Publicstory. in
ತುಮಕೂರು: ಯುವಜನತೆ ಮೊಬೈಲ್ ಗೀಳು ಬಿಟ್ಟು ವಿದ್ಯಾರ್ಥಿ ಜೀವನದಲ್ಲಿ ಓದುವ ಹವ್ಯಾಸ ರೂಡಿಸಿಕೊಂಡಾಗ ಮಾತ್ರ ಮಾನಸಿಕವಾಗಿ ಸಧೃಡವಾಗಲು ಸಾಧ್ಯ ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಕರಿಯಣ್ಣ ಅಭಿಪ್ರಾಯಪಟ್ಟರು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಂಥಾಲಯ ಗಳು ಜ್ಞಾನ ವಿಕಾಸದ ತಾಣಗಳಾಗಿವೆ. ಪ್ರಸ್ತುತ ಡಿಜಿಟಲ್ ಗ್ರಂಥಾಲಯಗಳಾಗಿದ್ದು ಎಲ್ಲಾ ಓದುವ ಸಾಮಗ್ರಿಗಳು ಕುಳಿತಲ್ಲೆ ಸಿಗುತ್ತಿವೆ ಎಂದರು.
ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಗ್ರಂಥಾಲಯ ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಪೂರಕವಾದ ವಾತಾವರಣವನ್ನು ಸೃಷ್ಟಿಸಿದೆ. ಓದುವ ಹವ್ಯಾಸ ಮನುಷ್ಯನನ್ನು ವಿಕಾಸ ಮಾಡುವುದಲ್ಲದೆ ವಿಮರ್ಶೆಗೂ ಒಡ್ಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಬಸವರಾಜು, ವಿದ್ಯಾರ್ಥಿಗಳಾದ ಎಂ.ಸಿ. ಗಿರೀಶ್, ಹೂವಿನಕಟ್ಟೆ ಕೃಷ್ಣ, ಬಿ.ಟಿ. ಹರೀಶ್ ಇನ್ನಿತರರು ಹಾಜರಿದ್ದರು.