ತುರುವೇಕೆರೆ: ಗುಡ್ಡೇನಹಳ್ಳಿಯ ಬಗರ್ಹುಕುಂ ಸಾಗುವಳಿ ಭೂಮಿ ಮಂಜೂರು ಮಾಡಿಕೊಡಲು ಕೆಲವು ತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ಸರ್ಕಾರದ ಮಟ್ಟದಲ್ಲಿ ನಿವಾರಿಸಿ ರೈತರಿಗೆ ಶೀಘ್ರದಲ್ಲಿಯೇ ಜಮೀನು ಮಂಜೂರು ಮಾಡಿಕೊಡುವುದಾಗಿ ಶಾಸಕ ಮಸಾಲ ಜಯರಾಂ ಭರವಸೆ ನೀಡಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಗುಡ್ಡೇನಹಳ್ಳಿ ರೈತರು ಜಮೀನು ಮುಂಜೂರು ಮಾಡಿಕೊಡುವಂತೆ ಮಾಡಿದ ಮನವಿಯನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ
1998 ರಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. 15 ವರ್ಷಗಳಿಂದ ಶಾಸಕರಾಗಿದ್ದ ಎಂ.ಟಿ.ಕೃಷ್ಣಪ್ಪರು ಗುಡ್ಡೇನಹಳ್ಳಿಯ ರೈತರಿಗೆ ಜಮೀನನ್ನು ಮಂಜೂರು ಮಾಡಿಸಬಹುದಿತ್ತು.
ಕಡೆ ಸಮಯದಲ್ಲಿ ತಮಗೆ ಬೇಕಾದ ಇಬ್ಬರಿಗೆ ಮಾತ್ರ ಜಮೀನನ್ನು ಮಂಜೂರು ಮಾಡಿದ್ದು ನಿಜವಾದ ಅರ್ಹ ಫಲಾನುಭವಿಗಳಿಗೆ ಮೋಸ ಮಾಡಿ ಎರಡು ವರ್ಷ ಶಾಸಕರಾಗಿರುವ ತಮ್ಮನ್ನು ದೂರುತ್ತಿದ್ದಾರೆ ಇದು ಎಷ್ಟು ಸರಿ ಎಂಬುದು ಗ್ರಾಮದ ಜನರಿಗೆ ಎಲ್ಲ ತಿಳಿದಿದೆ.
ರೈತರು ಜಮೀನು ಮುಂಜೂರು ಮಾಡಿಕೊಡಲು ಮನವಿ ಮಾಡಿದ್ದು ಮುಂದಿನ ಬಗರ್ ಹುಕುಂ ಕಮಿಟಿಯಲ್ಲಿಟ್ಟು ಅರ್ಹ ರೈತರಿಗೆ ಜಮೀನು ಮಂಜೂರು ಮಾಡಿಕೊಡಲಾಗುವುದು ಎಂದರು.
ಗ್ರಾಮದ ಜನರೆ ನಮಗೆ ನ್ಯಾಯ ದೊರೆತಿದೆ ಎಂದು ಸುಮ್ಮನಾಗಿರುವಾಗ ಪ್ರತಿಭಟನೆ ಮಾಡುವ ಪ್ರಮೇಯವೇ ಇಲ್ಲ. ಆದರೂ ಪ್ರತಿಭಟನೆ ಮಾಡುತ್ತೇನೆಂದು ಹೇಳಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ.
ಗುಡ್ಡೇನಹಳ್ಳಿ ಗ್ರಾಮದ ರೈತರ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಅಸಮಧಾನ ವ್ಯಕ್ತಪಡಿಸಿದರು.
ಇದೇ ವೇಳೆ ರೈತರು ನೀಡಿದ ಮನವಿಯನ್ನು ತಹಶೀಲ್ದಾರ್ ಆರ್.ನಯಿಂಉನ್ನಿಸಾ ಅವರಿಗೆ ಹಸ್ತಾಂತರಿಸಿ ಕಮಿಟಿಯಲ್ಲಿ ಇಡುವಂತೆ ಸೂಚಿಸಿದರು.