Publicstory.in
ಬೆಂಗಳೂರು: ಅಲ್ಲಿ ಮಂದಸ್ಮಿತದ ನಗುವಿತ್ತು. ಸುರೇಶಗೌಡರ ಹೆಗಲು ತಟ್ಟಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೇ ಕಣ್ಣೋಟದಲ್ಲಿ ನೂರು ಸಂದೇಶಗಳನ್ನು ಸುರೇಶಗೌಡರಿಗೆ ರವಾನಿಸಿದರು.
ಇವರಿಬ್ಬರ ಆತ್ಮೀಯತೆ ಕಂಡು ಮತ್ತಷ್ಟು ಆರ್ದರಾದವರು ಸಂಸದ ಜಿ.ಎಸ್.ಬಸವರಾಜ್.
ಸುರೇಶಗೌಡ ಅವರು ಚುನಾವಣೆಯಲ್ಲಿ ಸೋತಾಗ ಬಸವರಾಜ್ ಮಾಜಿ ಸಂಸದರು.
ಬಸವರಾಜ್ ಅವರ ಪುತ್ರ, ಶಾಸಕ ಜ್ಯೋತಿ ಗಣೇಶ್ ಅವರಿಗೆ ಚುನಾವಣೆಯಲ್ಲಿ ತುಮಕೂರು ನಗರದ ಒಕ್ಕಲಿಗರು ಬಲವಾಗಿ ಹಿಂದೆ ನಿಂತ ಹಿಂದೆ ಸುರೇಶಗೌಡ ಅವರೂ ಇದ್ದರು. ತನ್ನ ಕ್ಷೇತ್ರದ ಚುನಾವಣೆ ಬಿಟ್ಟು ಜ್ಯೋತಿ ಗಣೇಶ್ ಪರ ಪ್ರಚಾರ ಮಾಡಿದವರು. ಇದೆಲ್ಲವೂ ನೆನಪಾದವರಂತೆ ಸಂಸದರು ಕ್ಷಣ ಮೌನವಾದರು.
ಮತ್ತೇ ಇಬ್ಬರ ನಾಯಕರನ್ನು ನೋಡಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಸುರೇಶಗೌಡ ಪಕ್ಷ ಕಟ್ಟುವುದರಲ್ಲಿ ನಿಸ್ಸೀಮರು. ಅವರೊಂದಿಗೆ ಇದ್ದು ಪಕ್ಷಕ್ಕೆ ಭದ್ರ ಬುನಾದಿಯಾಕುವ ಕನಸಿಗೆ ಕೈ ಜೋಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲು ಸಂಸದ ಜಿ.ಎಸ್.ಬಸವರಾಜ್ ಅವರೊಂದಿಗೆ ಮುಖ್ಯಮಂತ್ರಿ ಬಳಿ ತೆರಳಿ ಸುರೇಶಗೌಡ ಅರ್ಶೀವಾದ ಪಡೆದರು.
ಸುರೇಶಗೌಡ ಅವರನ್ನು ಅಭಿನಂದಿಸಿದ ಬಿಎಸ್ ವೈ, ಪಕ್ಷ ಬಲಪಡಿಸುವಂತೆ ಹೇಳಿದರು.