಯು ಬದಲಿಗೆ ನಿಜವಾದ ಜ್ವಲಂತ ಸಮಸ್ಯೆಗಳನ್ನು ಬಗ್ಗೆಹರಿಸುವ ಕಡೆ ಶಾಸಕನಾದವನು ಗಮನ ಹರಿಸಬೇಕು ಎಂದು ಹೇಳಿದರು.
ಸಹಾಯಹಸ್ತವನ್ನು ಬಡವರಿಗೆ ಬಡವರಿಗೆ. ಶ್ರೀಮಂತರಿಗೆ ಒಂದು ವೇಳೆ ಸಹಾಯ ಸಿಕ್ಕರೂ ವಾಪಸ್ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಕರೋನಾ ಸೋಂಕು ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಈ ಸೋಂಕು ಇನ್ನೂ ಮೂರು ನಾಕು ತಿಂಗಳು ಇರುವ ಸಾಧ್ಯತೆಯಿದೆ ಹೀಗಾಗಿ ಜನರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಕಣ್ಣು ಮೂಗು ಮುಟ್ಟಿ ಕೊಳ್ಳಬೇಡಿ. ಕಣ್ಣು, ಮೂಗಿನಿಂದ ವೈರಸ್ ಹರಡುತ್ತದೆ. ಕೈಗಳನ್ನು ಯಾವಾಗಲೂ ಶುದ್ಧವಾಗಿಟ್ಟುಕೊಳ್ಳಬೇಕು ಎಂದವರು ಸಲಹೆ ನೀಡಿದರು.
ಸುರೇಶ್ ಗೌಡರ ಅಭಿಮಾನಿ ಬಳಗದ ಅಧ್ಯಕ್ಷರು ಉಮೇಶ್ ಗೌಡ್ರು, ಜಿಲ್ಲಾ ಪಂಚಾಯತಿ ಸದಸ್ಯರಾದ ರಾಜೇಗೌಡ, ಸಿರಿವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪೂರ್ಣಿಮಾ, ಉಪಾಧ್ಯಕ್ಷರಾದ ನಾಗರಾಜ್, ಸದಸ್ಯರಾದ ರಂಗೇಗೌಡ, ಯಶೋಧಮ್ಮ ಸತ್ಯಪ್ಪ, ಮುಖಂಡರಾದ ರಾಮಣ್ಣ, ಮನೋಹರ್, ಬಸವರಾಜು, ಶಿವಣ್ಣ, ಬೆಟ್ಟೇಗೌಡ, ದಿನೇಶ್,ಗಂಗೋನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಂಗಮ್ಮ, ಮಾಜಿ ಅಧ್ಯಕ್ಷರಾದ ನಾರಾಯಣಪ್ಪ, ಸುಂದರಣ್ಣ, ಮಾಜಿ ಉಪಾಧ್ಯಕ್ಷರಾದ ನಾಗರಾಜು, ಮುಖಂಡರಾದ ರಮೇಶಣ್ಣ , ಪ್ರಕಾಶ್, ದಿನೇಶ್, ಗಂಗಣ್ಣ, ಕೃಷ್ಣಪ್ಪ, ನಾಗರಾಜ, ಹರೀಶ್, ಉಮೇಶ್ ಭಾಗವಹಿಸಿದ್ದರು.