Friday, November 22, 2024
Google search engine
Homeಜನಮನನಾವು ಯಾರ ಜಾತಿಯರನ್ನೆಲ್ಲ ಮುಟ್ಟಬೇಕು ...?

ನಾವು ಯಾರ ಜಾತಿಯರನ್ನೆಲ್ಲ ಮುಟ್ಟಬೇಕು …?

ಶಿಲ್ಪಾ ಎಂ.ತಾರೀಕಟ್ಟೆ


ಜಾತಿ ತಾರತಮ್ಯ ಮತ್ತು ಜಾತಿ ವ್ಯವಸ್ಥೆಯ ಮೂಢನಂಬಿಕೆಗಳು ಬದಲಾಗಬೇಕಿರುವುದು ಮತ್ತು ಸುಧಾರಿಸಬೇಕಾಗಿರುವುದು ಶಿಕ್ಷಣದಿಂದ.

ಜಾತಿ ವ್ಯವಸ್ಥೆ ಮತ್ತು ತಾರತಮ್ಯದಿಂದ ಮಕ್ಕಳ ಮೇಲೆ ಅದ್ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಯಾವ ಶಾಲೆಯಲ್ಲಾದರೂ ಒಂದು ಗಂಟೆ ಸೀಮಿತ ಅವಧಿಯನ್ನು ಮೀಸಲಾಗಿಸಿ ಅರಿವು ಮೂಡಿಸುತಿದ್ದಾರೆಯೆ ?

ಸಮಾಜ ಶಾಸ್ತ್ರ ದಲ್ಲಿ ಹೇಳಿದ್ದಾರೆ, ಜಾತಿ ವ್ಯವಸ್ಥೆ ಇತ್ತು, ಮೀಸಲಾತಿಗಳಿವೆ. ಇದನ್ನು ಹೊಗಲಾಡಿಸಲೂ ಆಗ ಪ್ರಯತ್ನ ಪಟ್ಟರು. ಇಷ್ಟು ಹೇಳಿ ಅದಕ್ಕೂಂದಿಷ್ಟು ವಿವರಣೆ ಬರೆಯಿಸಿ ಅಂಕಗಳಿಗೆ ಮೀಸಲು ಮಾಡುತ್ತಿದ್ದಾರೆ ಜಾತಿ ವ್ಯವಸ್ಥೆಯನ್ನು.

ಅಂಕಗಳಿಗೆ ಮೀಸಲಾಗದೆ ಇದು ಉತ್ತಮ ಸಮಾಜವಾಗಲೂ ಪರಿಣಾಮಕಾರಿಯಾಗಬೇಕಾಗಿದೆ.

ಪ್ರಾಥಮಿಕ ಶಾಲೆಗಳಿಂದ, ಕಾಲೇಜ್ ಮಟ್ಟದವರೆಗೂ ಜಾತಿ ವಿಷವನ್ನು ಗೊತ್ತಿದ್ದೂ ಗೊತ್ತಿಲ್ಲದೆಯೂ ಹೇಗೆಲ್ಲ ಬಿತ್ತುತ್ತಿದ್ದಾರೆ ಎಂದರೆ.

ಪ್ರಾಥಮಿಕ ಶಾಲೆಯ ಹಂತದಲ್ಲಿರುವಾಗ ಜಾತಿಯ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ನಮಗೆ ಮನೆಯಲ್ಲಿ ಕಲಿಸುತ್ತ ಹೋಗುತ್ತಾರೆ. ನಾವು ಈ ಜಾತಿ ಬೇರೆ ಜಾತಿಗಳು ಯಾವವು ಯಾರನೆಲ್ಲ ಮುಟ್ಟಬೇಕು ಮುಟ್ಟಬಾರದು ಊಟದ ಬಾಕ್ಸ್ ಮುಟ್ಟಿಸ ಬಾರದು, ಊಟ ಹಂಚಿ ತಿನ್ನಬಾರದು.

ಹಿರಿಯರ ತಪ್ಪು ಅನ್ನಲೂ ಆಗುವುದಿಲ್ಲ. ಅವರಿಗೂ ನಮಗೆ ಸಿಕ್ಕಿರುವ ಶಿಕ್ಷಣವೆ ಸಿಕ್ಕಿರುವುದು. ಶಾಲೆಯ ಶಿಕ್ಷಕರು ಕೂಡ ನೀನು ಯಾವ ಜಾತಿಗೆ ಸೇರಿದವರು ಎಂದು ಕೇಳುವ ಧ್ಯೆಯ೯ವನ್ನು ಮಾಡುತ್ತಾರೆ .

ಒಮ್ಮೆ ನಮ್ಮ ಶಾಲೆಯಿಂದ ಮಕ್ಕಳಿಗಾಗಿ ಸಿನಿಮಾ ವೀಕ್ಷಿಸಲು ಶಿಕ್ಷಕರು ಕರೆದುಕೊಂಡು ಹೋಗಿದ್ದರು. ಅದೇ ನಗರದಲ್ಲಿ ಅವರ ಮನೆ ಇದ್ದ ಕಾರಣ ಕೆಲವು ಮಕ್ಕಳನ್ನು ಮನೆಗೆ ಕರೆದರು, ನಾವು ಸಹಜವಾಗಿ ಖುಷಿ ಪಟ್ಟೆವು. ಅಷ್ಟರಲ್ಲಿ ನಮ್ಮ ಜೊತೆಯ ಇದ್ದ ಅಸ್ಪ್ರಶ್ಯ ಜಾತಿಗೆ ಸೇರಿದ ಮಕ್ಕಳು ನಾವು ಬರುತ್ತೀವಿ ಎನ್ನುತ್ತಿದ್ದಂತೆ ಅಷ್ಟಕ್ಕೆ ಸುಮ್ಮನೆ ನಿಂತ ನಮ್ಮ ಮೇಡಂ ಮನೆಗೆ ಕರೆದು ಕೊಂಡು ಹೋಗಲಿಲ್ಲ. ಮೇಡಂಗೆ ಗೊತ್ತಿಲ್ಲದೆ ಮಕ್ಕಳಲ್ಲಿ ಜಾತಿ ತಾರತಮ್ಯವನ್ನು ಬಿತ್ತಿದರು.

ನಾವು ಫ್ರೌಡಶಾಲೆ ಹಂತಕ್ಕೆ ಬಂದಾಗ ನನ್ನ ಅಸ್ಪ್ರಶ್ಯ ಜಾತಿಯ ಗೆಳತಿಯರಿಗೆಲ್ಲ ಕೊನೆ ಬೆಂಚೆ ಖಾಯಂ ಮಾಡಿಕೊಂಡಿದ್ದರು. ಕಾರಣ ಚಿಕ್ಕ ವಯ್ಯಸ್ಸಿಂದಾದ ತಾರತಮ್ಯಗಳು ಕೀಳರಿಮೆ ಮೂಡಿಸಿದ್ದವು .

ಯಾವುದೇ ಆಟದ ಅಂಗಳದಲ್ಲೂ ಅವರನ್ನು ಹುಡುಕಬೇಕಿತ್ತು. ಯಾವ ಆಟದಲ್ಲೂ ಅವರು ಇರುತ್ತಿರಲಿಲ್ಲ. ಯಾವುದೇ ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲೂ ಕೂಡ. ಅವಕಾಶದ ಕೊರತೆಯೂ ಅಥವಾ ಆಸಕ್ತಿಯ ಕೊರತೆಯೋ .ಆದರೆ ಶಿಕ್ಷಣ ಕಲಿಸಬೇಕಾಗಿತ್ತು ಮತ್ತು ಕಲ್ಪಿಸಬೇಕಾಗಿತ್ತು ಅವಕಾಶವನ್ನು ಆಸಕ್ತಿ ಯನ್ನೂ .

ನನ್ನ ಗೆಳತಿ ಯಾರೋ ಅವಳ ಬಾಕ್ಸ್ ಮುಟ್ಟಿದರೆಂದು ಅಳುತ್ತಿದ್ದಳು. ಮನೆಗೆ ಬಾಕ್ಸ್ ತೆಗೆದುಕೊಂಡು ಆಗುವುದಿಲ್ಲವೆಂದು. ಅಯ್ಯೋ, ಮನೇಲಿ ಹೇಳಬೇಡ ಅಷ್ಟೇ ಎಂದು ಸಮಾಧಾನಿಸಿದೆವು. ಆದರೆ ಅವಳು ಇಲ್ಲ, ನಮ್ಮ ಮನೆ ದೇವರಿಗೂ ಇದು ಆಗಲ್ಲವೆಂದು‌ ಹೇಳಿದಾಗ ನಾವು ಹೆದರಿದೆವು. ಕಾರಣ, ಅವಳಿಗೂ ನಮಗೂ ಸಮಾನ ಶಿಕ್ಷಣವೆ ಆಗಿತ್ತು.

ಇಂದು ನಾನು ಪ್ರಶ್ನೆ ಹಾಕಿಕೊಳ್ಳುತ್ತೇನೆ. ಇಂದು ಅವಳ ಮಕ್ಕಳಿಗೆ ಅವಳು ಎಂತಹ ಶಿಕ್ಷಣ ಕೊಟ್ಟಿರಬಹುದೆಂದು.

ಶಾಲೆಯಲ್ಲಿ ಸಮಾನತೆಯ ವಾತಾವರಣದ ಅನುವನ್ನು ಮಾಡಿಕೊಡಬಹುದಿತ್ತು. ಕೊನೆಯ ಬೆಂಚ್ ಅನ್ನು ಅವರಿಗೆ ಖಾಯಂಗೊಳಿಸದೆ ಎಲ್ಲರೊಟ್ಟಿಗೆ ಬೆರೆಯುವ ಅವಕಾಶ ಮಾಡಬಹುದಿತ್ತು. ಮತ್ತು ಸ್ಪರ್ಧೆ ಗಳ ಲ್ಲಿ ಸಮಾನ ಅವಕಾಶ ಕೊಟ್ಟು ಆತ್ಮವಿಶ್ವಾಸವನ್ನು ತುಂಬಬಹುದಿತ್ತು .ಮೇಡಂ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೊಗಬಹುದಿತ್ತು .

ಹೇಳುತ್ತಾರೆ ಈಗ ಸ್ವಲ್ಪ ಸುಧಾರಿಸಿದೆ ಎಂದು. ನಾನು ನಂಬುವುದಿಲ್ಲ. ಜಾತಿಗಳು ಆಗ ಕೇಳಿದರೆ ಗೊತ್ತಾಗುತಿತ್ತು. ಈಗ ಜಾತಿಗಳೆಲ್ಲ ಬ್ಯೆಕ್, ಕಾರ್,ಮನೆ ಹೆಸರುಗಳ ಮುಂದೆ ನಿಂತಿವೆ.

ದೇವಸ್ಥಾನ ದ ಮುಂದೆ ನಿಲ್ಲಬೇಕಾದ ಹೆಣ್ಣುಮಕ್ಕಳ ಕ್ಯೂ
ಗ್ರಂಥಾಲಯದ ಮುಂದೆ ನಿಂತರೆ ದೇಶ ಉದ್ದಾರ ಆಗುತ್ತದೆ; ಇದು ಅಂಬೇಡ್ಕರ್ ಹೇಳಿರುವ ಮಾತು. ಇದನ್ನು ನಾನು ಓದಿದ ಯಾವ ಶಾಲೆಯಲ್ಲೂ ಇದರ ವಿವರಣೆ ಸಿಗಲಿಲ್ಲ.

ಇಂತಹ ವಿವರಣೆ ಮತ್ತು ಇಂತಹ ಶಿಕ್ಷಣಗಳು ಸಿಗಬೇಕಿದೆ. ದೇವಸ್ಥಾನದಲ್ಲೂ ಜಾತಿಯ ತಾರತಮ್ಯ ಗಳು ಇವೆ. ಗ್ರಂಥಾಲಯಗಳಲ್ಲಿ ಇಲ್ಲ. ನಮ್ಮ ಮಕ್ಕಳನ್ನು ದೇವಸ್ಥಾನಕ್ಕೆ ಕಳುಹಿಸದೆ ಗ್ರಂಥಾಲಯಗಳಿಗೆ ಕಳುಹಿಸಬೇಕಾಗಿದೆ.

ಇದಕ್ಕೆಲ್ಲ ಮೂಲ ಸಮಸ್ಯೆ ಶಿಕ್ಷಣ .ಶಿಕ್ಷಣ ದಿಂದ ಬದಲಾಗದ ಹೊರತು ಇದು ಯಾರಿಂದಲೂ ಬದಲಾಗಲೂ ಸಾಧ್ಯ ವಿಲ್ಲ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?