ಧಾರಂ
ಮಧುಗಿರಿ: ಇಲ್ಲಿನ ಆರ್ ಟಿಒ ಕಚೇರಿಯಲ್ಲಿ ಚಾಲನಾ ಪರವಾನಗಿ ನೀಡಬೇಕಾದರೆ ಕೊರೊನಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.
ಸೋಮವಾರ ಡ್ರೈವಿಂಗ್ ಪರೀಕ್ಷೆ ವೇಳೆ ಗೌಜು ಗದ್ದಲ ಕಂಡುಬಂತು. ಪರೀಕ್ಷಾರ್ಥಿಗಳು ಬಹಳಷ್ಟು ಮಂದಿ ಮಾಸ್ಕ್ ಕೂಡ ಧರಿಸಿರಲಿಲ್ಲ.
ಆರ್ ಟಿ ಒ ಅಧಿಕಾರಿ ಸಾಮಾಜಿಕ ಅಂತರ ಕಾಪಾಡಿ, ಕಾಪಾಡಿ ಎಂದು ಕೂಗಿ, ಕೂಗಿ ಸುಸ್ತಾದರೆ ಹೊರತು ಜನರು ಪಾಲಿಸಲಿಲ್ಲ.
ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಹೆಚ್ಚುತ್ತಿದೆ. ಹೀಗಾಗಿ ಕೊರೊನಾ ಕಳೆಯುವವರೆಗೂ ಚಾಲನ ಪರವಾನಗಿ ನೀಡುವುದನ್ನು ಜಿಲ್ಲಾಧಿಕಾರಿ ರದ್ದು ಮಾಡಬೇಕು. ಇಲ್ಲವೇ ವಾರದಲ್ಲಿ ಹತ್ತು ಜನರಿಗೆ ಮಾತ್ರ ಪರವಾನಗಿ ನೀಡುವಂತೆ ಸೂಚನೆ ನೀಡಬೇಕು. ಇಲ್ಲದಿದ್ದರೆ ಸೋಂಕು ಹರಡುವ ಕೇಂದ್ರವಾಗಿ ಆರ್ ಟಿ ಒ ಕಚೇರಿ ಆಗಲಿದೆ ಎಂದು ವಕೀಲ ನೇತ್ರಾನಂದ ಹೇಳಿದರು.