Publicstory. in
ತುಮಕೂರು: ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಸೋಂಕಿಗೆ ಕಡಿವಾಣ ಹಾಕಿದಂತೆ ಇತ್ತು. ಆದರೆ ಈಚೆಗೆ ಹೆಚ್ಚುತ್ತಿರುವ ಕೊರೊನಾ ಸೋಂಕು ತಹಬದಿಗೆ ಬರುವಂತೆ ಕಾಣುತ್ತಿಲ್ಲ.
ಸೋಮವಾರ ಒಂದೇ 132 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೈ ಮೀರಿ ಹೋಗುತ್ತಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 1346ಕ್ಕೆ ಮುಟ್ಟಿದ್ದು, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗುಣಮುಖವಾಗುತ್ತಿರುವವರ ಸಂಖ್ಯೆ ಕೂಡ ಕಡಿಮೆ ಇದೆ. ಇದರಿಂದಾಗಿ ಸೋಂಕಿನ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಹೊಸ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ.
ಸೋಮವಾರ ತುಮಕೂರಿನಲ್ಲಿ 56, ಗುಬ್ಬಿಯಲ್ಲಿ 6, ಕುಣಿಗಲ್ ನಲ್ಲಿ 22 ಮಂದಿಗೆ ಸೋಂಕು ತಗುಲಿದೆ.
ಇನ್ನೂ, ಮಧುಗಿರಿಯಲ್ಲಿ 8, ಪಾವಗಡದಲ್ಲಿ5 ತುರುವೇಕೆರೆಯಲ್ಲಿ 13, ತಿಪಟೂರು 9 ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ 13 ಮಂದಿಗೆ ಸೋಂಕು ತಗುಲಿದೆ.
ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಮೃತರಾದವರ ಸಂಖ್ಯೆ 43ಕ್ಕೇರಿದೆ.