Publicstory. in
ತುಮಕೂರು:
ಜಿಲ್ಲೆಯಲ್ಲಿ ಶನಿವಾರ (ಮೇ 9) ರಂದು ಒಂದೇ ದಿನ 4 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಕೊರೊನಾ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ 11 ಕ್ಕೇರಿತು.
ಶಿರಾದಲ್ಲಿ ಒಬ್ಬರಿಗೆ ಹಾಗೂ ಪಾವಗಡದಲ್ಲಿ ಮೂವರಿಗೆ ತಗುಲಿದೆ. ಪಾವಗಡದಲ್ಲಿ ಇದೇ ಮೊದಲ ಸಲ ಸೋಂಕಿತರು ಕಂಡಿದ್ದಾರೆ.
ಶಿರಾದಲ್ಲಿ ಮೂವರು ಸೋಂಕಿತರಿದ್ದು, ಒಬ್ಬರು ಈಗಾಗಲೇ ಸಾವಿಗೀಡಾಗಿದ್ದಾರೆ. ಒಬ್ಬರು ಗುಣಮುಖರಾಗಿದ್ದಾರೆ.
ತುಮಕೂರು ಜಿಲ್ಲೆ ಪಾವಗಡಕ್ಕೆ ಅಹಮದಾ ಬಾದ್ ನಿಂದ ಬಂದಿದ್ದ 13 ಮಂದಿಯಲ್ಲಿ 3 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಬೆಂಗಳುರಿನ ಬಿಬಿಎಂಪಿ ಕಂಟೈನ್ ಮೆಂಟ್ ಜೋನ್ ಸಂಪರ್ಕದಲ್ಲಿದ್ದು ತುಮಕೂರು ಜಿಲ್ಲೆ ಶಿರಾ ಗೆ ಬಂದಿದ್ದ ವ್ಯಕ್ತಿಗೂ ಸೊಂಕು ದೃಢಪಟ್ಟಿದೆ.
ರಾಜ್ಯದಲ್ಲಿ 41 ಮಂದಿಗೆ ಕೋವಿಡ್ 19 ಸೊಂಕು ತಗುಲಿದೆ. ಶನಿವಾರ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ 794 ಕ್ಕೆ ತಲುಪಿದೆ.
794 ಮಂದಿ ಪೈಕಿ 30 ಮಂದಿ ಮರಣ ಹೊಂದಿದ್ದಾರೆ. 386 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಪೀಡಿತ 377 ಮಂದಿ ಸೋಂಕಿತರಲ್ಲಿ 371 ಮಂದಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. 6 ಮಂದಿಗೆ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರ ಸಂಜೆ 5 ರಿಂದ ಶನಿವಾರ ಸಂಜೆ 5 ರ ವೇಳೆಗೆ ದಾವಣಗೆರೆ ಜಿಲ್ಲೆಯಲ್ಲಿ 6, ಬೆಂಗಳೂರು ನಗರ ಜಿಲ್ಲೆಯಲ್ಲಿ 12, ವಿಜಯಪುರ 1, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 3, ಬೀದರ್ 3, ಭಟ್ಕಳ, ಉತ್ತರಕನ್ನಡ 8, ಭಂಟ್ವಾಳ ದಕ್ಷಿಣ ಕನ್ನಡ 3, ತುಮಕೂರು ಜಿಲ್ಲೆ 4 ಮಂದಿಗೆ ಸೋಂಕು ಇರುವುದಾಗಿ ದೃಢಪಟ್ಟಿದೆ.
ಇಂದು ಆಸ್ಪತ್ರೆಯಿಂದ ಬಿಡುಗಡೆಯಾದವರು: ಮೈಸೂರು 2, ತುಮಕೂರು 1, ಮಂಡ್ಯ 3, ಕಲಬುರಗಿ 2, ಬೆಂಗಳೂರು ನಗರ 2 ಒಟ್ಟು 10 ಮಂದಿ ಬಿಡುಗಡೆಯಾಗಿದ್ದಾರೆ.