Publicstory
ಚಿಕ್ಕನಾಯಕನಹಳ್ಳಿ: ಪಟ್ಟಣದ ದಕ್ಕಲಿಗರ ಕಾಲೋನಿಯಲ್ಲಿ ಕರ್ನಾಟಕ
ಸ್ಪೈರೋಸ್ ಸಂಸ್ಥೆವತಿಯಿಂದ ದಕ್ಕಲಿಗರ ಮಕ್ಕಳಿಗೆ ನೋಟ್ ಬುಕ್, ಪೆನ್, ಬೆಡ್ ಶೀಟ್ ಹಾಗೂ ದಿನಸಿ ಕಿಟ್ ನೀಡಿ ಮಾತನಾಡಿದರು.
ಅಲೆಮಾರಿಗಳ ಮಕ್ಕಳು ಶಿಕ್ಷಣ ಪಡೆಯಿರಿ, ಶಿಕ್ಷಣದಿಂದಲೇ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ಸ್ಪೈರೋಸ್ ಸಂಸ್ಥೆಯ ಸಂಚಾಲಕ ಓಬಳೇಶ್ ಹೇಳಿದರು.
ಪುರಸಭಾ ಸದಸ್ಯೆ ಉಮಾಪರಮೇಶ್ ಮಾತನಾಡಿ ದಕ್ಕಲಿಗರ ಕಾಲೋನಿಯಲ್ಲಿ ಬೀದಿದೀಪ ಶೌಚಾಲಯ ಸರಿಯಿಲ್ಲ ಎಂದರು.
ಕಸವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ನಮಗೆ ಅಧಿಕಾರ ಇನ್ನು ದೊರೆತಿಲ್ಲ. ಅಧಿಕಾರ ಬಂದ ಕೂಡಲೇ ಇಲ್ಲಿನ ಸಮಸ್ಯೆ ಬಗೆಹರಿಸುತ್ತೇವೆ ಮತ್ತು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ತಪ್ಪಿಸಬೇಡಿ ಎಂದರು.
ಈ ಕಾರ್ಯಕ್ರಮದಲ್ಲಿ
ಡಾ.ದಿಲೀಪ್ ಕುಮಾರ್, ಶಾಂತಕುಮಾರ್ ಸೇರಿದಂತೆ ಹಲವರಿದ್ದರು.