ತುಮಕೂರು
ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ. ೬೫ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ ಅವರು ಉದ್ಘಾಟಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕನ್ನಡ ನಾಡು ನುಡಿಯನ್ನು ಪ್ರೀತಿಸಬೇಕು. ನಮ್ಮ ಭಾಷೆ ನಮ್ಮ ಪ್ರತಿಷ್ಠೆ ಅದರ ಉಳಿವಿಗಾಗಿ ಕನ್ನಡಿಗರೆಲ್ಲರೂ ಮಾತೃಭಾಷೆಯನ್ನು ಮಾತನಾಡಬೇಕು ಎಂದರು.
ನಂತರ ಕನ್ನಡ ಉಪನ್ಯಾಸಕಿಯಾದ ಡಾ. ಶ್ವೇತಾರಾಣಿ ಹೆಚ್ ಎಲ್ಲಾ ಉಪನ್ಯಾಸಕರಿಗೂ ಕನ್ನಡ ಉಳಿಸುವ ಬಳಸುವ ಪ್ರತಿಜ್ಞಾವಿಧಿ ಬೋಧಿಸಿದರು.
ಕನ್ನಡ ಉಪನ್ಯಾಸಕರಾದ ಡಾ. ವಾಸುದೇವ ಬಿ ಎ ಮಾತನಾಡಿ ಕನ್ನಡ ಭಾಷೆ ಸಂಸ್ಕೃತಿ ಜಗತ್ತಿನೆಲ್ಲೆಡೆ ಪಸರಿಸಬೇಕು. ಭಾಷೆ ನಮ್ಮ ಮನೆ ಮನಗಳಲ್ಲಿ ಬೆಳಗುವ ಮೂಲಕ ತಾಯಿ ಭುವನೇಶ್ವರಿಯ ಋಣ ತೀರಿಬೇಕು ಎಂದರು.
ಉಪನ್ಯಾಸಕರಾದ ಸಿದ್ದಲಿಂಗಯ್ಯ ಅವರು ಕನ್ನಡ ಭಾಷೆ ನಾಡು ನುಡಿಗಾಗಿ ಶ್ರಮಿಸಿದ ಆಲೂರು ವೆಂಕಟರಾಯರು, ಹರ್ಡೇಕರ್ ಮಂಜಪ್ಪ ಹಾಗೂ ಮುದವೀಡರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಕರಾದ ಗಂಗಾಧರ್, ಶಶಿಕುಮಾರ್ ವೈ ಬಿ, ಅನಿತಾ, ಹರೀಶ್,ಲಾವಣ್ಯ, ಜಿ ಎಂ, ಮತ್ತಿತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.