ಚಿತ್ರ: JP
Publicstory. in
ತುಮಕೂರು: ಆಹಾರ ಮತ್ತು ನಾಗರಿಕ ಸಚಿವ ಗೋಪಾಲಯ್ಯ ಅವರು ಇಂದು ತುಮಕೂರಿನಲ್ಲಿ ಅಕ್ಕಿ, ಬೇಳೆಯನ್ನು ಪರೀಕ್ಷೆ ಮಾಡಿದರು.
ಭೀಮಸಂದ್ರದ ಗೋದಾಮಿಗೆ ಭೇಟಿ ನೀಡಿದ ಅವರು ಚೀಲದಲ್ಲಿ ಅಕ್ಕಿ ಬೇಳೆ ಗೋಧಿ ಬಿಚ್ಚಿಸಿ ಕೈಯಲ್ಲಿ ಹಿಡಿದು ನೋಡಿದರು. ಮಾಜಿ ಶಾಸಕ ಬಿ ಸುರೇಶ್ ಗೌಡ ಇದ್ದರು.
ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸುತ್ತಿರುವ ಗೋಧಿ,ಬೇಳೆ, ಅಕ್ಕಿ ಮುಗ್ಗಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದರು.
ಯಾವುದೇ ಕಾರಣಕ್ಕೂ ಮುಗ್ಗು ಬಂದಿರುವ ಬೇಳೆ, ಅಕ್ಕಿಯನ್ನು ವಿತರಣೆ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ತಮ್ಮ ಕ್ಷೇತ್ರದ ಬಡ ಜನರಿಗೆ ವಿತರಿಸುತ್ತಿರುವ ಆಹಾರ ಕಿಟ್, ಮಾಸ್ಕ್ ಮತ್ತಿತರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು
ಮಾಜಿ ಶಾಸಕರ ಕೆಲಸವನ್ನು ಶ್ಲಾಘಿಸಿದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರು, ಪೊಲೀಸರು ಇತರರಿಗೆ ಹೂ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಗುಡನಹಳ್ಳಿ ಆಹಾರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಯಾವುದೇ ಕಾರಣಕ್ಕೂ ರೈತರಿಂದ, ಜನರಿಂದ ಹೆಚ್ಚು ಹಣ ಕೇಳದಂತೆ ಸೂಚಿಸಿದರು.
ಮುಖ್ಯಮಂತ್ರಿ ಅವರ ಬಳಿ ಮಾತನಾಡಿ ಹೆಚ್ಚಿನ ಕಮೀಷನ್ ಕೊಡಿಸುವ ಭರವಸೆಯನ್ನು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಇದೇ ವೇಳೆ ಸಚಿವರು ನೀಡಿದರು.