Publicstory. in
ತುಮಕೂರು: ನಗರದ ನೃಪತುಂಗ ಬಡಾವಣೆಯಲ್ಲಿ ಗಿಡ ನೆಡುವ ಮೂಲಕ ರೈತರ ಹುತಾತ್ಮ ದಿನಾಚರಣೆ ಆಚರಿಸಲಾಯಿತು.
ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ 1980 ಜುಲೈ 21 ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದಾಗ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶಗೊಂಡು ಸರಕಾರದ ವಿರುದ್ಧ ಸಿಡಿದೇಳುವ ಮೂಲಕ ಪೊಲೀಸರ ಗುಂಡೇಟಿಗೆ ಇಬ್ಬರು ರೈತರು ಬಲಿಯಾದ ಕರಾಳ ದಿನ. ಹೀಗಾಗಿ ಈ ದಿನ ಜುಲೈ 21ರೈತ ಹುತಾತ್ಮ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಹಸಿರು ಶಾಲು ಹಾಕಿಕೊಂಡು ವೇದಿಕೆಯಲ್ಲಿ ರೈತರ ಪಕ್ಷ ಎಂದು ಆಯಾ ಪಕ್ಷ ದ ಜನಪ್ರತಿನಿಧಿಗಳು ಭಾಷಣದ ಅಬ್ಬರ ನಿರ್ಮಿಸಿ,ಚಪ್ಪಾಳೆ ಗಿಟ್ಟಿಸಿ ಹೊರಟು ಹೋಗುತ್ತಾರೆ. ಆದರೆ ಭಾಷಣದಲ್ಲಿ ಕೊಟ್ಟ ಭರವಸೆಗಳು ಮಾತ್ರ ಈಡೇರಿಲ್ಲ ಎಂದರು.
ಉಪಾಧ್ಯಕ್ಷ ರಾದ ರಾಜಣ್ಣ ಮಾತನಾಡಿ ಒಡೆದಮನೆಯಾದ ಸಂಘಟನೆಗಳು
ಕಳೇದ 30 ವರ್ಷಗಳ ಹಿಂದಿದ್ದ ರೈತ ಶಕ್ತಿ ಇಂದಿಲ್ಲ. ರಾಜಕಾರಣಿಗಳ ಒಡೆದಾಳುವ ನೀತಿಗೆ ಬಲಿಯಾಗಿ ಹಲ್ಲಿಲ್ಲದ ಹಾವುಗಳಂತಾಗಿದೆ. ಸಂಘಟನೆಗಳು ಈಗಲಾದರೂ ಒಮ್ಮತದೊಂದಿಗೆ ಒಂದಾಗಬೇಕಾಗಿದೆ ಎಂದರು.
ಸಿದ್ದಪ್ಪ ಗೌಡಿಹಳ್ಳಿ ರವರು ಮಾತನಾಡಿ ಇಂದು ರೈತರ ಹುತಾತ್ಮರ ಸ್ಮರಣಾರ್ಥ ದಿನದಂದು ನಮ್ಮ ಗ್ರಾಮ, ತಾಲೂಕು, ಜಿಲ್ಲೆ ರಾಜ್ಯದ ರೈತರ ಹೋರಾಟದಲ್ಲಿ ಮಡಿದವರಿಗೆ ನಮ್ಮ ಅನಂತ ಅನಂತ ನಮನಗಳನ್ನು ಸಲ್ಲಿಸಿ, ಎಂದು ತಿಳಿಸಿದರು.
ಬ್ರಹ್ಮಸಂದ್ರ ಪುಟ್ಟರಾಜು ಮಾತನಾಡಿ ಪ್ರಕೃತಿ ಮನುಷ್ಯನ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ ಅಂತಹದರಲ್ಲಿ ಮನುಷ್ಯನ ದುರಾಸೆಗೆ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ನಾಡು ನಮ್ಮ ಕಣ್ಣೇದುರೆ ಸರ್ವನಾಶ ಆಗುತ್ತದೆ ಇದು ನಡೆಯಬಾರದೆಂದರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನು ಕುಮಾರ್ ಮಹಿಳಾ ಅಧ್ಯಕ್ಷರಾದ ನೇತ್ರಾವತಿ ಕೆಎಸ್ ಸಿದ್ದಪ್ಪ ಗೌಡಿಹಳ್ಳಿ ಆನಂದ್ ಚಂದ್ರಣ್ಣ ಇದ್ದರು.