Publicstory. in
ತುಮಕೂರು: ಕೋವಿಡ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಕಪೋಲ ಕಲ್ಪಿತ ಕತೆಗಳನ್ನು ಬಿಟ್ಟು ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹಿರಿಯ ತಜ್ಞ ವೈದ್ಯೆ, DSHC ಪ್ರಾಂಶುಪಾಲರಾದ ಡಾ.ಎಂ.ರಜನಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶಿರಾ, ಗುಬ್ಬಿ, ಕುಣಿಗಲ್ ತಾಲ್ಲೂಕುಗಳ ವೈದ್ಯರು, ವೈದ್ಯ ಸಿಬ್ಬಂದಿ, ಕಾರ್ಯಕರ್ತರಿಗೆ ಆಯೋಜಿಸಿಸ್ದ ಕೊರೊನ ಕುರಿತ ವೆಬ್ ನಾರ್ ನಲ್ಲಿ ಮಾತನಾಡಿದರು.
ಕೊರೊನಾ ಪರೀಕ್ಷೆ ನಾವೇಕೆ ಮಾಡಿಸಿಕೊಳ್ಳಬೇಕು. ನಮಗೇ ಯಾವುದೇ ಲಕ್ಷಣಗಳು ಇಲ್ಲ ಎಂದು ಹೇಳುವವರು ಇದ್ದಾರೆ. ಕೊರೊನಾ ಇದ್ದವರಿಗೆಲ್ಲ ಲಕ್ಷಣಗಳು ಇರಬೇಕು ಎಂದೇನಿಲ್ಲ ಎಂದರು.
ಕೊರೊನಾ ಒಂದು ಟೆಸ್ಟ್ ಮಾಡಿದರೆ ಟೆಸ್ಟ್ ಮಾಡಿದವರಿಗೆ ಸರ್ಕಾರ ದುಡ್ಟು ಕೊಡುತ್ತದೆ. ಹಾಗಾಗಿಯೇ ಎಲ್ಲೆಂದೆಲ್ಲಿ ಟೆಸ್ಟ್ ಮಾಡ್ತಾ ಇದ್ದಾರೆ ಎಂದು ವಾಟ್ಸ್ ಆಪ್ ಗಳಲ್ಲಿ ಬರುವ ಕಪೋಲ ಕಲ್ಪಿತ ಕತೆಗಳನ್ನು ನಂಬಬೇಡಿ. ಟೆಸ್ಟ್ ಮಾಡುವುರಿಂದ ಸರ್ಕಾರದ ದುಡ್ಡೇ ಖರ್ಚಾಗುತ್ತದೆ. ಖಾಸಗಿಯವರು ಒಂದು ಟೆಸ್ಟ್ ಗೆ ನಾಲ್ಕರಿಂದ ಐದು ಸಾವಿರ ತಗೊಳ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.
ಕೊರೊನಾ ಪರೀಕ್ಷೆಯಲ್ಲಿ ನಾಲ್ಕೈದು ವಿಧಗಳಿವೆ. ವೈರಸ್ ಕಡಿಮೆ ಇರುವವರಿಗೆ ಮೂಗಿನ ದ್ರವ ತೆಗೆದು ಟೆಸ್ಟ್ ಮಾಡಿದಾಗ ನೆಗಟಿವ್ ಬರಬಹುದು. ಗಂಟಲಿನ ದ್ರವ ತೆಗೆದಾಗ ಪಾಸಿಟಿವ್ ಬರಬಹುದು. ಇದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಒಮ್ಮೆ ಪಾಸಿಟಿವ್ ಬರುತ್ತದೆ, ಇನ್ನೊ
ಮ್ಮೆ ನೆಗಟಿವ್ ಬರ್ತದೆ ಎಂದು ಗುಲ್ಲೆಬ್ಬಿಸಬೇಡಿ. ನೆಗಟಿವ್ ಬಂದವರಿಗೆ ಆರ್ ಟಿಪಿಎಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬರಬಾರದು ಎಂದೇನಿಲ್ಲ. ಆಂಟಿಜನ್ ಪರೀಕ್ಷೆ ಮನೆ ಬಾಗಿಲಿಗೆ ಒಂದು ಮಾಡಬಹುದು. ಹೀಗಾಗಿ ಎಲ್ಲರು ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.
ಕೋವಿಡ್ ಬಗೆಗಿನ ಈ ತಪ್ಪು ಕಲ್ಪನೆಗಳೇ ರೋಗ ತಡೆಯಲು ಸಮಸ್ಯೆಯಾಗುತ್ತದೆ. ನಿಮ್ಮಿಂದಾಗಿ ಮನೆಯ ಮಕ್ಕಳಿಗೆ, ತಂದೆ ತಾಯಿಗಳಿಗೆ ಸಮಸ್ಯೆ ಯಾಗಬಾರದೆಂದರೆ ಮೊದಲು ಟೆಸ್ಟ್ ಮಾಡಿಸಿಕೊಳ್ಳಿ ಎಂದರು.
ನೀವು ನೀವುಗಳಲ್ಲೇ ನಿರ್ಧಾರಕ್ಕೆ ಬರಬೇಡಿ. ಆಶಾ ಕಾರ್ಯಕರ್ತೆಯರು ಜನರು ಟೆಸ್ಟ್ ಮಾಡಿಸಿಕೊಳ್ಳಲು ಮನವೊಲಿಸಬೇಕು. ವಿಷಯವನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸಬೇಕು ಎಂದರು.