ತಿಪಟೂರು: ಸೀಲ್ ಡೌನ್ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಕಾಂಗ್ರೆಸ್ ಮುಖಂಡರಾದ ಸಿ.ಬಿ.ಶಶಿಧರ್ ವಿತರಿಸಿದರು.
ಕಳೆದ ವಾರ ತಿಪಟೂರು ನಗರದ ಸದಾಶಿವಪ್ಪನಗರದಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿದ್ದರ ಪರಿಣಾಮ ಇಡೀ ಆ ಭಾಗವನ್ನು ಸೀಲ್ ಡೌನ್ ಮಾಡಲಾಗಿದ್ದು ,ದಿನ ನಿತ್ಯದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ತುಂಬಾ ತೊಂದರೆಯಾಗಿತ್ತು.
ಆ ಭಾಗದ ಮುಖಂಡರ ಮನವಿಯಂತೆ ಈ ವ್ಯಾಪ್ತಿಯಲ್ಲಿ ವಾಸವಿರುವ 40ಕುಟುಂಬಗಳು ಮತ್ತು ನೆಹರೂ ನಗರದ 10ಕುಟುಂಬಗಳು ಸೇರಿ ಒಟ್ಟು 50ಕುಟುಂಬಗಳಿಗೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳ ಕಿಟ್ ಗಳನ್ನು ಜನಸ್ಪಂಧನ ಟ್ರಸ್ಟ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರಾದ ಸಿ.ಬಿ.ಶಶಿಧರ್ ರವರು ವಿತರಿಸಿದರು.
ಕಾಂಗ್ರೆಸ್ ನಗರ ಸಭಾ ಸದಸ್ಯರಾದ ಮಹೇಶ್ ,ಕಾಂಗ್ರೆಸ್ ಹಿರಿಯ ಮುಖಂಡರಾದ ಸಂಜೀವಯ್ಯಮತ್ತು ಶಿವಣ್ಣನವರ ಸಮ್ಮುಖದಲ್ಲಿ ವಿತರಿಸಲಾಯಿತು.