Publicstory.in
ಗುಬ್ಬಿ: ತಾಲ್ಲೂಕು ಕ.ಸಾ.ಪ. ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 106 ನೇ ಸಂಸ್ಥಾಪನೆ ದಿನಾಚರಣೆಯನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕವಿ ಕೆ ಎಸ್. ನಿಸ್ಸಾರ್ ಅಹಮ್ಮದ್ ರವರಿಗೂ ಶ್ರದ್ದಾಂಜಲಿ ಸಲ್ಲಿಸಲಾಯಿತು.
ತುಂಬಾ ಸರಳವಾಗಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾದ ಶಾಂತರಾಜು ವಹಿಸಿದ್ದರು.
ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತ, ಸಾಹಿತ್ಯ ಪರಿಷತ್ತು ಬೆಳೆದುಬಂದ ದಾರಿಯನ್ನು ಸ್ಮರಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕನ್ನಡ ಭಾಷೆ ಮತ್ತು ಸಾಹಿತ್ಯ ಸಂರಕ್ಷಿಸಿ ಉತ್ತುಂಗಕ್ಕೇರಿಸುವ ಮಹತ್ವಕಾಂಕ್ಷೇ ಯನ್ನು ಹೊಂದಿ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿಸುವುದರ ಜೊತೆಗೆ ಅನೇಕ ನೀರಾವರಿ ಯೋಜನೆ ಗಳನ್ನು ಕೈಗೆತ್ತಿಕೊಂಡರು.ಇವರ ಆಲೋಚನೆಗಳಿಗೆ ಇಂಬಾಗಿ ನಿಂತವರು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ನವರು ಎಂದರು.
ಪರಿಷತ್ತಿನ ವತಿಯಿಂದ ಸಾಹಿತ್ಯದ ಕೆಲಸಗಳ ಜೊತೆ ಜಲಸಾಕ್ಷರತೆಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲು ಆಂದೋಲನವನ್ನು ಮಾಡೋಣ ಎಂದು ಕರೆಕೊಟ್ಟರು.
ನಿಸ್ಸಾರ್ ಅಹಮ್ಮದ್ ರವರ ಬಗ್ಗೆ ಮತನಾಡುತ್ತಾ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ ಹಾಗೂ ಮಾನವತಾವಾದಿ ಎಂದು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶೇಷಪ್ಪ ಮಾತನಾಡುತ್ತಾ, 1915 ರಿಂದ ಇಂದಿನವರೆಗೂ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ರೀತಿಯನ್ನು ಸ್ಮರಿಸುತ್ರಾ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ಭಾಷೆ, ಸಾಹಿತ್ಯ, ನೆಲ,ಜಲ ಗಳ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.
ಕೆ.ಎಸ್. ನಿಸ್ಸಾರ್ ಅಹಮ್ಮದ್ ರವರ ಬಗ್ಗೆ ಮಾತನಾಡುತ್ರ ಅವರಂತಹ ಶ್ರೇಷ್ಠ ಬರಹಗಾರ ರನ್ನು ಕಾಣಲು ಸಾಧ್ಯವಿಲ್ಲ, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಪರಿಣಿತಿಯನ್ನು ಹೊಂದಿದ್ದರು ಎಂದರು.
ತಾಲ್ಲೂಕು ಕ.ಸಾ.ಪ. ಕಾರ್ಯದರ್ಶಿ ಶ್ರೀಯುತ ಗಂಗಾದರಸ್ವಾಮಿ ಯವರು ಮಾತನಾಡುತ್ತಾ ನಾಲ್ವಡಿ ಕೃಷ್ಣರಾಜ ಒಡೆಯರ ಆಶಯಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯವನ್ನು ಎಲ್ಲರೂ ಜೊತೆಗೂಡಿ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ.ಸಾ.ಪ .ಪದಾಧಿಕಾರಿಗಳಾದ ರಾಜು, ಗುರುಪ್ರಸಾದ್, ಸಿ.ಆರ್.ಪಿ. ಜಗದೀಶ್ ಭಾಗವಹಿಸಿದ್ದರು